ಪೇಸ್ ಜ್ಞಾನ ನಗರ ಕೊಣಾಜೆಯಲ್ಲಿ ರಾಷ್ಟ್ರೀಯ ಮಟ್ಟದ ಉತ್ಸವ ಮತ್ತು ಆಹಾರ ಮೇಳ ಕ್ಯಾಂಪಸ್ ಕ್ರೋಮಾ 2025.

ಮಂಗಳೂರು: ಪೇಸ್ ಗ್ರೂಪ್‌ನ ಬೆಳ್ಳಿ, ಹಬ್ಬ ಪೇಸ್ ಸಿಲ್ಕ್ಯೋರಾ 2025 ರ ಇದರ ಅಂಗವಾಗಿ, ಪಿ.ಎ. ಎಜುಕೇಷನಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿ ಎ ಪ್ರಥಮ ದರ್ಜಿ ಕಾಲೇಜು ಕ್ಯಾಂಪಸ್ ಕ್ರೋಮಾ 2025 ಎಂಬ ರಾಷ್ಟ್ರೀಯ ಮಟ್ಟದ ಉತ್ಸವ ಮತ್ತು ಆಹಾರ ಮೇಳವನ್ನು ಅಕ್ಟೋಬರ್ 30ರಂದು ಮಂಗಳೂರು ವಿ ವಿ ಸಮೀಪವಿರುವ ಪೇಸ್ ಜ್ಞಾನ ನಗರ ಕೊಣಾಜೆಯಲ್ಲಿ ನಡೆಯಲಿದೆ ಎಂದು ಪಿ ಎ ಪ್ರಥಮ ದರ್ಜಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸರ್ಫ್ರಾಜ್ ಜೆ ಹಾಸಿಂ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿ ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಈ ಉತ್ಸವವು ಯುವ ಶಕ್ತಿ, ಸೃಜನಶೀಲತೆ ಮತ್ತು ನಾವೀನ್ಯತೆಯ ಉತ್ಸವವಾಗಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಕಲ್ಪನೆಗಳನ್ನು ಹಂಚಿಕೊಳ್ಳಲು, ಆಸಕ್ತಿಗಳನ್ನು ಅನ್ವೇಷಿಸಲು ಹಾಗೂ ತರಗತಿಯಾಚೆಯ ಕಲಿಕೆಗೆ ಉಪಯುಕ್ತವಾಗಿರಲಿದೆ . ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಇದಾಗಿದ್ದು ರಾಜ್ಯ ಅಂತರರಾಜ್ಯದ ಪಿಯು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು .

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಪಿ.ಎ, ಎಜುಕೇಷನಲ್ ಟ್ರಸ್ಟ್, ಮಂಗಳೂರು ಇದರ ಮ್ಯಾನೇಜಿಂಗ್ ಟ್ರಸ್ಟಿಗಳಾದ ಅಬ್ದುಲ್ಲಾ ಇಬ್ರಾಹಿಂ
ಭಾಗವಹಿಸಿದ್ದಾರೆ , ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಪಿ.ಬಿ. ಅಹ್ಮದ್ ಮುದಸ್ಮರ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಮತ್ತು ಪಾಲುದಾರರು, ಪಿ. ಬಿ. ಅಬ್ದುಲ್ ಹಮೀದ್ & ಸನ್ಸ್ , ಮಂಗಳೂರು ಇವರು ನೆರವೇರಿಸಲಿರುವರು . ಗೌರವ ಅತಿಥಿಗಳಾಗಿ ಇನ್‌ಫ್ಲವೆನ್ಸರ್ ಮತ್ತು ಪುಡ್ ಬ್ಲಾಗರ್ ಅಬ್ದುಲ್ ಬಾಸೀಮ್ ನಳಕತ್ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ . ಸಯ್ಯದ್ ಅಮೀನ್ ಅಹಮ್ಮದ್ , ಉಪನ್ಯಾಸಕಿ ಮುನೀರಾ ಎ , ಪ್ರೊ ಅಬ್ದುಲ್ ಸಮೀರ್ ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!