ತಲೆಗೆ ಚೊಂಬು ಸಿಕ್ಕಿಕೊಂಡು ಪರದಾಡುತ್ತಿದ್ದ ಕೋತಿ ರಕ್ಷಣೆ: ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ

ಉಡುಪಿ: ಕಳೆದ ಎರಡು–ಮೂರು ದಿನಗಳಿಂದ ತಲೆಗೆ ಚೊಂಬು ಸಿಕ್ಕಿಕೊಂಡು ಪರದಾಡುತ್ತಿದ್ದ ಕೋತಿಯೊಂದನ್ನು ಸ್ಥಳೀಯರು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಪೆರ್ಣಂಕಿಲ ಗ್ರಾಮದ ಚಿತ್ರಬೈಲು ಪ್ರದೇಶದಲ್ಲಿ ನಡೆದಿದೆ. ಪರಿಸರದಲ್ಲಿ ಚೊಂಬು ತಲೆಗೆ ಹಾಕಿಕೊಂಡು ಅಲೆದಾಡುತ್ತಿದ್ದ ಕೋತಿಯನ್ನು ಸ್ಥಳೀಯ ಸಮಾಜಸೇವಕರು ಹಾಗೂ ಪರಿಸರ ಪ್ರೇಮಿ ನವೀನ್ ಕುಮಾರ್ ಚಿತ್ರಬೈಲು ಅವರು ಗಮನಿಸಿದರು. ಈ ವಿಷಯವನ್ನು ತಿಳಿದ ಅವರು ಸುಕೇಶ್, ಹರೀಶ ರಾಮ ಹಾಗೂ ವಿಶ್ವನಾಥ ಅವರೊಂದಿಗೆ ಸೇರಿ ಕೋತಿಯನ್ನು ರಕ್ಷಿಸಲು ಮುಂದಾದರು. ಸ್ಥಳೀಯ ಯುವಕರು ಕೋತಿಯನ್ನು ಎಚ್ಚರಿಕೆಯಿಂದ ಹಗ್ಗದ ಸಹಾಯದಿಂದ…

Read More

ಪಡೀಲ್‌ನಲ್ಲಿ ರಸ್ತೆ ಅಪಘಾತ: ಬೈಕ್‌ಗೆ ಗೂಡ್ಸ್ ಟೆಂಪೋ ಡಿಕ್ಕಿ – ಯುವಕ ಮೃತ್ಯು

ಮಂಗಳೂರು: ಗೂಡ್ಸ್ ಟೆಂಪೋವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರಿನ ಪಡೀಲ್ ಸಮೀಪ ನಡೆದಿದೆ. ಮೃತರನ್ನು ಸಚ್ಚೇರಿಪೇಟೆ ಕುದ್ರೋಟ್ ನಿವಾಸಿ ಸಜೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ಅವರು ಮಂಗಳೂರಿನ ಟಾಟಾ ಶೋರೂಮ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಮಾ. 9ರಂದು ಬೆಳಿಗ್ಗೆ ಸಜೇಶ್ ಅವರು ತಮ್ಮ ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪಡೀಲ್ ಸಮೀಪದ ತಿರುವಿನಲ್ಲಿ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ಪರಿಣಾಮ ಬೈಕ್ ಸಮೇತ ರಸ್ತೆಗೆ…

Read More

ಅತ್ತಾವರ 55ನೇ ವಾರ್ಡಿನಲ್ಲಿ ರಸ್ತೆ ಅಗಲೀಕರಣ–ತಡೆಗೋಡೆ ಕಾಮಗಾರಿಗೆ ಭೂಮಿಪೂಜೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡಿನಲ್ಲಿ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿತು. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಭೂಮಿಪೂಜೆ ಕಾರ್ಯಕ್ರಮವು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಅಗತ್ಯವಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಕಾಮಗಾರಿಗೆ ಅನುದಾನ ಮಂಜೂರಾಗಿತ್ತು ಎಂದು ಹೇಳಿದರು….

