ಹೈಕೋರ್ಟ್ ಆದೇಶ ಉಲ್ಲಂಘನೆ ಹಿಂದೂ ಮುಖಂಡ ಶರಣ್ ಪಂಪ್‌ವೆಲ್‌ಗೆ ₹2 ಲಕ್ಷ ದಂಡ!
ಚಿತ್ರದುರ್ಗ: ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಕಾರಣ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರಿಗೆ ಹೈಕೋರ್ಟ್ ₹2 ಲಕ್ಷ ರೂ. ದಂಡ ಹಾಕಿದೆ . ಕೋರ್ಟ್ ಬುಧವಾರ ನೀಡಿದ ಆದೇಶದ ಪ್ರಕಾರ, ದಂಡದ ಮೊತ್ತದಲ್ಲಿ ₹1 ಲಕ್ಷ ರಾಜ್ಯ ಲೀಗಲ್ ಸರ್ವೀಸ್ ಅಥಾರಿಟಿಗೆ ಮತ್ತು ₹1 ಲಕ್ಷ ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ ಪಾವತಿಸಬೇಕೆಂದು ನಿರ್ದೇಶಿಸಲಾಗಿದೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಶರಣ್ ಪಂಪ್‌ವೆಲ್ಅವರ ಜಿಲ್ಲೆ ಪ್ರವೇಶದ ಮೇಲೆ ನಿರ್ಬಂಧ…