ಬಿಲ್ ಪಾವತಿಸದ ಕಾರಣ ಕೊರಗ ಕುಟುಂಬಗಳ ನೀರು ಕಡಿತ: ಚೇಳ್ಯಾರು ಗ್ರಾ.ಪಂ ವಿರುದ್ಧ ಸಿಪಿಐಎಂ ಆಕ್ರೋಶ
ಮಂಗಳೂರು: ಮಂಗಳೂರಿನ ಚೇಳ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ದುರ್ಬಲವಾದ ಆರು ಕೊರಗ ಬುಡಕಟ್ಟು ಕುಟುಂಬಗಳ ಕುಡಿಯುವ ನೀರಿನ ಸಂಪರ್ಕವನ್ನು ಬಿಲ್ ಪಾವತಿಸದ ಕಾರಣಕ್ಕೆ ಕಡಿತಗೊಳಿಸಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗುರುವಾರ ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಕುಟುಂಬಗಳ ಮನೆಗಳಿಗೆ ನೀಡಿದ್ದ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯವನ್ನು ಈ ಹಿಂದೆ ಜಿಲ್ಲಾಡಳಿತದ ಗಮನಕ್ಕೂ ತರಲಾಗಿತ್ತು. ಆದರೆ ಅದಾದ ಬಳಿಕ ಪಂಚಾಯತ್ ಆಡಳಿತ ಸೇಡು ತೀರಿಸುವ ರೀತಿಯಲ್ಲಿ ನಿರ್ದಯವಾಗಿ ವರ್ತಿಸಿದೆ ಎಂದು ಆರೋಪಿಸಲಾಗಿದೆ….
