ಎಸ್ ಪಿ ಸಿ ಓಣಂ ತ್ರಿದಿನ ಶಿಬಿರ ಸಂಪನ್ನ.

ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕ ದಲ್ಲಿ ಎಸ್ ಪಿ ಸಿ ವಿದ್ಯಾರ್ಥಿಗಳ ಓಣಂ ತ್ರಿದಿನ ಶಿಬಿರದ ಔಪಚಾರಿಕ ಉದ್ಘಾಟನಾ ಸಮಾರಂಭ ಜರಗಿತು.ಪ್ರಸ್ತುತ ಸಭೆಯ ಅಧ್ಯಕ್ಷತೆಯನ್ನು ಪುತ್ತಿಗೆ ಪಂಚಾಯತು ಅಧ್ಯಕ್ಷ ಶ್ರೀ ಸುಬ್ಬಣ್ಣ ಆಳ್ವ ನೆರವೇರಿಸಿ ಮಾತನಾಡುತ್ತಾ ಯೂನಿಟ್ ನಲ್ಲಿರುವ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಶಿಸ್ತಿನಿಂದ ಇತರರಿಗೆ ಮಾದರಿಯಾಗಬೇಕು ಎಂದರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬದಿಯಡ್ಕ ಆರಕ್ಷಕ ಠಾಣೆಯ ಎಸ್. ಐ ಯಾಗಿರುವ ಶ್ರೀ ಅಖಿಲ್ ಟಿ ದೀಪ ಬೆಳಗಿಸಿ ಉದ್ಘಾಟಿಸಿ ಎಸ್ ಪಿ ಸಿ ವಿದ್ಯಾರ್ಥಿಗಳ ಧ್ಯೇಯ ಉದ್ದೇಶಗಳನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಕಲಿಕೆಯ ಪೂರಕ ಚಟುವಟಿಕೆಯ ಜೊತೆಗೆ ದೈಹಿಕ ಮನೋಧಾರ್ಢ್ಯ ವೃದ್ಧಿಸುವಲ್ಲಿ ಎಸ್ ಪಿ ಸಿ ಅಂತಹ ಯೂನಿಟ್ ಗಳು ಸಹಕಾರಿಯಾಗುತ್ತದೆ ಎಂದರು. ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಎನ್ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರೌಢ ಶಾಲೆಯ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶಶಿಕುಮಾರ್ ಪಿ, ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ್ ಭಂಡಾರಿ, ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ದಿವ್ಯಾ ಭಾರತಿ ಶುಭಹಾರೈಸಿ ಮಾತನಾಡಿದರು.ಬದಿಯಡ್ಕ ಠಾಣೆಯ ಆರಕ್ಷಕರಾದ ಶ್ರೀ ರಜೀಶ್, ಶ್ರೀಮತಿ ಪ್ರಸೀತಾ ಕ್ಯಾಂಪಿನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ಇತ್ತು ಮಾತನಾಡಿದರು.

ಪ್ರಾರಂಭದ ಸೆಶನ್ ತರಗತಿಯಾದ ಜೀವನ ಮೌಲ್ಯಗಳ ಕುರಿತು ಶಿಕ್ಷಕರಾದ ಶ್ರೀ ಅಭಿಲಾಷ್ ಪೆರ್ಲ ಮತ್ತು ಶ್ರೀ ಪ್ರಶಾಂತ ಹೊಳ್ಳ ತರಗತಿ ನಡೆಸಿ ಕೊಟ್ಟರು.ಮಧ್ಯಾಹ್ನ ನಂತರ
ಸಾಮಾಜಿಕ ನೈತಿಕ ಮೌಲ್ಯಗಳ ಕುರಿತ ತರಗತಿಯನ್ನು ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ ಎಕನಾಮಿಕ್ಸ್ ಅಧ್ಯಾಪಕ ಶ್ರೀ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ನೆರವೇರಿಸಿದರು.

ಬಳಿಕ ಅಧ್ಯಾಪಕರಾದ ಶ್ರೀ ಸದಾಶಿವ ಬಾಲಮಿತ್ರ ಮತ್ತು ಗೋಪಾಲ ಕಾಟುಕುಕ್ಕೆಯವರು ವಿವಿಧ ಆಟೋಟಗಳ ಮನೋರಂಜನಾತ್ಮಕ ತರಗತಿಯನ್ನು ನಡೆಸಿ ಕೊಟ್ಟರು.ಶಿಬಿರದ ಪ್ರಾರಂಭದ ದಿನದ ಕೊನೆಗೆ ಆರಕ್ಷಕರಾದ ಶ್ರೀ ರಜೀಶ್ ಮತ್ತು ಶ್ರೀಮತಿ ಪ್ರಸೀತಾ ಅವರು ಡ್ರಿಲ್ ತರಗತಿಯನ್ನು ನಡೆಸಿಕೊಟ್ಟರು.

