ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಸಿನಿಮಾಗಳ ಕಡೆಗಣನೆ: ಡಾ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಆರೋಪ

ಮಂಗಳೂರು: ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಚಿತ್ರಗಳನ್ನು ಕಡೆಗಣಿಸುಲಾಗುತ್ತಿದೆ ಎಂದು ಖ್ಯಾತ ಚಲನ‌ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.ರಾಜ್ಯ ಸರ್ಕಾರವು ತುಳು ಮತ್ತು ಇತರ ಪ್ರಾದೇಶಿಕ ಭಾಷಾ ಚಿತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಶಸ್ತಿ ಮತ್ತು ಸಹಾಯಧನ ನೆರವನ್ನು ತುಳು ಚಿತ್ರಗಳಿಗೆ ವಿಸ್ತರಿಸಿದೆ. ಪ್ರತಿ ವರ್ಷ ಒಂದು ಪ್ರಾದೇಶಿಕ ಭಾಷಾ ಚಿತ್ರಕ್ಕೆ ಪ್ರಶಸ್ತಿ ನೀಡುತ್ತದೆ. ತ್ರೈಮಾಸಿಕ ಪ್ರಶಸ್ತಿಗಳನ್ನು ಪಡೆಯುವ ಈ ಚಿತ್ರಗಳು ಸ್ವರ್ದಿಸಿವೆ. 16ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಎರಡನೆ ಮತ್ತು ಮೂರನೇ ಪ್ರಶಸ್ತಿಗಳನ್ನು ತುಳು ಚಿತ್ರಗಳು ಪಡೆದಿದ್ದವು….

Read More

ಮನೆಗೆ ನುಗ್ಗಿದ ಕಳ್ಳರು: ಕಪಾಟು ಜಾಲಾಡಿ ಮೊಬೈಲ್, ವಾಚ್ ಕಳವು

ಉಳ್ಳಾಲ:ಕಳ್ಳರು ಮನೆಗೆ ನುಗ್ಗಿ ಕಪಾಟು ಜಾಲಾಡಿ ಬೆಲೆ ಬಾಳುವ ವಸ್ತುಗಳನ್ನು ಕಳವುಗೈದ ಘಟನೆ ತಲಪಾಡಿ ಗ್ರಾಮ ಕೆಸಿನಗರ ಪಲಾಹ್ ಸ್ಕೂಲ್ ಬಳಿ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ.ಕೆಸಿನಗರ ನಿವಾಸಿ ಅಬೂಬಕ್ಕರ್ ಎಂಬವರ ಮನೆಯಲ್ಲಿ ಈ ನಡೆದಿದೆ.ಎಲಿಯಾರ್ ಪದವು ಅಂಗಡಿ ಹೊಂದಿದ್ದ ಅಬೂಬಕ್ಕರ್ ಅವರು ಕಳೆದ 25 ವರ್ಷ ಗಳಿಂದ ಸೌದಿ ಅಲ್ ಕೋಬಾರ್ ನಲ್ಲಿ ಉದ್ಯೋಗ ದಲ್ಲಿ ಇದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಅಬೂಬಕ್ಕರ್ ಪತ್ನಿ ಝೀನತ್ ಪುತ್ರ ಇಝಾಮ್ ಹಾಗೂ ಪುತ್ರಿ ಸಫಾ ಈ ಮನೆಗೆ…

Read More

ತಂದೆಗೆ ಚೂರಿಯಿಂದ ಇರಿದು, ಬಳಿಕ ಕೋವಿಯಿಂದ ಗುಂಡು ಹಾರಿಸಿಕೊಂಡು ಮಗ ಆತ್ಮಹತ್ಯೆ

ಕಡಬ: ಕ್ಷುಲ್ಲಕ ಕಾರಣಕ್ಕೆ ತಂದೆಯೊಂದಿಗೆ ಜಗಳವಾಡಿದ ಮಗನೊಬ್ಬ, ತಂದೆಗೆ ಚೂರಿಯಿಂದ ಇರಿದು ಬಳಿಕ ತಾನೂ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಅವರ ಪುತ್ರ, ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಮೋಕ್ಷ ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ತಂದೆ ವಸಂತ ಅಮೀನ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲತಃ ಕೇರಳದವರಾದ ವಸಂತ ಅಮೀನ್…

Read More

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ ಭಾಗಶಃ ಹಾನಿ ಉಂಟಾಗಿದೆ, ಅತೀವೇಗದ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುತ್ತಾರೆ.