Read More

ಪುತ್ತೂರು: ಸೇಡಿಯಾಪಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಹಾಗೂ 300 ಹಾಸಿಗೆಗಳ ಆಸ್ಪತ್ರೆ – ವಿರೋಧದ ಮಧ್ಯೆಯೇ ಯೋಜನೆಗೆ ಬೆಂಬಲ

ಪುತ್ತೂರು: ಬನ್ನೂರು ಗ್ರಾಮದ ಸೇಡಿಯಾಪು ಪ್ರದೇಶದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಮತ್ತು 300 ಹಾಸಿಗೆಗಳ ಆಸ್ಪತ್ರೆ ಆರಂಭಿಸಲು ರಾಜ್ಯ ಸರ್ಕಾರ ಈಗಾಗಲೇ ಅನುಮತಿ ನೀಡಿದೆ ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಹೇಳಿದರು. ಈ ಯೋಜನೆಗೆ ಬಿಜೆಪಿಯವರು ಅನಗತ್ಯವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದು “ಮೊಸರಲ್ಲಿ ಕಲ್ಲು ಹುಡುಕುವ ಕೆಲಸ” ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದು, ಶಾಸಕ ಅಶೋಕ್ ಕುಮಾರ್ ರೈ…

Read More

ಮಂಗಳೂರು ಜಂಕ್ಷನ್‌ನಲ್ಲಿ ಭರ್ಜರಿ ಕಾರ್ಯಾಚರಣೆ: 10 ಲಕ್ಷ ಮೌಲ್ಯದ 201 ಮೊಬೈಲ್ ವಶ

ಮಂಗಳೂರು: ಕೇರಳ ವಿಧಾನಸಭೆ ಚುನಾವಣೆಯ ಹಿನ್ನೆಲೆ ರೈಲುಗಳಲ್ಲಿ ತಪಾಸಣೆ ಬಿಗಿಗೊಳಿಸಿರುವ ರೈಲ್ವೇ ಪೊಲೀಸರು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು ರೂ.10 ಲಕ್ಷ ಮೌಲ್ಯದ 201 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಚ್ 9ರಂದು ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಆಗಮಿಸಿದ ಜಾಮ್‌ನಗರ–ತಿರುನೆಲ್ವೇಲಿ ಜಂಕ್ಷನ್ ಎಕ್ಸ್‌ಪ್ರೆಸ್ ರೈಲುದಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ ರೈಲಿನ ಸಾಮಾನ್ಯ ಬೋಗಿಯ ಮೇಲಿನ ಲಗೇಜ್ ರಾಕ್‌ನಲ್ಲಿ ವಾರೀಸುದಾರರು ಇಲ್ಲದ ಮೂರು ಬ್ಯಾಗ್‌ಗಳು…

Read More

ಮಂಗಳೂರಿನಲ್ಲಿ ಸೌಹಾರ್ದ ಇಫ್ತಾರ್ ಕೂಟ: “ಪ್ರೀತಿ ಹರಡಲಿ ಎಲ್ಲೆಡೆ” ಸಂದೇಶ

ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ನೇತೃತ್ವದಲ್ಲಿ “ಪ್ರೀತಿ ಹರಡಲಿ ಎಲ್ಲೆಡೆ” ಎಂಬ ಘೋಷವಾಕ್ಯದೊಂದಿಗೆ ರಮಝಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವು ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹಾಗೂ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಪತಿ ಫಾ. ಮೆಲ್ವಿನ್ ಡಿಕುನ್ಹಾ ಎಸ್.ಜೆ. ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಖ್ಯಾತ ಸಾಹಿತಿ ಮತ್ತು ನಿವೃತ್ತ ಶಿಕ್ಷಕಿ…