ಎರಡನೇ ದಿನದಂದು ಬೆಳಿಗ್ಗೆ SPC ವಿದ್ಯಾರ್ಥಿಗಳಿಂದ ಪೆರಡ್ ಅಭ್ಯಾಸದ ಬಳಿಕ ಯೋಗ ತರಗತಿಯನ್ನು ನಡೆಸಲಾಯಿತು. ಹರೀಶ್ ಕುಮಾರ್ ( HSST ಕನ್ನಡ SVHSS ಮಿಯಾಪದವು) ಅವರಿಂದ ಸೈಬರ್ ಸುರಕ್ಷೆ ತಂತ್ರಜ್ಞಾನ ಸಾಕ್ಷರತೆ ತರಗತಿ ನಡೆಯಿತು.
ಮಧ್ಯಾಹ್ನ ವಿರಾಮದ ನಂತರ ಅಧ್ಯಾಪಿಕೆ ಉಮಾದೇವಿ ಎಂ ಎಲ್ ಅವರು Ethical sub dimension social values ಎಂಬ ವಿಚಾರದ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ತರಗತಿಯನ್ನು ನೀಡಿದರು.

ಪಡ್ರೆ ಶಾಲೆಯ ಅಧ್ಯಾಪಕ ಗೋಪಾಲ ಕಾಟುಕುಕ್ಕೆ ಹಾಗೂ ಸದಾಶಿವ ಬಾಲಮಿತ್ರ ಅವರು Major and minor ಆಟಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು.ದಿನದ ಕೊನೆಗೆ ಪರೇಡ್ ನಡೆಸಿ, ಡ್ರಿಲ್ ಇನ್ಸ್ರಕ್ಟರ್ ರಜೀಶ್ ಹಾಗೂ ಪ್ರಸೀತ ಅವರ ನೇತೃತ್ವದಲ್ಲಿ ಪೆರ್ಮುದೆ ಪೇಟೆಯ ವರೆಗೆ Road walk ನಡೆಸಲಾಯಿತು. ಬಳಿಕ ಶಾಲಾ ಆವರಣವನ್ನು ಶುಚಿಗೊಳಿಸಿದರು.

ಕ್ಯಾಂಪ್ ನ ಕೊನೆಯ ದಿನ
ಅತ್ಯಂತ ಅವಿಸ್ಮರಣೀಯವಾಗಿ ನೆರವೇರಿತು. ದಿನದ ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಹಾಗೂ ಪ್ರಾಣಾಯಾಮಗಳ ಬಗ್ಗೆ ಅಡೂರು ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕರಾದ ಶ್ರೀ ಶಶಿಧರ ಕೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿಯನ್ನು ನೀಡಿದರು.
ಬೆಳಗಿನ ಉಪಹಾರದ ಬಳಿಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದವು ದೈಗೋಳಿ ಶ್ರೀ ಸಾಯಿನಿಕೇತನ ಆಶ್ರಮಕ್ಕೆ ತೆರಳಿ ಆಶ್ರಮದ ಆಶ್ರಿತರೊಂದಿಗೆ ಅತ್ಯಂತ ಆತ್ಮೀಯವಾಗಿ ಅವರ ಜೊತೆಯಲ್ಲಿ ಹಾಡುತ್ತಾ ಕುಣಿಯುತ್ತ ಮಾತನಾಡುತ್ತಾ ತಮ್ಮ ಅಮೂಲ್ಯವಾದ ಸಮಯವನ್ನು ವಿನಿಯೋಗಿಸುತ್ತಾ ಓಣಂ ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಆಶ್ರಮದ ರೂವಾರಿಯಾದ ಶ್ರೀ ಉದಯಕುಮಾರ್ ನೂಜಿ ಅವರನ್ನು ಸನ್ಮಾನಿಸಲಾಯಿತು, ಸಂಗ್ರಹಿಸಿದ ಕಿರು ಮೊತ್ತವನ್ನು ಆಶ್ರಮದ ಕಾರ್ಯ ಕೈಂಕರ್ಯಗಳಿಗಾಗಿ ಹಸ್ತಾಂತರಿಸಲಾಯಿತು. ಶಿಬಿರದ ಅತಿಥಿಯಾಗಿ ಸೇವಾಶ್ರಮಕ್ಕೆ ಆಗಮಿಸಿದ ವಾಣಿವಿಜಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೃಷ್ಣವೇಣಿ ಅವರು ವಿದ್ಯಾರ್ಥಿಗಳ ಕುರಿತು ಮಾತಾಡುತ್ತಾ ಪ್ರತಿಯೊಬ್ಬರ ಜೀವನದಲ್ಲಿ ಹೆತ್ತವರ ತ್ಯಾಗ ಮತ್ತು ಸಮರ್ಪಣ ಭಾವದ ಬಗ್ಗೆ ವಿವರಿಸಿದರು.


