Avatar

Shramitha bejja

ಕೇರಳ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ಸಾಂಸ್ಕೃತಿಕ ಭವನ ಉದ್ಘಾಟಣೆ

2022-23ನೇ ಸಾಲಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ರೂ.40.00ಲಕ್ಷಗಳ ಅನುದಾನದಿಂದ ಗಡಿ ಭಾಗದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಇವರ ಮೂಲಕ ಮಹಾಜನ ಸಂಸ್ಕೃತ ಕಾಲೇಜು, ಹೈಯರ್ ಸೆಕೆಂಡರಿ ಶಾಲೆ, ಪೆರಡಾಲ, ನೀರ್ಚಾಲು, ನೀರ್ಚಾಲು (ಅಂಚೆ), ಕುಂಬಳೆ (ದಾರಿ), ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಶತಮಾನ ಕಂಡ ಕನ್ನಡ ಶಾಲೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಾಂಸ್ಕೃತಿಕ ಭವನವನ್ನು ನಿನ್ನೆ ಉದ್ಘಾಟನೆ ಮಾಡಲಾಯಿತು..

Read More

ಧರ್ಮಸ್ಥಳ ಪ್ರಕರಣ: ದೂರುದಾರ ಚಿನ್ನಯ್ಯ ಮತ್ತೆ ಎಸ್.ಐ.ಟಿ ಕಸ್ಟಡಿಗೆ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಬಂಧಿತನಾಗಿರುವ ʻಬುರುಡೆʼ ಚಿನ್ನಯ್ಯನನ್ನ ಮತ್ತೆ 4 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ. ಸೆ.6ರಂದು ಚಿನ್ನಯ್ಯನನ್ನ ಕೋರ್ಟ್‌ಗೆ ಹಾಜರುಪಡಿಸುವಂತೆ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ. 12 ದಿನಗಳ ಎಸ್‌ಐಟಿ ಕಸ್ಟಡಿ ಇಂದು ಅಂತ್ಯಗೊಂಡಿದ್ದ ಹಿನ್ನೆಲೆ ಚಿನ್ನಯ್ಯನನ್ನ (Chinnayya) ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶರಾದ ವಿಜಯಾನಂದ.ಟಿ ಅವರ ಎದುರು ಹಾಜರುಪಡಿಸಲಾಗಿತ್ತು. ತನಿಖಾಧಿಕಾರಿ ಎಸ್ಪಿ ಜಿತೇಂದ್ರ ಕುಮಾರ್‌ ದಯಾಮ,…

Read More

ನಾರಾವಿ ಗ್ರಾಮ ಪಂಚಾಯತಿಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರ ಭೇಟಿ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮ ಪಂಚಾಯತಿಗೆ ವಿಧಾನ ಪರಿಷತ್ತಿನ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಚರ್ಚಿಸಿ ಪರಿಶೀಲಿಸಿದರು. ಕೇಂದ್ರ ಸರ್ಕಾರದ MGNREGA, ಪ್ರಧಾನ ಮಂತ್ರಿ ಆವಾಸ್ ಯೋಜನೆ, 15ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್ (SBM)…

Read More

ಎಸ್ ಪಿ ಸಿ ಓಣಂ ತ್ರಿದಿನ ಶಿಬಿರ ಸಂಪನ್ನ.

ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕ ದಲ್ಲಿ ಎಸ್ ಪಿ ಸಿ ವಿದ್ಯಾರ್ಥಿಗಳ ಓಣಂ ತ್ರಿದಿನ ಶಿಬಿರದ ಔಪಚಾರಿಕ ಉದ್ಘಾಟನಾ ಸಮಾರಂಭ ಜರಗಿತು.ಪ್ರಸ್ತುತ ಸಭೆಯ ಅಧ್ಯಕ್ಷತೆಯನ್ನು ಪುತ್ತಿಗೆ ಪಂಚಾಯತು ಅಧ್ಯಕ್ಷ ಶ್ರೀ ಸುಬ್ಬಣ್ಣ ಆಳ್ವ ನೆರವೇರಿಸಿ ಮಾತನಾಡುತ್ತಾ ಯೂನಿಟ್ ನಲ್ಲಿರುವ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಶಿಸ್ತಿನಿಂದ ಇತರರಿಗೆ ಮಾದರಿಯಾಗಬೇಕು ಎಂದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬದಿಯಡ್ಕ ಆರಕ್ಷಕ ಠಾಣೆಯ ಎಸ್. ಐ ಯಾಗಿರುವ ಶ್ರೀ ಅಖಿಲ್ ಟಿ ದೀಪ ಬೆಳಗಿಸಿ ಉದ್ಘಾಟಿಸಿ ಎಸ್…

Read More

ಆಟೋ ಚಾಲಕನ ಸುಳ್ಳು ಆರೋಪ . ಕಟ್ಟು ಕಥೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಪೊಲೀಸರು.

