ಉರ್ವ ರಾಮ ಮಂದಿರ ಬಳಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ; ಶಾಸಕ ವೇದವ್ಯಾಸ ಕಾಮತ್ ನೇತೃತ್ವ
ಮ.ನ.ಪಾ ವ್ಯಾಪ್ತಿಯ 27ನೇ ಬೋಳೂರು ವಾರ್ಡಿನ ಉರ್ವ ರಾಮ ಮಂದಿರದ ಬಳಿ ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯ ಮೂಲಕ ನಡೆಯಲಿರುವ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ನಿಕಟಪೂರ್ವ ಮ.ನ.ಪಾ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು ಸಹಿತ ಸ್ಥಳೀಯ ಪ್ರಮುಖರ ವಿಶೇಷ ಮನವಿಯ ಮೇರೆಗೆ ಉರ್ವ ಮೈದಾನದ ಹಿಂಬದಿ ಇರುವ ಪುರಾತನ ರಾಮ ಮಂದಿರ ಹಾಗೂ ಕೊರಗಜ್ಜನ ಕ್ಷೇತ್ರದ ಈ ಪರಿಸರದಲ್ಲಿ ಮೇಲ್ಚಾವಣಿಯ ಕಾಮಗಾರಿಗೆ ಶಿಲನ್ಯಾಸ…