Avatar

Shramitha bejja

ಕಮ್ಯುನಿಸ್ಟ್ ಚಿನ್ನ ಕಳ್ಳರ ಸಂತೆ : ಬಿಜೆಪಿ

ಚಿನ್ನ ಕಳ್ಳ ಸಾಗಾಟ ಕಮ್ಯುನಿಸ್ಟ್ ಪಕ್ಷದ ಕುಲಕಸುಬು, ಆಡಳಿತ ಬಲ ಉಪಯೋಗಿಸಿ ಶಬರಿಮಲೆ ಸನ್ನಿದಿಯಲ್ಲಿಯೇ ಚಿನ್ನ ಕಳ್ಳ ಸಾಗಾಟ ಕ್ಕೆ ಸಾಥ್ ನೀಡಿರುವಾಗ ಪಿನರಾಯಿ ಸರಕಾರ ಹಿಂದೂಗಳ ಧಾರ್ಮಿಕ ಭಾವನೆ, ನಂಬಿಕೆಗೆ ಮಾಡಿರುವ ಅವಮಾನ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ಹೇಳಿದರು. ಬಿಜೆಪಿ ಮಂಜೇಶ್ವರ ಮಂಡಲ ಸಭೆ ವರ್ಕಾಡಿ ಕಚೇರಿ ಯಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಬಾರಿಯ ಸ್ಥಳೀಯಡಳಿತ…

Read More

ಮಂಜೇಶ್ವರ : ಆರ್ಥಿಕ ಸಂಕಷ್ಟವನ್ನು ಎದುರಿಸುತಿದ್ದ ದಂಪತಿಗಳು ವಿಷ ಸೇವಿಸಿ ಆತ್ಮಹತ್ಯೆ.

ಮಂಜೇಶ್ವರ : ಆರ್ಥಿಕ ಸಂಕಷ್ಟವನ್ನು ಎದುರಿಸುತಿದ್ದ ದಂಪತಿಗಳು ವಿಷ ಸೇವಿಸಿ ಆತ್ಮಹತ್ಯೆ ಗೆಯ್ದ ಘಟನೆ ಮಂಜೇಶ್ವರ ಕಡಂಬಾರಿನಲ್ಲಿ ಸಂಭವಿಸಿದೆ. ಕಡಂಬಾರು ಜಂಭದ ಪದವು ಅಯ್ಯಪ್ಪ ಮಂದಿರದ ಎದುರಿನಲ್ಲಿ ವಾಸವಾಗಿರುವ ಅಜಿತ್ ಹಾಗೂ ಈತನ ಪತ್ನಿ ಶ್ವೇತಾ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತಳು ಮಜೀರ್ಪಳ್ಳ ಬೇಕರಿ ಸಮೀಪದ ಸೈ೦ಟ್ ಮೇರಿಸ್ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರಿಗೆ ಮೂರು ವರ್ಷ ಪ್ರಾಯದ ಮಗುವೊಂದು ಇದ್ದು ಫೈನಾನ್ಸ್ ನಿಂದ ಸಾಲ ಪಡೆದು ತೊಂದರೆ ಗೊಳಗಾಗಿದ್ದರೆಂದು ತಿಳಿದು ಬಂದಿದೆ . ಮಾಹಿತಿ ಅರಿತ…

Read More

ಔರಂಗಾಬಾದ್ ಹೆಸರನ್ನು ಛತ್ರಪತಿ ಸಂಭಾಜಿನಗರ ಮತ್ತು ಅಹ್ಮದ್‌ನಗರವನ್ನು ಅಹಲ್ಯಾನಗರ ಎಂದು ಬದಲಾಯಿಸಿರುವುದು ಇತಿಹಾಸ : ಕೇಂದ್ರ ಗೃಹ ಸಚಿವ ಅಮಿತ್ ಶಾ

ಮುಂಬೈ : ಬಿಜೆಪಿ-ಶಿವಸೇನಾ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡು ಔರಂಗಾಬಾದ್ ಹೆಸರನ್ನು ಛತ್ರಪತಿ ಸಂಭಾಜಿನಗರ ಮತ್ತು ಅಹ್ಮದ್‌ನಗರವನ್ನು ಅಹಲ್ಯಾನಗರ ಎಂದು ಬದಲಾಯಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾ, ಮಹಾರಾಷ್ಟ್ರದ ಔರಂಗಾಬಾದ್ ಅನ್ನು ಛತ್ರಪತಿ ಸಂಭಾಜಿನಗರ ಮತ್ತು ಅಹ್ಮದ್‌ನಗರವನ್ನು ಅಹಲ್ಯಾನಗರ ಎಂದು ಮರುನಾಮಕರಣ ಮಾಡುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದರು. ಇದು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಗಳಿಂದ ಮಾತ್ರ ಸಾಧ್ಯ…

