ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಶ್ರೀ ಶಾಫಿ ಪರಂಬಿಲ್ ಹಾಗೂ ಇನ್ನಿತರ ಯುಡಿಎಫ್ ನೇತಾರರ ವಿರುದ್ಧ ಪೇರಾಂಬ್ರದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಹಾಗೂ ಮಾರಕ ಹಲ್ಲೆ ಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂದ್ಯೋಡುವಿನಲ್ಲಿ ಫ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶ್ರೀ ಬಾಬು ಬಂದ್ಯೋಡುರವರ ಅಧ್ಯಕ್ಷತೆಯಲ್ಹಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಫಾರೂಕ್ ಶಿರಿಯ ಉದ್ಘಾಟಿಸಿದರು.
ಇರ್ಷಾದ್, ಅಶ್ರಫ್ ಮುಟ್ಟಂ, ಮೋಹನನ್ ಮೇಸ್ತ್ರಿ, ಇಬ್ರಾಹಿಂ, ಕುಂಞಾಲಿ ಇಚ್ಲಂಗೋಡು, ನಾಗೇಶ್, ರಾಜೇಶ್ ನಾಯ್ಕ್, ಬರ್ನಾರ್ಡ್ ಡಿ ಅಲ್ಶೇಡಾ, ಅಝೀಝ್, ತುಳಸಿ, ಶಿಹಾಬ್ ಎಂ.ಕೆ, ಹನೀಫ್ ವರ್ಕಾಡಿ, ಯೂಸುಫ್ ಕುನ್ನಿಲ್, ಹನೀಫ್ ಪೆರಿಂಗಡಿ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಓ.ಎಂ.ರಶೀದ್ ಸ್ವಾಗತಿಸಿ, ಶ್ರೀ ಬಶೀರ್ ಹೇರೂರು ವಂದಿಸಿದರು.