ಲೇಬರ್ ಕೋಡ್ ಹೆಸರಿನಲ್ಲಿ ಕಾರ್ಪೊರೇಟ್ ಕೋಡ್ ಜಾರಿ – ಸುನಿಲ್ ಕುಮಾರ್ ಬಜಾಲ್

ಕೇಂದ್ರ ಸರಕಾರವು ದೇಶದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳಲು, ಕಾರ್ಮಿಕರ ಹಕ್ಕು ಭಾಧ್ಯತೆಗಳನ್ನು ನಾಶ ಮಾಡಲು, ಕಾರ್ಮಿಕ ಚಳುವಳಿಯನ್ನೇ ಹತ್ತಿಕ್ಕಲು ಹಾಗೂ ಬಂಡವಾಳಿಗರ ಹಿತಾಸಕ್ತಿಗಳನ್ನು ಕಾಪಾಡಲು ದೇಶದ ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಪೊರೇಟ್ ಪರವಾದ 4 ಸಂಹಿತೆಗಳನ್ನು ರೂಪಿಸಿ ತಕ್ಷಣದಿಂದಲೇ ಜಾರಿಯಾಗುವಂತೆ ಏಕಪಕ್ಷೀಯ ತೀರ್ಮಾನವನ್ನು ಕೈಗೊಂಡಿದೆ.ಆದ್ದರಿಂದ ಇದು ಕೇವಲ ಲೇಬರ್ ಕೋಡ್ ಅಲ್ಲ ಬದಲಾಗಿ ಕಾರ್ಪೊರೇಟ್ ಕೋಡ್ ಆಗಿದೆ ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು…

Read More

ಪುತ್ತೂರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ

ಪುತ್ತೂರು: ಪುತ್ತೂರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆಯಾಗಿದ್ದು 4 ಆರೋಪಿಗಳು ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ.ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಮಾಡಿ, ಆರೋಪಿಗಳಾದ ಮುಹಮ್ಮದ್ ಹರ್ಷದ್ (33), ಮುಹಮ್ಮದ್ ಆರೀಶ್ (31),…

Read More

ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಕಾರ್ಮಿಕ ಕಾನೂನುಗಳು ಬಲಿ – ವಸಂತ ಆಚಾರಿ

ಮಂಗಳೂರು: ಸ್ವತಂತ್ರ್ಯ ಹೋರಾಟದಲ್ಲಿ ಮೂಡಿ ಬಂದ ಕಾರ್ಮಿಕ ಚಳುವಳಿ ಬ್ರೀಟೀಷರ ವಿರುದ್ಧ ಪ್ರಬಲ ಹೋರಾಟ,ತ್ಯಾಗ ಬಲಿದಾನದ ಪರಂಪರೆ ಯಿಂದಾಗಿ ಕಾರ್ಮಿಕ ಕಾನೂನುಗಳು ಅಸ್ಥಿತ್ವಕ್ಕೆ ಬಂದಿದೆ.ಸಂವಿಧಾನದಲ್ಲಿ ಕೂಡಾ ಈ ಎಲ್ಲಾ ಆಶಯಗಳು ಪ್ರತಿಫಲನಗೊಂಡಿದೆ.ಮೂಲಭೂತ ಹಕ್ಕುಗಳು,ರಾಜ್ಯ ಸರಕಾರಗಳ ನಿರ್ಧೇಶಕ ಸೂತ್ರಗಳು ಕಾರ್ಮಿಕ ಹೋರಾಟದ ಬಳುವಳಿಗಳು.ಆದರೆ ದೇಶವನ್ನಾಳುವ ಕೇಂದ್ರ ಸರ್ಕಾರ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ಕಾರ್ಮಿಕ ಕಾನೂನುಗಳನ್ನು ಬಲಿ‌ತೆಗೆದುಕೊಂಡಿದೆ ಎಂದು CITU ದ.ಕ ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಹೇಳಿದರು. ಅವರು ಕಾರ್ಮಿಕ ಸಂಹಿತೆಗಳ ವಿರುದ್ದ ಮೂಡಬಿದ್ರೆಯಿಂದ ಮಂಗಳೂರಿಗೆ ಸಂಚರಿಸಲಿರುವ…

