ಆರ್ ಎಸ್ ಎಸ್ ಮೇಲೆ ಕಾಂಗ್ರೆಸ್ ಕಾನೂನು ದುರ್ಬಳಕೆಯ ಷಡ್ಯಂತ್ರ: ದ. ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ.
ಮಂಗಳೂರು: ಶತಾಬ್ದ ವರ್ಷದ ಸಂಭ್ರಮದಲ್ಲಿರುವ ದೇಶಭಕ್ತ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಸವಾರಿ ಮಾಡಲು ಹೊರಟಿರುವುದು ಕಾನೂನು ದುರ್ಬಳಕೆಯ ಷಡ್ಯಂತ್ರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ. ರಾಷ್ಟ್ರ ಭಕ್ತ ವ್ಯಕ್ತಿ ನಿರ್ಮಾಣ ಕಾರ್ಯ ನಡೆಸುತ್ತಿರುವ ಸಂಘವು ದೇಶದ ಸಮಗ್ರತೆಗೆ, ಸುರಕ್ಷತೆಗೆ ಧಕ್ಕೆ ಬಂದ ಸಂದರ್ಭದಲ್ಲಿ ದೇಶದ ಹಿತಕ್ಕಾಗಿ ಕಾರ್ಯ ನಿರ್ವಹಿಸಿದೆ. ಇಂತಹ ಸಂಘಟನೆಯ ಮೇಲೆ ಪ್ರಿಯಾಂಕ ರಂತಹ ಸಂಕುಚಿತ ಮನಃಸ್ಥಿತಿಯವರು ಆರೋಪಿಸುತ್ತಿರುವುದು, ಅವರ ತಾಳಕ್ಕೆ ತಕ್ಕಂತೆ ಕುಣಿಯಲು ಹೊರಟಿರುವ…