ಮಧ್ಯಾಹ್ನದ ಭೋಜನದ ಬಳಿಕ ಮೂರು ದಿನದ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಬಂಧಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಮನೋಧೈರ್ಯ ಇತ್ಯಾದಿಗಳು ಈ ಶಿಬಿರದಿಂದ ಇಮ್ಮಡಿಯಾಗಿದೆ ಎಂದರು. ಬದಿಯಡ್ಕ ಠಾಣೆಯ ಆರಕ್ಷಕರಾದ ಶ್ರೀ ರಜೀಶ್ ಮತ್ತು ಶ್ರೀಮತಿ ಪ್ರಸೀತ ಅವರನ್ನು ಈ ಸಂಧರ್ಭದಲ್ಲಿ ಗೌರವಿಸಲಾಯಿತು.

ಬಳಿಕ ಮಾತನಾಡುತ್ತಾ ವಿದ್ಯಾರ್ಥಿಗಳ ಸಹಭಾಗಿತ್ವವೇ ಈ ತ್ರಿದಿನ ಕ್ಯಾಂಪ್ ಯಶಸ್ಸಿಗೆ ಕಾರಣವಾಗಿದೆ, ಮುಂದೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ಸು ಸಾಧಿಸಿದಾಗ ಸಮಾಜಕ್ಕೆ ನಮ್ಮಿಂದಾಗುವ ಸಹಾಯವನ್ನು ಮಾಡುವುದೇ ನಿಜವಾದ ಸೇವಾಧರ್ಮ ಎಂದರು.
ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯ ರಿಜಿಸ್ಟರ್ಡ್ ಧರ್ಮತ್ತಡ್ಕ. ಇದರ ಅಧ್ಯಕ್ಷರಾದ ಅಧ್ಯಾಪಕ ಶ್ರೀ ರಾಮಮೋಹನ ಚಕ್ಕೆ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭನುಡಿಗಳನ್ನಾಡಿದರು.

ಕ್ಯಾಂಪಿನ ಊಟೋಪಚಾರಗಳ ವ್ಯವಸ್ಥೆಗಾಗಿ ಕ್ಲಬ್ ನ ಪರವಾಗಿ ಶ್ರೀಯುತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಎ. ಯು. ಪಿ ಶಾಲೆ ಧರ್ಮತ್ತಡ್ಕ ಮುಖ್ಯೋಪಾಧ್ಯಾಯರಾದ ಶ್ರೀ ಎನ್ .ಮಹಾಲಿಂಗ ಭಟ್ ಶಿಬಿರದ ಯಶಸ್ಸಿಗೆ ಕಾರಣರಾದ ಎಲ್ಲರನ್ನು ಅಭಿನಂದಿಸುತ್ತಾ ಮಾತನಾಡಿದರು.ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.


ಬಳಿಕ ವಿದ್ಯಾರ್ಥಿಗಳು ಮೂರುದಿನಗಳ ಶಿಬಿರದ ಅನುಭವದ ಬಗ್ಗೆ ಮಾತನಾಡಿದರು.ವಿದ್ಯಾರ್ಥಿಗಳು ಪ್ರಾರ್ಥಿಸಿ, ಎ ಸಿ ಪಿ ಒ ಶ್ರೀ ಶಿವಪ್ರಸಾದ್ .ಸಿ ಸ್ವಾಗತಿಸಿ, ಶ್ರೀ ಪ್ರಶಾಂತ ಹೊಳ್ಳ .ಎನ್ ನಿರೂಪಿಸಿ, ಸಿ ಪಿ ಒ ಶ್ರೀಮತಿ ಈಶ್ವರಿ.ಡಿ ವಂದಿಸಿದರು. ಶ್ರೀ ಅಭಿಲಾಷ್ ಪೆರ್ಲ, ಶ್ರೀ ಕೇಶವ ಪ್ರಸಾದ್ ಎಡಕ್ಕಾನ ಸಹಕರಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!