Read More

ಜನವರಿ 26ರಿಂದ ಬೃಹತ್ ಕಮ್ಯುನಿಟಿ ಫೆಸ್ಟ್ , ಸಪ್ತ ದಿನಗಳ ಕ್ರೀಡಾ ಕೂಟ, ಉದ್ಯೋಗ ಮೇಳ, ರಕ್ತದಾನ ಶಿಬಿರ ಹಾಗೂ ಫುಡ್ ಫೆಸ್ಟ್ ಮೆರುಗಿಗೆ ಕಡಲ ನಗರಿ ಉಳ್ಳಾಲ ಸಾಕ್ಷಿ…. !

ಮಂಗಳೂರು:ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ವತಿಯಿಂದ ನಗರದ ಉಳ್ಳಾಲದಲ್ಲಿ ಏಳು ದಿನಗಳ ಕಾಲ ಬೃಹತ್ ಕಮ್ಯುನಿಟಿ ಫೆಸ್ಟ್ ನಡೆಯಲಿದೆ. ಯುವ ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜನವರಿ 26ರಿಂದ ಫೆ:01 ರ ತನಕ ಏಳು ದಿನಗಳ ವಿವಿಧ ಕ್ರೀಡಾಕೂಟಗಳ ಜೊತೆಗೆ ಉದ್ಯೋಗ ಮೇಳ, ರಕ್ತದಾನ ಶಿಬಿರ ಹಾಗೂ ಆಹಾರ ಮೇಳ ನಡೆಯಲಿದ ಎಂದು ಸಂಸ್ಥೆಯ ರಾಜ್ಯ ಅಧ್ಯಕ್ಷರಾದ ಸಿರಾಜ್ ಎರ್ಮಾಳ್ ತಿಳಿಸಿದರು. ಅವರು ಖಾಸಗಿ ಮಾಲ್ ನಲ್ಲಿ ನಡೆಸಿದ…

Read More

ಹಿಂಸಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರೆ ಕಠಿಣ ಕ್ರಮ ಖಚಿತ: ದಿನೇಶ್ ಗುಂಡೂರಾವ್

ಮಂಗಳೂರು:ಯಾವುದೇ ಶಕ್ತಿ ಅಥವಾ ವ್ಯಕ್ತಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಇಲ್ಲಿನ ಯುವಕರನ್ನು ದಾರಿ ತಪ್ಪಿಸಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹಿಸುವುದನ್ನು ಸರ್ಕಾರ ಸಹಿಸುವುದಿಲ್ಲ. ಇಂತಹ ಕೃತ್ಯಗಳು ಕಂಡುಬಂದಲ್ಲಿ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದರು. ನಗರದ ನೆಹರೂ ಮೈದಾನದಲ್ಲಿ ಇಂದು ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು .ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮಗಳ…

Read More

ಮೂಡಬಿದ್ರೆಯಲ್ಲಿ ದಿಶಾ ಟ್ರಸ್ಟ್–ತೋಟಗಾರಿಕಾ ಇಲಾಖೆ ಜಂಟಿ ಬೆಳೆ ಸಂರಕ್ಷಣೆ ಮಾಹಿತಿ ಕಾರ್ಯಾಗಾರ

ಮಂಗಳೂರು:ದಿಶಾ ಟ್ರಸ್ಟ್ ರಿ. ಕೈಕಂಬ ಮಂಗಳೂರು ಮತ್ತು ಮಂಗಳೂರು ತಾಲೂಕು ತೋಟಗಾರಿಕಾ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ  ಬೆಳೆ ಸಂರಕ್ಷಣೆ ಕುರಿತ ಮಾಹಿತಿ ಕಾರ್ಯಾಗಾರ ಮೂಡಬಿದ್ರೆಯಲ್ಲಿ ನಡೆಯಿತು.ಕೃಷಿಕರ ನೆಲ ಜಲ ಅಭಿವೃದ್ಧಿ ಸಂಘ ಶಿರ್ತಾಡಿ , ಮಕ್ಕಿ ಕಜೆ ಇವರ ಸಹಕಾರದೊಂದಿಗೆ   ಮೂಡಬಿದ್ರೆ ತಾಲೂಕಿನ  ಶಿರ್ತಾಡಿ  ಗ್ರಾಮ ಪಂಚಾಯತ್  ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು  ದಿಶಾ ಟ್ರಸ್ಟ್ ನ  ಯೋಜನಾ ನಿರ್ದೇಶಕರಾದ ಡಾ. ಐರಿನ್ ವೇಗಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮುಂದಿನ ಮೂರು ವರ್ಷಗಳಲ್ಲಿ  ನೈಸರ್ಗಿಕ ಸಂಪನ್ಯೂಲ   ಯೋಜನೆಯನ್ನು…

