ಕುದ್ಮುಲ್ ರಂಗರಾವ್ ಪುಣ್ಯಸ್ಮರಣೆ: ಬಾಬುಗುಡ್ಡೆಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದಿಂದ ಪುಷ್ಪ ನಮನ

ದಲಿತೋದ್ಧಾರಕ, ಸಾಮಾಜಿಕ ಸುಧಾರಣೆಯ ಹರಿಕಾರ ಕುದ್ಮುಲ್ ರಂಗರಾವ್ ರವರ ಪುಣ್ಯಸ್ಮರಣೆಯ ಅಂಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಎಸ್ ಸಿ ಮೋರ್ಚಾ ವತಿಯಿಂದ ಬಾಬುಗುಡ್ಡೆಯಲ್ಲಿರುವ ಅವರ ಸಮಾಧಿಗೆ ಪುಷ್ಪ ನಮನಗಳನ್ನು ಸಲ್ಲಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ದಕ್ಷಿಣ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಹಿರಿಯ ನಾಯಕರಾದ ಮೋನಪ್ಪ ಭಂಡಾರಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ನಂದನ್ ಮಲ್ಯ, ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ, ನಿಕಟ ಪೂರ್ವ ಕಾರ್ಪೊರೇಟರ್ ಗಳಾದ ಭರತ್ ಕುಮಾರ್, ವೀಣಾ…

Read More

ಇಂದಿನಿಂದ ಕದ್ರಿ ಪಾರ್ಕ್‍ನಲ್ಲಿ ರುಚಿಕರ ತಿನಿಸುಗಳ ಘಮ ಘಮಿಸುವ ‘ಸ್ಟ್ರೀಟ್‍ಫುಡ್ ಫೆಸ್ಟಿವಲ್’*

ಮಂಗಳೂರು:ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಆಹಾರ ಮೇಳವು ಜನವರಿ 30 ರಿಂದ ಫೆಬ್ರವರಿ 1 ರವರೆಗೆ ಮಂಗಳೂರು ನಗರದ ಕದ್ರಿ ಪಾರ್ಕ್‍ನಲ್ಲಿ ನಡೆಯಲಿದೆ.ಈ ಆಹಾರ ಮೇಳದಲ್ಲಿ ಕರಾವಳಿ ಪ್ರದೇಶದ ವೈವಿಧ್ಯಮಯ ಹಾಗೂ ಸಮೃದ್ಧ ಪಾಕ ಪರಂಪರೆಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದ್ದು, ಸ್ಥಳೀಯ ಹಾಗೂ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸಲಿದೆ. ಆಹಾರ ಪ್ರಿಯ ನಾಗರಿಕರಿಗೆ ವಿಶೇಷ ಅನುಭವವನ್ನು ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಉತ್ಸವದಲ್ಲಿ ಎಲ್ಲ ವರ್ಗದ ಜನರಿಗೆ ರುಚಿಕರ ಹಾಗೂ ವೈವಿಧ್ಯಮಯ…

Read More

ಮಂಗಳೂರು ಮಟ್ಟದ ಗ್ಯಾರಂಟಿ ಯೋಜನೆ ಪರಿಶೀಲನೆ ಸಭೆ

ಮಂಗಳೂರು- ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುμÁ್ಟನ ಸಮಿತಿಯ ಸಭೆ ಸುರೇಂದ್ರ ಕಂಬಳಿ ಅಧ್ಯಕ್ಷತೆಯಲ್ಲಿ ಗುರುವಾರ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.2025 ರ ಅಕ್ಟೋಬರ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಸಹಾಯಧನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ವೇತಾ ತಿಳಿಸಿದರು. ಉಳಾಯಿಬೆಟ್ಟು ಸಂಕಮಾಡು ಮಾರ್ಗವಾಗಿ ಹೊಸ ಕೆಎಸ್‍ಆರ್‍ಟಿಸಿ ಬಸ್ಸು ಮಂಜೂರಾಗಿದ್ದು, ಶೀಘ್ರವೇ ಪ್ರಾರಂಭಿಸುವಂತೆ ಸಮಿತಿಯ ಸದಸ್ಯ ನವಾಜ್ ಒತ್ತಾಯಿಸಿದಾಗ, ಕೆಎಸ್‍ಆರ್‍ಟಿಸಿ ಅಧಿಕಾರಿ ಅವರು ಸಕರಾತ್ಮಕವಾಗಿ ಸ್ಪಂದಿಸಿದರು. ಸಭೆಯಲ್ಲಿ…

