ಮಂಜೇಶ್ವರ ತಾಲೂಕ್ ಲೈಬ್ರರಿ ಕೌನ್ಸಿಲ್ , ಮೀoಜ ಪಂಚಾಯತ್ ನೇತೃತ್ವ ಸಮಿತಿ ಮತ್ತು ಮೀಯಪದವು ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದ ಆಶ್ರಯದಲ್ಲಿ “ಬಾಲವೇದಿ ಸೃಜನೋತ್ಸವ 2025”

ಮಂಜೇಶ್ವರ ತಾಲೂಕ್ ಲೈಬ್ರರಿ ಕೌನ್ಸಿಲ್ ಹಾಗೂ ಮೀoಜ ಪಂಚಾಯತ್ ನೇತೃತ್ವ ಸಮಿತಿ ಮತ್ತು ಮೀಯಪದವು ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದ ಆಶ್ರಯದಲ್ಲಿ ನಡೆದ ಸೃಜನೋತ್ಸವ ವನ್ನು ಮೀoಜ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ರಾಮಚಂದ್ರ ಟಿ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯರಾದ ಶ್ರೀ ಅಹಮ್ಮದ್ ಹುಸೈನ್ ಮಾಸ್ತರ್, ನಿವೃತ್ತ ಅದ್ಯಾಪಕರಾದ ಶ್ರೀ ರಾಜರಾಮ ಮಾಸ್ಟರ್, ಮೀಯಪದವು ಶಾಲಾ ಶಿಕ್ಷಕಿ ಶ್ರೀಮತಿ ಸಾವಿತ್ರಿ, ಶಿಕ್ಷಕರಾದ ಶ್ರೀ ರಾಮಚಂದ್ರ ಮಾಸ್ಟರ್, ಶ್ರೀ ರಘುವೀರ್ ಮಾಸ್ಟರ್ ಕಾರ್ಯಕ್ರಮಕ್ಕೆ ಶುಭಕೋರಿದರು. ಮೀಯಪದವು ಹಳೆವಿದ್ಯಾರ್ಥಿ ಸಂಘ ಗ್ರಂಥಾಲಯದ ಕಾರ್ಯದರ್ಶಿ ಶ್ರೀ ಸುರೇಶ ಮಾಸ್ಟರ್ ಸ್ವಾಗತಿಸಿ ಗ್ರಂಥಾಲಯ ಅಧ್ಯಕ್ಷರಾದ ಶ್ರೀ ಸತೀಶ್ ಬಿ ಧನ್ಯವಾದ ಸಲ್ಲಿಸಿದರು.

ಸಮಾರೋಪ ಸಮಾರಂಭವನ್ನು ಮಂಜೇಶ್ವರ ತಾಲೂಕ್ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಶ್ರೀ ಕಮಲಾಕ್ಷ ಡಿ ಉದ್ಘಾಟಿಸಿದರು. ಫ್ರೆಂಡ್ಸ್ ಕುಳೂರ್ ಗ್ರಂಥಾಲಯ ಅಧ್ಯಕ್ಷರಾದ ಮಜೀದ್ ಚಾರ್ಲ, ನಿವೃತ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ, ಎಂಬವರು ಶುಭ ಹಾರೈಸಿದರು. ಗ್ರಂಥಪಾಲಕಿ ಶ್ರೀಮತಿ ತುಳಸಿ ಧನ್ಯವಾದ ಸಲ್ಲಿಸಿದರು. ವಿಜೇತರಿಗೆ ಟ್ರೋಫಿ ಹಾಗೂ ಸರ್ಟಿಫಿಕೇಟ್ ವಿತರಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!