Read More

ಮಂಜೇಶ್ವರ ತಾಲೂಕ್ ಲೈಬ್ರರಿ ಕೌನ್ಸಿಲ್ , ಮೀoಜ ಪಂಚಾಯತ್ ನೇತೃತ್ವ ಸಮಿತಿ ಮತ್ತು ಮೀಯಪದವು ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದ ಆಶ್ರಯದಲ್ಲಿ “ಬಾಲವೇದಿ ಸೃಜನೋತ್ಸವ 2025”

ಮಂಜೇಶ್ವರ ತಾಲೂಕ್ ಲೈಬ್ರರಿ ಕೌನ್ಸಿಲ್ ಹಾಗೂ ಮೀoಜ ಪಂಚಾಯತ್ ನೇತೃತ್ವ ಸಮಿತಿ ಮತ್ತು ಮೀಯಪದವು ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದ ಆಶ್ರಯದಲ್ಲಿ ನಡೆದ ಸೃಜನೋತ್ಸವ ವನ್ನು ಮೀoಜ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ರಾಮಚಂದ್ರ ಟಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯರಾದ ಶ್ರೀ ಅಹಮ್ಮದ್ ಹುಸೈನ್ ಮಾಸ್ತರ್, ನಿವೃತ್ತ ಅದ್ಯಾಪಕರಾದ ಶ್ರೀ ರಾಜರಾಮ ಮಾಸ್ಟರ್, ಮೀಯಪದವು ಶಾಲಾ ಶಿಕ್ಷಕಿ ಶ್ರೀಮತಿ ಸಾವಿತ್ರಿ, ಶಿಕ್ಷಕರಾದ ಶ್ರೀ ರಾಮಚಂದ್ರ ಮಾಸ್ಟರ್,…

Read More

‘ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮಾಡುವಂತಿಲ್ಲ , ಕಾನೂನು ಉಲ್ಲಂಘನೆಯಾದರೆ ಅಂಗಡಿ ಲೈಸೆನ್ಸ್ ರದ್ದು ‘- ಸಚಿವ ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ.

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾತ್ರ ಬಳಕೆ ಮಾಡಬೇಕು. ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮಾಡಿದರೆ ಅಂತಹ ಅಂಗಡಿ ಲೈಸೆನ್ಸ್ ಕ್ಯಾನ್ಸಲ್ ಮಾಡುವುದಾಗಿ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ . ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, “ದೀಪಾವಳಿಯಲ್ಲಿ ಹಸಿರು ಪಟಾಕಿ ಮಾತ್ರ ಹಚ್ಚಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಇದೆ. ಸುಪ್ರೀಂ ಕೋರ್ಟ್ ಆದೇಶ ಇದ್ದರೂ, ಭಾರ ಇರುವ, ಲೋಹ ಭರಿತ ಪಟಾಕಿ ಬಳಕೆ ಆಗುತ್ತಿದೆ. ಅಧಿಕಾರಿಗಳಿಗೆ ಸೂಚನೆ…

Read More

ಸಮೀಕ್ಷೆ:ಯಾವ ಜಾತಿಯನ್ನೂ ತುಳಿಯುವ ಪ್ರಶ್ನೆಯಿಲ್ಲ.ಸಮಸಮಾಜವನ್ನು ಬಯಸದವರು ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊಪ್ಪಳ : ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವ ಜಾತಿಯವರನ್ನು ತುಳಿಯುವ ಪ್ರಶ್ನೆಯಿಲ್ಲ. ಸಮಸಮಾಜವನ್ನು ಬಯಸದವರು ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಮೇಲ್ಜಾತಿಗಳನ್ನು ತುಳಿಯಲು ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಕೇಂದ್ರ ಸಚಿವ ಸೋಮಣ್ಣ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸದಿದ್ದರೆ, ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ. ಈ ಸಮೀಕ್ಷೆಯಲ್ಲಿ ಯಾವ ಜಾತಿಯವರನ್ನು ತುಳಿಯುವ ಪ್ರಶ್ನೆಯಿಲ್ಲ….

Read More

ಅಜೆಕಾರು: ತಲವಾರು ತೋರಿಸಿ ಕೊಟ್ಟಿಗೆಯಲ್ಲಿದ್ದ ದನ ಕಳವುಗೈದ ಪ್ರಕರಣ: ಮೂವರು ಆರೋಪಿಗಳ ಬಂಧನ.

ಕಾರ್ಕಳ: ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರ್ಲಾಲು ಎಂಬಲ್ಲಿ ಕೆಲವು ದಿನಗಳ ಹಿಂದೆ ತಲವಾರು ತೋರಿಸಿ ಬೆದರಿಸಿ ಕೊಟ್ಟಿಗೆಯಲ್ಲಿದ್ದ ದನಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ಕಾರ್ಕಳ ನಲ್ಲೂರು ಗ್ರಾಮದ ಬೋರ್ಕಟ್ಟೆಯ ಯೂನಿಸ್ ( 31), ಮೂಡಬಿದ್ರೆ ಕಲ್ಲಬೆಟ್ಡುವಿನ ನಾಸೀರ್ (28), ಮೂಡಬಿದ್ರೆ ಪುತ್ತಿಗೆ ಗ್ರಾಮದ ಮಿಜಾರಿನ ಇಕ್ಬಾಲ್ (29) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ್ದ 2 ತಲವಾರು, ಕಾರು, ಬೋಲೆರೋ ವಾಹನ, 5 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ…

Read More

ಶೋಭಾ ದಿನೇಶ್ ಉದ್ಯಾವರ ರಿಗೆ ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿ 2025.

ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ನವರಾತ್ರಿ ವೇದಿಕೆಯಲ್ಲಿ, ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಪ್ರಯೋಜಕತ್ವದಲ್ಲಿ ನಡೆದ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025.ಸರಣಿ ಕಾರ್ಯಕ್ರಮ ದಲ್ಲಿ ನಡೆದ “ಕಾಸರಗೋಡು ದಸರಾ ಕವಿಗೋಷ್ಠಿ ಯಲ್ಲಿ ಮೇರು ಕವಿ ಸಂಘಟಕಿ, ಕನ್ನಡ ಭವನ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷೆಯಾದ ಶ್ರೀಮತಿ ಶೋಭಾ ದಿನೇಶ್ ಉದ್ಯಾವರ ಇವರಿಗೆ “ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿ ನೀಡಲಾಯಿತು. ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು…

Read More

ಪುತ್ತೂರು ತಾಲ್ಲೂಕು ಮುಂಡೂರು ಗ್ರಾಮ ಪಂಚಾಯತ್ ವಠಾರದಲ್ಲಿ ತ್ಯಾಜ್ಯರಾಶಿ.ಕಾಂಗ್ರೆಸ್ ಕಾರ್ಯಕರ್ತರಿಂದ ಪಂಚಾಯತಿಗೆ ದಿಢೀ‌ರ್ ಭೇಟಿ. ಮೂರು ದಿನದೊಳಗಾಗಿ ಸ್ವಚ್ಛತೆ ಮಾಡದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ.

ಪುತ್ತೂರು: ಪುತ್ತೂರು ತಾಲ್ಲೂಕು ಮುಂಡೂರು ಗ್ರಾಮ ಪಂಚಾಯತ್ ವಠಾರದಲ್ಲಿ ತ್ಯಾಜ್ಯ ರಾಶಿ ಹಾಗೂ ಗ್ರಾ.ಪಂ ವಠಾರದಲ್ಲಿ ಸ್ವಚ್ಛತೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪಂಚಾಯತಿಗೆ ದಿಢೀರ್ ಗ್ರಾ.ಪಂಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ ಆಚಾರ್ಯ ಹಾಗೂ ಮಾಜಿ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ನೇತೃತ್ವದಲ್ಲಿ ಗ್ರಾ.ಪಂಗೆ ಆಗಮಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಪಿಡಿಓ ಮನ್ಮಥ ಅಜಿರಂಗಳ ಜೊತೆ ಹಾಗೂ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಜೊತೆ…

Read More

ಪ್ರಯಾಣಿಕರ ಲಗೇಜ್ ದುಬೈಯಲ್ಲೇ ಬಿಟ್ಟು ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್. ಪ್ರಯಾಣಿಕರಿಗೆ ಆಘಾತ .

ಮಂಗಳೂರು: ಪ್ರಯಾಣಿಕರ ಲಗೇಜ್ ದುಬೈಯಲ್ಲೇ ಬಿಟ್ಟು ಬಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರಯಾಣಿಕರಿಗೆ ಆಘಾತ ನೀಡಿದೆ.ಶನಿವಾರ ಸಂಜೆ ದುಬೈಯಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಹಲವು ಪ್ರಯಾಣಿಕರ ಲಗೇಜ್‌ಗಳನ್ನು ದುಬೈಯಲ್ಲೇ ಬಿಟ್ಟು ಬಂದಿರುವುದು ವರದಿಯಾಗಿದೆ. ವಿಮಾನ ಮಂಗಳೂರಿಗೆ ಬಂದು ಇಳಿದ ನಂತರ ಪ್ರಯಾಣಿಕರು ತಮ್ಮ ಲಗೇಜು ಪಡೆಯಲು ಬಂದಾಗಲೇ ಅವರಿಗೆ ನಿಮ್ಮ ಲಗೇಜು ದುಬೈಯಿಂದ ಲೋಡ್ ಆಗಿಲ್ವ ವಿಮಾನ ಫುಲ್ ಇದ್ದುದರಿಂದ ಕೆಲವು ಲಗೇಜ್‌ಗಳನ್ನು ಅಲ್ಲೇ ಬಿಡಲಾಗಿದೆ, ನಾಳೆ ಬೆಳಗ್ಗೆ 5 ಗಂಟೆಗೆ…

Read More
error: Content is protected !!