Read More

ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ

ಮಂಗಳೂರು:- ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಕೀಲರ ಸಂಘ ಮಂಗಳೂರು ಇವರ ಸಹಯೋಗದಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಎರಿಕ್ .ಡಿ. ಕುನ್ಹಾ ಮಾತನಾಡಿ, ಅರಣ್ಯ ನಾಶ, ಆಹಾರ ಮತ್ತು ರಸ್ತೆಗಳ ನಿರ್ಮಾಣ, ಅಕ್ರಮ ವಸತಿ ಹಾಗೂ ಅಭಿವೃದ್ಧಿ ಕಾರ್ಯಗಳು ವನ್ಯಜೀವಿಗಳ ಸ್ವಾಭಾವಿಕ ವಾಸಸ್ಥಾನವನ್ನು ಕುಗ್ಗಿಸುತ್ತಿದೆ. ಅರಣ್ಯ ಅವಲಂಬಿತ ಬುಡಕಟ್ಟು ಸಮುದಾಯಗಳು ಈ ಮಾನವ–ಪ್ರಾಣಿ ಸಂಘರ್ಷದಿಂದ ಹೆಚ್ಚು ತೊಂದರೆ ಅನುಭವಿಸುತ್ತಿವೆ. ಹಾವು ಕಡಿತ,…

Read More

ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ಜ.29 (ಕ.ವಾ):- ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಸೂಚಿಸಿದ್ದಾರೆ.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕುಡಿಯುವ ನೀರಿನ ಸಮಗ್ರ ನಿರ್ವಹಣೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ನಗರ ಸ್ಥಳೀಯ ವಾರ್ಡುಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ಅಡಚಣೆಯಾಗದಂತೆ ಹಾಗೂ ನೀರಿನ ಕೊರತೆಯಾಗದಂತೆ ಎಲ್ಲಾ ಸ್ಥಳೀಯ…

Read More

ಕಡಲ ನಗರಿ ಉಳ್ಳಾಲದಲ್ಲಿ ಫೆಬ್ರವರಿ 14ರಂದು ವೀರರಾಣಿ ಅಬ್ಬಕ್ಕ ಉತ್ಸವ : ಮಾಜಿ ಶಾಸಕ ಜಯರಾಂ ಶೆಟ್ಟಿ

ಮಂಗಳೂರು:ಪರಕೀಯ ಪೋರ್ಚುಗೀಸರ ವಿರುದ್ಧ ಹೋರಾಡಿ ಈ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಪ್ರಪ್ರಥಮ ಸ್ವಾತಂತ್ರ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕಳ ಸಾಧನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ವೀರರಾಣಿ ಅಬ್ಬಕ್ಕ ಉತ್ಸವವವನ್ನು ಕಳೆದ ಹಲವು ವರ್ಷಗಳಿಂದ ಆಚರಿಸುತ್ತಾ ಬಂದಿದ್ದು . ಈ ಬಾರಿ ಫೆಬ್ರವರಿ 14ರಂದು ತೊಕ್ಕೊಟ್ಟು ಒಳಪೇಟೆಯ ಡಾ.ಅಂಬೇಡ್ಕರ್ ರಂಗಮಂದಿರದಲ್ಲಿ ಅತ್ಯಂತ ವಿಜೃಂಭಣೆಯಿಂದ ವೀರರಾಣಿ ಅಬ್ಬಕ್ಕ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಜಯರಾಂ ಶೆಟ್ಟಿ ಹೇಳಿದರು. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಈ…

Read More

ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು ಎಸ್ಕೇಪ್; ರಿಕ್ಷಾ ಚಾಲಕ ಸಾವು; ಸಿಸಿಟಿವಿ ದೃಶ್ಯ ಲಭ್ಯ