ಆಟೋ ಚಾಲಕನ ಮೇಲೆ ರವಿವಾರ ರಾತ್ರಿ ಮಂಗಳೂರಿನ ಫಳ್ನೀರ್ ನಲ್ಲಿ ತಂಡವೊಂದು ಹಲ್ಲೆ ನಡೆಸಿದೆ ಎಂಬುದು ಸುಳ್ಳು. ಇದು ಆಟೊ ಚಾಲಕನೇ ಸೃಷ್ಟಿಸಿದ ಕಟ್ಟು ಕಥೆ ಎಂಬ ವಿಚಾರ ಪೊಲೀಸರು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರಕಟಣೆಯಲ್ಲಿಂದು ತಿಳಿಸಿದ್ದಾರೆ. ರಿಕ್ಷಾ ಚಾಲಕ ಬಶೀರ್ ಎಂಬುವವರು ಪೊಲೀಸರಿಗೆ ಮಾಹಿತಿ ನೀಡುತ್ತೇನೆ ಎಂಬ ಆರೋಪದಲ್ಲಿ ಅಪರಿಚಿತ ತಂಡವೊಂದು ತನ್ನ ಹಲ್ಲೆ ನಡೆಸಿರುವುದಾಗಿ ಪೊಲೀಸ್ ದೂರು ನೀಡಿದ್ದರು.ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದಾಗ…

Read More

ನಿರ್ಲಜ್ಜ ಓಟ್ ಚೋರತನದಿಂದ ಪ್ರಜಾಪ್ರಭುತ್ವ ಬುಡಮೇಲು-ಕಾಂಗ್ರೆಸ್.

ಶತಾಯಗತಾಯ ಅಧಿಕಾರ ಉಳಿಸಿಕೊಳ್ಳುವ ಧಾವಂತದಲ್ಲಿ ಬಿಜೆಪಿಯು ನಿರ್ಲಜ್ಜವಾಗಿ ಓಟ್ ಕಳ್ಳತನ ನಡೆಸಿದ್ದು ಜಗಜ್ಜಾಹೀರಾಗಿದೆ. ಒಂದೆಡೆ ಲಕ್ಷಾಂತರ ನಕಲಿ ಮತದಾರರ ಸೇರ್ಪಡೆಗೊಳಿಸಿ ತಮ್ಮ ಓಟ್ ಗಳ ಸಂಖ್ಯೆ ಹೆಚ್ಚಿಸುವುದು ಹಾಗೂ ಅರ್ಹ ಮತದಾರರನ್ನು ಅಂತಿಮ ಮತದಾರ ಪಟ್ಟಿಯಿಂದ ಹೊರತು ಪಡಿಸಿ ವಿಪಕ್ಷಗಳ ಬಲ ಕುಗ್ಗಿಸುವುದು ಮುಂತಾದ ವಾಮ ಮಾರ್ಗಗಳ ಮೂಲಕ ಆಡಳಿತವನ್ನು ಕದಿಯಲಾಗಿದೆ. ಇದಕ್ಕೆ ಚುನಾವಣಾ ಆಯೋಗವೂ ಕೈ ಜೋಡಿಸಿದ್ದು ವಿಪರ್ಯಾಸ. ಬಿಜೆಪಿಯಿಂದ ಮಾಸಿಕ ಚಂದಾ ಪಡೆಯುವ ಮಾನಗೇಡಿ ಮಡಿಲ ಮಾಧ್ಯಮಗಳು ಎಲ್ಲವನ್ನು ಕಂಡೂ ಕಾಣದಂತೆ ಜಾಣ ಕುರುಡುತನ…

Read More

ಐಕಳ ಹರೀಶ್ ಶೆಟ್ಟಿ ಅವರಿಗೆ ಶಿವಗಿರಿ ಸಮ್ಮಾನ್ ಪ್ರಶಸ್ತಿ.