Read More

ರಾಜ್ಯಪಾಲರನ್ನು ಅಗೌರವಿಸಲೆಂದೇ ವಿಶೇಷ ಅಧಿವೇಶನನ್ನು ಕರೆಯಲಾಗಿದೆ , ಬಿ ಕೆ ಹರಿಪ್ರಸಾದ್ ಗೂಂಡಾ ವರ್ತನೆ ಸರಿಯಲ್ಲ : ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ

ಮಂಗಳೂರು: ಕಾಂಗ್ರೆಸ್ ಸಂವಿಧಾನಕ್ಕೆ ಅಗೌರವವನ್ನು ತೋರಿಸುವ ರೀತಿಯಲ್ಲಿ ಮೊನ್ನೆಯ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರನ್ನು ಅಗೌರವಿಸಿದ್ದಾರೆ ಎಂದು ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು . ಬರೀ ಬಾಯಿ ಮಾತಿನಲ್ಲಿ ಮಾತ್ರ ಸಂವಿಧಾನಕ್ಕೆ ಕಾಂಗ್ರೆಸಿಗರು ಗೌರವವನ್ನು ನೀಡುತ್ತಾರೆ . ಆದರೆ ಅದರ ಆಶಯಗಳಿಗೆ ಅವರು ಬದ್ದರಾಗುವುದಿಲ್ಲ . ರಾಜ್ಯಪಾಲರ ಮೇಲೆ ಸುಳ್ಳು ಆಪಾಧನೆಯನ್ನು ಅವರು ಮಾಡ್ತಾ ಇದ್ದಾರೆ . ಈ ಜಂಟಿ ಅಧಿವೇಶವನ್ನೇ ಕರೆದಿರುವುದೇ ರಾಜ್ಯಪಾಲರನ್ನು ಅಗೌರವಿಸಲು ಎಂದು ಅವರು ಹೇಳಿದರು…

Read More

ಕಾರ್ಕಳ: ಭೀಕರ ರಸ್ತೆ ಅಪಘಾತ- ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ, 9 ಮಂದಿಗೆ ಗಾಯ

ಉಡುಪಿ: ಕಾರ್ಕಳ‌ ತಾಲೂಕಿನ ಮಿಯಾರು ಗ್ರಾಮದ ಕಂಬಳಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದ್ದು, ಮಗು ಸಹಿತ 9 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ತೂಫನ್ ವಾಹನ ಚಾಲಕ ಮಣ್ಣಪ್ಪ, ಚೇತನ್(27), ರೋಹಿತ್(28) ಹಾಗೂ ಮಲ್ಲಮ್ಮ(50) ಎಂದು ಗುರುತಿಸಲಾಗಿದೆ. ಸಂಗೀತ (40), ಕವಿತಾ(38), ಬಸವರಾಜ್(56), ಕಿಶೋರ್(28), ಲಕ್ಷ್ಮೀ(25), ಜ್ಯೋತಿ(25), ಜಯಲಕ್ಷ್ಮೀ(24), ಎರಡು ವರ್ಷದ ಮಗು ಕುಶಲ್ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲ ಗುಲ್ಬರ್ಗ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ…

Read More

ಫೆ14 ಮತ್ತು 15ರಂದು ಜಪ್ಪಿನಮೊಗರಿನಲ್ಲಿ 16ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳ ಜಾತ್ರೆ

ಕರಾವಳಿ ಕರ್ನಾಟಕ ಭಾಗದ ಸಾಂಪ್ರದಾಯಿಕ ಜನಪದ ಕ್ರೀಡೆಯಾದ ಕಂಬಳವನ್ನು ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಬೇಕ್ಕೆನ್ನುವ ಉದ್ದೇಶದಿಂದ ಜಯ-ವಿಜಯಜೋಡುಕರೆ ಕಂಬಳ ಸಮಿತಿ (ರಿ) ಜಪ್ಪಿನಮೊಗರು ಇವರ ನೇತೃತ್ವದಲ್ಲಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೀಷ ಜೆ. ಜಯಗಂಗಾಧರ ಶೆಟ್ಟಿಯವರ ಸ್ಮರಣಾರ್ಥ 16ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ಫೆ ೧೪ ಮತ್ತು ೧೫ ರಂದು ನಡೆಯಲಿದೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಸಮಿತಿಯಯ ಗೌರವಾಧ್ಯಕ್ಷರಾದ…

Read More
error: Content is protected !!