ಸಿಎಂ ಗಾದಿ ಪೈಪೋಟಿಯೇ ಸರ್ಕಾರದ 3 ವರ್ಷದ ಸಾಧನೆ: ಸತೀಶ್ ಕುಂಪಲ

ಮಂಗಳೂರು, ಮೇ 2: ರಾಜ್ಯ ಸರ್ಕಾರ ಆಡಳಿತ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಪೈಪೋಟಿಯೇ ಕಳೆದ ಮೂರು ವರ್ಷಗಳ ಸರ್ಕಾರದ ಸಾಧನೆಯಾಗಿದೆ ಎಂದು ಸತೀಶ್ ಕುಂಪಲ ಟೀಕಿಸಿದ್ದಾರೆ.

ಮಂಗಳೂರಿನ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದರು. ಸರ್ಕಾರವೇ ಘೋಷಿಸಿದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸಹ ಸಮರ್ಪಕವಾಗಿ ಸೌಲಭ್ಯಗಳು ತಲುಪುತ್ತಿಲ್ಲ ಎಂದರು.

ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಒಳಜಗಳ ಹಾಗೂ ನಾಯಕತ್ವದ ಗೊಂದಲದಿಂದ ಆಡಳಿತ ಯಂತ್ರ ದುರ್ಬಲವಾಗಿದೆ ಎಂದು ಹೇಳಿದರು.

ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಅಧಿಕಾರಕ್ಕಾಗಿ ಒಳಪೈಪೋಟಿ ನಡೆಯುತ್ತಿದೆ ಎಂದು ಸತೀಶ್ ಕುಂಪಲ ವಾಗ್ದಾಳಿ ನಡೆಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!