Read More

ಮನರೇಗಾ ವಾಪಸ್ಸಾತಿಗೆ ಆಗ್ರಹಿಸಿ ಕೊಳ್ನಾಡಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ಮಯು.ಪಿ.ಎ ಸರಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆಯಾದ ಮನರೇಗಾ ಯೋಜನೆಯ ಹೆಸರು ಹಾಗೂ ಮೂಲ ಸ್ವರೂಪವನ್ನು ಬದಲಾಯಿಸಿ, ಯೋಜನೆಯನ್ನು ದುರ್ಬಲಗೊಳಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನವಿರೋದಿ ಧೋರಣೆಯನ್ನು ಖಂಡಿಸಿ, ಕೊಳ್ನಾಡು ವಲಯ ಕಾಂಗ್ರೆಸ್ ವತಿಯಿಂದ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು, “ಕೃಷಿಕರು ತಮ್ಮ ಸ್ವಂತ ಜಮೀನಿನಲ್ಲಿ ಬಾವಿ, ಹೈನುಗಾರಿಕೆ, ತೋಟ ನಿರ್ಮಾಣ,…

Read More

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಜನವರಿ 2026ರ ಅವಧಿಗೆ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನ…!

ಮಂಗಳೂರು:ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ಜನವರಿ 2026 ಅವಧಿಗೆ ಪ್ರವೇಶವನ್ನು ಘೋಷಿಸಿದೆ, ಪದವಿ,ಸ್ನಾತಕೋತ್ತರ ಪದವಿ,ಡಿಪ್ಲೋಮೋ ಮತ್ತು ಸರ್ಟಿಫಿಕೇಟ್ ಹಂತಗಳಲ್ಲಿ, ಆನ್ವೆನ್ ಅರ್ಜಿಯನ್ನು ಸಲ್ಲಿಸಲು ಆಸಕ್ತ ವಿದ್ಯಾರ್ಥಿಗಳು https://ignouadmission.samarth.edu.in ಪ್ರವೇಶ ಪಡೆಯಬಹುದಾಗಿದೆ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಇದರ ಪ್ರಾದೇಶಿಕ ಉಪ ನಿರ್ದೇಶಕರಾದ ಡಾ.ಕಸ್ತೂರಿ ಪೇಸಾಲ ತಿಳಿಸಿದರು . ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಬ್ಯಾಚುಲ‌ರ್ ಆಫ್ ಆರ್ಟ್ಸ್ , ಬ್ಯಾಚುಲರ್ ಆಫ್ ಕಾಮರ್ಸ್ ಮತ್ತು ಬ್ಯಾಚುಲ‌ರ್…

Read More

ಬಡವರ ಸೇವೆಯಲ್ಲಿ ದೇವರನ್ನು ಕಾಣಬಹುದು: ಪೀಟರ್ ಪಾವ್ಲ್ ಸಲ್ಡಾನಾ

ಬಡವರಿಗಾಗಿ ಮಾಡುವ ಸಹಾಯಕ್ಕೆ ದೇವರ ಕೃಪಾವರಗಳು ಸದಾ ಇದೆ. ಅವರ ಸೇವೆಯಲ್ಲಿ ದೇವರನ್ನು ಕಾಣಲು ಸಾಧ್ಯವಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಪೀಟರ್ ಪಾವ್ಲ್ ಸಲ್ಡಾನಾ ಹೇಳಿದರು.ಅವರು ಮಂಗಳೂರು ಫಾದರ್ ಮುಲ್ಲರ್ಸ್ ಕನ್ವೆಶ್ನನ್ ಸೆಂಟರ್ ನಲ್ಲಿ ಜರುಗಿದ ಮಂಗಳೂರು ಧರ್ಮಪ್ರಾಂತ್ಯದ ಸಂತ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಇದರ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿರುವ, ದಕ ಜಿಲ್ಲೆಯ ಅರ್ಹ ಬಡರೋಗಿಗಳಿಗಾಗಿ 50% ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಜೋಸೆಫ್ ಮಿನೇಜಸ್…

