ಯೂರಿಕ್ ಆಮ್ಲ (Uric Acid) ಎಂಬುದು ನಮ್ಮ ದೇಹವು (Body) ಪ್ಯೂರಿನ್ಗಳನ್ನು ಒಡೆಯುವಾಗ ಉತ್ಪಾದಿಸುವ ಒಂದು ನೈಸರ್ಗಿಕ ವಸ್ತುವಾಗಿದೆ. ಈ ಪ್ಯೂರಿನ್ಗಳು ಮಾಂಸ (Meat), ಸಮುದ್ರಾಹಾರ ಮತ್ತು ತರಕಾರಿಗಳಂತಹ (Vegetables) ದೈನಂದಿನ ಆಹಾರ (Food) ಪದಾರ್ಥಗಳಲ್ಲಿಯೂ ಕಂಡು ಬರುತ್ತವೆ ಮತ್ತು ಇದು ದೇಹದ ಸ್ವಂತ ಜೀವಕೋಶಗಳಿಂದ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ, ಯೂರಿಕ್ ಆಮ್ಲವು ರಕ್ತ ವ್ಯವಸ್ಥೆಯಲ್ಲಿ ಕರಗುತ್ತದೆ ಮತ್ತು ಮೂತ್ರಪಿಂಡಗಳ ಮೂಲಕ ದೇಹವನ್ನು ಬಿಡುತ್ತದೆ, ಆದರೆ ಕೆಲವೊಮ್ಮೆ ಅದು ಸಂಗ್ರಹವಾಗುತ್ತದೆ. ಈ ಸ್ಥಿತಿಯನ್ನು ವೈದ್ಯಕೀಯವಾಗಿ ಹೈಪರ್ಯೂರಿಸೆಮಿಯಾ ಎಂದು ಕರೆಯಲಾಗುತ್ತದೆ.
ಯೂರಿಕ್ ಆಮ್ಲದ ಮಟ್ಟವನ್ನು ನಿರ್ವಹಿಸಲು ಅತ್ಯಂತ ಸರಳವಾದ ಮತ್ತು ಅಷ್ಟೇ ಪರಿಣಾಮಕಾರಿಯಾದ ವಿಧಾನವೆಂದರೆ ಸದಾ ಕಾಲ ದೇಹವನ್ನು ಹೈಡ್ರೆಟ್ ಆಗಿರಿಸಿಕೊಳ್ಳುವುದು ಆಗಿರುತ್ತದೆ. ಹೈಡ್ರೇಟ್ ಆಗಿರುವುದು ಎಂದರೆ ನೀರು ಕುಡಿಯುವುದು ಆಗಿರುತ್ತದೆ, ಇದು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸಲು ಸಕ್ರಿಯವಾಗಿ ಕೊಡುಗೆ ನೀಡುತ್ತದೆ, ಅಲ್ಲದೆ ಇದು ಒಟ್ಟಾರೆ ಮೂತ್ರಪಿಂಡದ ಆರೋಗ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ಸಹ ವಹಿಸುತ್ತದೆ.
ಯೂರಿಕ್ ಆಮ್ಲ ನಿಯಂತ್ರಣಕ್ಕೆ ಹೈಡ್ರೆಟ್ ಆಗಿರುವುದು ಏಕೆ ಮುಖ್ಯವಾಗುತ್ತದೆ?
ನೀರು ದೇಹದ ನೈಸರ್ಗಿಕ ನಿರ್ವಿಶೀಕರಣಕಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಯೂರಿಕ್ ಆಮ್ಲವನ್ನು ದುರ್ಬಲಗೊಳಿಸುತ್ತದೆ, ಇದರಿಂದಾಗಿ ಮೂತ್ರಪಿಂಡಗಳ ಮೂಲಕ ಹಾದು ಹೋಗಲು ಸುಲಭವಾಗುತ್ತದೆ. ದೇಹದಲ್ಲಿ ಕಡಿಮೆ ದ್ರವ ಲಭ್ಯವಿದ್ದಾಗ, ಇದು ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ, ಕೀಲುಗಳು ಮತ್ತು ಮೂತ್ರಪಿಂಡಗಳಲ್ಲಿ ಸ್ಫಟಿಕೀಕರಣದ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ.
ಚೀನೀ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಗೌಟ್ ರೋಗಿಗಳು ಮತ್ತು ಹೈಪರ್ಯುರಿಸೆಮಿಯಾ ರೋಗಿಗಳು ಪ್ರತಿದಿನ 2000-3000 ಮಿಲಿ ಲೀಟರ್ ನೀರನ್ನು ಕುಡಿಯಲು ಸಲಹೆ ನೀಡುತ್ತದೆ ಎಂದು ಹೇಳುತ್ತದೆ. ವಾಸ್ತವವಾಗಿ, ಹೆಚ್ಚಿನ ನೀರನ್ನು ಕುಡಿಯುವುದರಿಂದ ಯೂರಿಕ್ ಆಮ್ಲ ನೆಪೋರ್ಲಿಥಿಸಿಸ್ ಅಥವಾ ಯೂರಿಕ್ ಆಮ್ಲ ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಪುರುಷರಿಗೆ ದಿನಕ್ಕೆ 15 ಕಪ್ ನೀರು ಮತ್ತು ಮಹಿಳೆಯರಿಗೆ 11 ಕಪ್ ನೀರು ಬೇಕಾಗುತ್ತದೆ..
ನೀರು ಸೇವನೆಯ ವಿಷಯದಲ್ಲಿ ಎಲ್ಲರಿಗೂ ಒಂದೇ ರೀತಿಯ ವಿಧಾನವಿಲ್ಲದಿದ್ದರೂ, ಹೆಚ್ಚಿನ ಜನರಿಗೆ ದಿನಕ್ಕೆ 4-6 ಕಪ್ ನೀರು ಬೇಕಾಗುತ್ತದೆ ಆದರೆ ಒಟ್ಟು ನೀರಿನ ಅವಶ್ಯಕತೆ ಪುರುಷರಿಗೆ 15.5 ಕಪ್ ಮತ್ತು ಮಹಿಳೆಯರಿಗೆ 11.5 ಕಪ್ ಆಗಿದೆ ಎಂದು ಹಾರ್ವರ್ಡ್ ಹೆಲ್ತ್ ತಿಳಿಸಿದೆ. ನೀವು ಹೇಗೆ ಕುಡಿಯುತ್ತೀರಿ ಎಂಬುದು ಎಷ್ಟು ಮುಖ್ಯವೋ ದಿನವಿಡೀ ನೀರನ್ನು ಕುಡಿಯುವುದು ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕುಡಿಯುವುದಕ್ಕಿಂತ ಉತ್ತಮವಾಗಿದೆ.