ಕಾರೊಂದು ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾದ ನಂತರ ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಎದುರಿನಿಂದ ಬಂದ ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಸಂಪಾಜೆ ಗೇಟಿನ ಬಳಿ ನಡೆದಿದೆ. ಅದರ ಸಿಸಿಟಿವಿ ವೀಡಿಯೋ ಲಭ್ಯವಾಗಿದೆ. ರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು ಸಂಪಾಜೆ ಪೆಟ್ರೋಲ್‌ ಪಂಪ್‌ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಲಾರಿಯಡಿಗೆ ರಿಕ್ಷಾ…

Read More

ಕಾಪಿಕಾಡುವಿನ ಶ್ರೀ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಫೆ.1ರಿಂದ 6ರ ತನಕ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶರವು ಮಹಾಗಣಪತಿ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆಗೆ ಚಾಲನೆ …!

ಮಂಗಳೂರು:ತೊಕ್ಕೊಟ್ಟು, ಕಾಪಿಕಾಡುವಿನ ಶ್ರೀ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಫೆ.1ರಿಂದ 6ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದ್ದು ಈ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆಯು ಶರವು ಮಹಾಗಣಪತಿ ದೇವಸ್ಥಾನ ದಿಂದ ಶ್ರೀ ಉಮಾಮಹೇಶ್ವರಿ ಕ್ಷೇತ್ರಕ್ಕೆ ಹೊರಡಿತು . ಈ ಸಂದರ್ಭದಲ್ಲಿ ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರೀ , ಮಾಜಿ ಸಂಸದ ನಳಿನ್ ಕುಮಾರ್ ಕಟೀಲು , ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಂಪಲ , ಹೊರೆ ಕಾಣಿಕೆ ಸಮಿತಿ ಉಸ್ತುವಾರಿ ಮೋನಪ್ಪ ಭಂಡಾರಿ , ದೇವಸ್ಥಾನ ದ…

Read More

ಫೆಬ್ರವರಿ 01 ಮತ್ತು 02 ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ ಸಂಭ್ರಮ ….!

ಮಂಗಳೂರು:ಸರಕಾರವು ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಅವುಗಳ ಫಲಾನುಭವಿಗಳನ್ನಾಗಿಸುವಲ್ಲಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು ಮಹತ್ತರ ಪಾತ್ರ ವಹಿಸುತ್ತಿದೆ. ರಾಜ್ಯದ ಮಹಿಳೆಯರ ಏಳಿಗೆಗಾಗಿ ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಒಗ್ಗೂಡಿಸಿ ಫೆಬ್ರವರಿ 01 ಮತ್ತು 02 ರಂದು ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ಮೈದಾನದಲ್ಲೂ ಹಾಗೂ ಸಾಂಸ್ಕೃತಿಕ ಸಮ್ಮೇಳನವು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಒಕ್ಕೂಟದ ಅಧ್ಯಕ್ಷೆ…

Read More

ಮಂಚಿಯಲ್ಲಿ ಎಸ್ ವಿ ಎಸ್ ಕಾಲೇಜು ಎನ್.ಎಸ್.ಎಸ್. ಶಿಬಿರ ಉದ್ಘಾಟನೆ

ವಿದ್ಯಾರ್ಥಿಯು ಕೇವಲ ಅಧ್ಯಯನಕ್ಕೆ ಸೀಮಿತವಾಗಿರದೆ ಸಾಮಾಜಿಕ ಜೀವನದ ಆಗು-ಹೋಗುಗಳ ಬಗ್ಗೆ ಅರಿವಿರಬೇಕು. ಆಗ ಮಾತ್ರ ಅವನು ಸಂಘಜೀವಿಯಾಗಲು ಸಾಧ್ಯ ಎಂದು ಮಂಚಿ – ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಶಿವಶಂಕರ್ ರಾವ್ ನುಡಿದರು. ಇವರು ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ 2025-26 ನೇ ಸಾಲಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ವಿದ್ಯಾರ್ಥಿಗೆ ಶೈಕ್ಷಣಿಕ ಪ್ರಗತಿಯೊಂದಿಗೆ ನೈತಿಕ ಹಾಗೂ ಸಾಮಾಜಿಕ ಪ್ರಗತಿ ಅತಿಮುಖ್ಯ ಅದು ಶಾಲಾ – ಕಾಲೇಜುಗಳಿಗಿಂತ ಈ ರೀತಿಯ…

Read More
error: Content is protected !!