ಮಂಗಳೂರು: ಜಯ ಸುವರ್ಣ ಸಂಸ್ಮರಣೆಯ ಅಂಗವಾಗಿ ಜಯ ಸಿ ಸುವರ್ಣ ಜನಸೇವಾ ಪುರಸ್ಕಾರ ಶಿವಗಿರಿ ಸಮ್ಮಾನ್ ಪ್ರಶಸ್ತಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸೆಪ್ಟಂಬರ್ 7 ರಂದು ಭಾನುವಾರ ಮುಂಬಯಿಯ ಜಯಲೀಲಾ ಬ್ಯಾಂಕ್ವೆಟ್ ಹಾಲ್ ಗೋರೆಗಾಂವ್ ಪೂರ್ವ ಇಲ್ಲಿ ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ಆಯೋಜಿಸಿರುವ 171 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಐಕಳ ಹರೀಶ್ ಶೆಟ್ಟಿ ಅವರನ್ನು…

Read More

ವಿಚಾರಣೆಗೆ ಹಾಜರಾಗದ ತಹಶೀಲ್ದಾರ್ ಎಸ್.ಬಿ. ಕೂಡಲಗಿ

ಪುತ್ತೂರು: ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಲಂಚ ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಆರೋಪಿಯಾಗಿರುವ ತಹಶೀಲ್ದಾರ್ ಎಸ್.ಬಿ. ಕೂಡಲಗಿ ಸೋಮವಾರ ವಿಚಾರಣೆಗೆ ಹಾಜರಾಗಿಲ್ಲ. ಆ. 28ರಂದು ತಾಲೂಕು ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದರು. ಈ ವೇಳೆ ತಹಶೀಲ್ದಾರ್ ನಾಪತ್ತೆ ಆಗಿದ್ದರು. ಸೆ. 1ರಂದು ಮಂಗಳೂರು ಲೋಕಾಯುಕ್ತ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸುವಂತೆ ತಹಶೀಲ್ದಾರ್‌ಗೆ ಲೋಕಾಯುಕ್ತ ಪೊಲೀಸರು ನೋಟಿಸ್‌ ಹೊರಡಿಸಿದ್ದರು. ಅದಾಗ್ಯೂ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಲೋಕಾಯುಕ್ತ ಪೊಲೀಸರು ಇನ್ನೊಮ್ಮೆ ನೋಟಿಸ್ ಹೊರಡಿಸುವ…

Read More

ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಓಣಂ ಹಬ್ಬ ಆಚರಣೆ.

ಮಂಜೇಶ್ವರ : ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಆಗಸ್ಟ್ 29ರ ಶುಕ್ರವಾರದಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಶುಭ ಹಾರೈಸಿದರು. ವೈವಿಧ್ಯಮಯ ಪೂಕಳಂಗಳನ್ನು ರಚಿಸಿದ ನಂತರ ಶಿಕ್ಷಕಿಯರು ಕೈಕೊಟ್ಟಿಕಲಿ ನೃತ್ಯವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಎಲ್ಲರಿಗೂ ಓಣಂ ಸದ್ಯವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಎಸ್ಎಂಸಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Read More

ಓಣಂ ಹಬ್ಬ ಸನಿಹ ಹಿನ್ನಲೆ ಬೆಂಗಳೂರು ಮತ್ತು ಕೇರಳ ನಡುವೆ ಹೆಚ್ಚುವರಿ 90 ಬಸ್ ಸಂಚಾರ.

ಬೆಂಗಳೂರು: ಓಣಂ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ಕೇರಳದ ನಡುವೆ ಸಂಚಾರ ಮಾಡುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಒಂದು ವಿಶೇಷ ಘೋಷಣೆ ಮಾಡಿದೆ . ಸೆಪ್ಟೆಂಬರ್ 2 ರಿಂದ 4 ರವರೆಗೆ ಬೆಂಗಳೂರಿನಿಂದ ಕೇರಳದ ವಿವಿಧ ಪ್ರಮುಖ ನಗರಗಳಿಗೆ 90 ಕ್ಕೂ ಅಧಿಕ ಬಸ್ ಸೇವೆಗಳನ್ನು ನಿಗಮ ನಿರ್ವಹಿಸಲು ತೀರ್ಮಾನಿಸಿದೆ. ಓಣಂ ಹಬ್ಬದ ಹಿನ್ನಲೆಯಲ್ಲಿ ಊರಿಗೆ ಹೊರಡುವ ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು, ಸುಗಮ ಸಂಚಾರವನ್ನು ಕಲ್ಪಿಸಲು ಈ ನಿಲುವನ್ನು ತೆಗೆದುಕೊಳ್ಳಲಾಗಿದೆ. ಈ ಹೆಚ್ಚುವರಿ…

Read More
error: Content is protected !!