Read More

ನದಿಮಧ್ಯೆ ಧ್ವಜಾರೋಹಣ, ಪ್ರಥಮ ಬೋಟ್ ಆಂಬ್ಯುಲೆನ್ಸ್‌ಗೆ ಚಾಲನೆ

ಮಂಗಳೂರು:ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದ ವತಿಯಿಂದ ನಿರ್ಮಿಸಲಾದ ಪ್ರಥಮ ‘ಬೋಟ್ ಆಂಬ್ಯುಲೆನ್ಸ್’ ಲೋಕಾರ್ಪಣೆ ಕಾರ್ಯಕ್ರಮ ಜಪ್ಪಿನಮೊಗೇರು ನದಿತಟದಲ್ಲಿ ನಡೆಯಿತು.ವಿಧಾನಸಭಾಧ್ಯಕ್ಷ ಡಾ.ಯು.ಟಿ.ಖಾದರ್ ಫರೀದ್ ಬೋಟ್ ಆಂಬ್ಯುಲೆನ್ಸ್’ ಲೋಕಾರ್ಪಣೆಗೈದರು.ಬಳಿಕ ಮಾತನಾಡಿದ ಅವರು ಉಳ್ಳಾಲದ ಜನತೆ ಮತ್ತು ಮೀನುಗಾರರು ಮನಸ್ಸು ಮಾಡಿದರೆ ಯಾವುದೇ ಕಾರ್ಯ ಮಾಡಬಲ್ಲರು ಎನ್ನುವುದಕ್ಕೆ ‘ಬೋಟ್ ಆಂಬ್ಯುಲೆನ್ಸ್’ ಮತ್ತು ಕಾರ್ಯಕ್ರಮ ಸಾಕ್ಷಿಯಾಗಿದೆ, ಅಲ್ಲದೆ ಈ ಕಾರ್ಯಕ್ರಮ ಉಳ್ಳಾಲದ ಘನತೆಯನ್ನು ರಾಜ್ಯಮಟ್ಟದಲ್ಲಿ ಹೆಚ್ಚಿಸಿದೆ ಎಂದು ಶ್ಲಾಘಿಸಿದರು. ಯಾವುದೇ ಯೋಜನೆ ರೂಪಿಸುವುದು ಸುಲಭ, ಆದರೆ ಕಾರ್ಯಗತಗೊಳಿಸುವುದು ಕಷ್ಟ….

Read More

ಉಡುಪಿ: ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ಯೋಧನಿಗೆ ಅವಮಾನ ವಿಚಾರ- ಕ್ಷಮೆಯಾಚಿಸಿದ ಟೋಲ್ ಸಿಬ್ಬಂದಿ!

ಉಡುಪಿ: ದೇಶಕ್ಕಾಗಿ ಹೋರಾಡಿದ ನಿವೃತ್ತ ಸೈನಿಕನಿಗೆ ಭಾನುವಾರ ರಾತ್ರಿ ಬ್ರಹ್ಮಾವರ ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ಅವಮಾನಪಡಿಸಿದ ಘಟನೆ ನಡೆದಿತ್ತು. ಇದೀಗ ತಮ್ಮ ತಪ್ಪಿನಿಂದ ಎಚ್ಚೆತ್ತುಕೊಂಡ ಟೋಲ್‌ ಸಿಬ್ಬಂದಿ ನಿವೃತ್ತ ಯೋಧನ ಕ್ಷಮೆಯಾಚಿಸಿದ್ದಾರೆ.ಸಾಸ್ತಾನ ಟೋಲ್‌ ಪ್ಲಾಜಾದ ಸಿಬ್ಬಂದಿಗಳಾದ ಶೀನ ಹಾಗೂ ಸುರೇಶ್ ವಿಡಿಯೋ ಮೂಲಕ‌ ಕ್ಷಮಾಪಣೆ ಕೇಳಿದ್ದಾರೆ. ನಿವೃತ್ತ ಸೈನಿಕ ಶ್ಯಾಮರಾಜ್ ಅವರು ಟೋಲ್‌ ವಿನಾಯಿತಿ ಪತ್ರವನ್ನು ತೋರಿಸಿದ್ದರೂ, ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಸ್ವತಃ ನಿವೃತ್ತ ಸೈನಿಕ ಶ್ಯಾಮರಾಜ್ ಅವರು ವಿಡಿಯೋ ದಾಖಲಿಸಿ…