Read More

ಮುಂಡೋಳಿ ನಿವಾಸಿ ಕೃಷಿಕ ಬೈಕ್ ಅಪಘಾತದಲ್ಲಿ ದಾರುಣ ಸಾವು

ಉಳ್ಳಾಲ: ಕುತಾರ್ ಸಮೀಪದ ಮದನಿ ನಗರ ಮುಖ್ಯ ರಸ್ತೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಪಾದಚಾರಿಯಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಮುಂಡೋಳಿ ನಿವಾಸಿ ದಿನೇಶ್ ಗಟ್ಟಿ (50) ಮೃತಪಟ್ಟವರು. ಅವರು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ದಿನೇಶ್ ಗಟ್ಟಿ ಅವರು ಕೃಷಿಕರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್…

Read More

ಆಟೋ ಗ್ಯಾಸ್ ದರ ಏರಿಕೆ ಆರೋಪ: ರಿಕ್ಷಾ ಚಾಲಕರ ಹಠಾತ್ ಪ್ರತಿಭಟನೆ

ಬಂಟ್ವಾಳ: ಇಲ್ಲಿನ ತಲಪಾಡಿ ಪ್ರದೇಶದಲ್ಲಿರುವ ಆಟೋ ಗ್ಯಾಸ್ ಪಂಪ್‌ನಲ್ಲಿ ಏಕಾಏಕಿ ಯಾವುದೇ ಸೂಚನೆ ನೀಡದೇ ರೂ.10 ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿ ರಿಕ್ಷಾ ಚಾಲಕರು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ. ಬಂಟ್ವಾಳ ತಾಲೂಕಿನ ಕೈಕಂಬ ಸಮೀಪದ ತಲಪಾಡಿ ಮಹಾಲಕ್ಷ್ಮಿ ಆಟೋ ಗ್ಯಾಸ್ ಪಂಪ್‌ನಲ್ಲಿ ಕೆ.ಜಿ.ಗೆ ನಿಗದಿತ ದರಕ್ಕಿಂತ ರೂ.10 ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ರಿಕ್ಷಾ ಚಾಲಕರ-ಮಾಲಕರ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಅವರ ನೇತೃತ್ವದಲ್ಲಿ ಚಾಲಕರು ಪಂಪ್ ಎದುರು ಪ್ರತಿಭಟನೆ ನಡೆಸಿದರು….

Read More

ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುತು ಸಿಗದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು, ಮೃತರ ಗುರುತು ಪತ್ತೆ ಮಾಡಲು ಸಾರ್ವಜನಿಕರ ಸಹಕಾರವನ್ನು ಕಡಬ ಪೊಲೀಸರು ಕೋರಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ, ಮಾರ್ಚ್ 6ರಂದು ಮಧ್ಯಾಹ್ನ ಸುಮಾರು 1.20 ಗಂಟೆಯ ವೇಳೆಗೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಿಳಿನೆಲೆ ಜಂಕ್ಷನ್ ಸಮೀಪದ ಅಂಗಡಿಯ ಬಳಿ ಒಬ್ಬ ವ್ಯಕ್ತಿ ಅಸ್ವಸ್ಥಗೊಂಡು ಮಲಗಿರುವ ಸ್ಥಿತಿಯಲ್ಲಿ ಕಂಡುಬಂದಿದ್ದರು. ಸ್ಥಳೀಯರ ಸಹಾಯದಿಂದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು…

Read More

ಸರಕಾರಿ ಅಧಿಕಾರಿಗಳ ಕೇಸರಿ ನಡಿಗೆ ಸಂವಿಧಾನ ವಿರೋಧಿ: ಎಸ್‌ಡಿಪಿಐ ಆಕ್ರೋಶ”

ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಧೀನ ಸಂಸ್ಥೆಯಾಗಿರುವ ಭಾರತೀಯ ಮಜ್ದೂರು ಸಂಘದ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್. ಆರ್. ತಿಮ್ಮಯ್ಯ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾ.ಅಶೋಕ್ ರೈ ಭಾಗವಹಿಸಿರುವುದನ್ನು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಸರಕಾರಿ ಅಧಿಕಾರಿಗಳು ಸಂವಿಧಾನಬದ್ಧವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕೇ ಹೊರತು, ನಿರ್ದಿಷ್ಟ ಸಿದ್ಧಾಂತದ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ…

Read More
error: Content is protected !!