Read More

ನಾಳೆ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ವತಿಯಿಂದ ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ

ಮಂಗಳೂರು:ಮನುಷ್ಯನ ಜೀವನಕ್ಕೆ ಮಾರಕವಾದ ಆರೋಗ್ಯಕರ ಜೀವನ ಶೈಲಿಗೆ ಮಾದಕ ವ್ಯಸನ ಅಡ್ಡಿಯಾಗಿದ್ದು ನಮ್ಮ ಜಿಲ್ಲೆಯಲ್ಲಿ ಈ ಮಾದಕ ದ್ರವ್ಯವನ್ನು ಬಹುಮಟ್ಟಿಗೆ ಹತೋಟಿ ತಂದಂತಹ ನಮ್ಮ ಮಂಗಳೂರಿನ ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ಇಲಾಖೆ ಮಾದಕ ದ್ರವ್ಯ ಬಳಕೆಯ ವಿರುದ್ಧ ಸಮರ ಸಾರಿರುವುದರಿಂದ ನಮ್ಮ ಜಿಲ್ಲೆಯ ಸಾರ್ವಜನಿಕರು ಹೆಮ್ಮೆ ಪಡುವಂತಾಗಿದೆ. ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಮೂಡಿಸುವ ಸದುದ್ದೇಶದಿಂದ ಜೀವನಕ್ಕೆ ಮಾರಕವಾದಂತಹ ಮಾದಕ ದ್ರವ್ಯದ ವಿರುದ್ಧ ಆಂದೋಲನವನ್ನು ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಪೊಲೀಸ್ ಇಲಾಖೆ…

Read More

ಮತ್ತೆ ಭಾರತದಲ್ಲಿ ನಿಪಾ ವೈರಸ್‌ನ ಹೊಸ ಪ್ರಕರಣಗಳು ದೃಢ, ಭಾರತದಾದಂತ್ಯ ಹೆಚ್ಚಿದ ಆತಂಕ

ಬೆಂಗಳೂರು :ಭಾರತದಲ್ಲಿ ನಿಪಾ ವೈರಸ್ ಪ್ರಕರಣಗಳು ವರದಿಯಾದ ನಂತರ ಥೈಲ್ಯಾಂಡ್, ನೇಪಾಳ ಮತ್ತು ತೈವಾನ್ ಸೇರಿದಂತೆ ಹಲವಾರು ಏಷ್ಯಾದ ದೇಶಗಳು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿವೆ. ಭಾರತದಲ್ಲಿ ನಿಪಾ ವೈರಸ್‌ನ ಹೊಸ ಪ್ರಕರಣಗಳು ದೃಢಪಟ್ಟಿರುವುದರಿಂದ, ದೇಶದಲ್ಲಿ ಮಾತ್ರವಲ್ಲದೆ ಏಷ್ಯಾದಾದ್ಯಂತ ಕಳವಳ ಹೆಚ್ಚುತ್ತಿದೆ. ಇದು 40 ರಿಂದ 75 ಪ್ರತಿಶತದಷ್ಟು ಮರಣ ಪ್ರಮಾಣವನ್ನು ಹೊಂದಿರುವ ವೈರಸ್ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಇದರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ, ಅನೇಕ ಏಷ್ಯಾದ ದೇಶಗಳು ವಿಮಾನ ನಿಲ್ದಾಣದ ತಪಾಸಣೆ, ಆರೋಗ್ಯ ತಪಾಸಣೆ ಮತ್ತು…

Read More
error: Content is protected !!