ಜ.27-28 ರಂದು ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವ ಅಂಗವಾಗಿ ಬೀದಿ ನಾಟಕ ಸ್ಪರ್ಧೆ… !

ಮಂಗಳೂರು : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಜನವರಿ 27 ಮತ್ತು 28, 2026 ರಂದು ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಈ ಸಂದರ್ಭದಲ್ಲಿ ಜನವರಿ 27 ರಂದು ವಂದೇ ಮಾತರಂ ಹಾಡಿಗೆ 150 ವರ್ಷ ಸ್ಮರಣಾರ್ಥ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನ 26ನೇ ಸಮ್ಮೇಳನವಾಗಿ ನಡೆಯಲಿದೆ. ಅದೇ ರೀತಿ ಈ ಸಂದರ್ಭ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯಲ್ಲಿ…

Read More

ಮಂಗಳೂರಿನಲ್ಲಿ ಶುಭಾರಂಭಗೊಂಡ ಲಂಚುಲಾಲ್ ಮಾಲಕತ್ವದ ಅಸ್ತ್ರ ಗೋಲ್ಡ್ ಅಂಡ್ ಡೈಮಂಡ್ ಮಳಿಗೆ

ಅಸ್ತ್ರ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಶ್ರೀ ಲಂಚುಲಾಲ್ ಮಾಲಕತ್ವದ ‘ಅಸ್ತ್ರ ಗೋಲ್ಡ್ ಅಂಡ್ ಡೈಮಂಡ್’ ಫಳ್ನೀರ್ ನಲ್ಲಿ ಮಂಗಳವಾರ ಶುಭಾರಂಭಗೊಂಡಿದೆ. ಸ್ನೋಮ್ಯಾನ್ ಐಸ್ ಕ್ರೀಮ್ ಪಾರ್ಲರ್ , ಅಸ್ತ್ರ ಗ್ರೂಪ್ ,ಅಸ್ತ್ರ ಪ್ರೊಡಕ್ಷನ್,ಅಕ್ಷಯ ಪಾತ್ರ, ಚಲನಚಿತ್ರ ನಿರ್ಮಾಣ ಈಗೆ ಹಲವು ಉದ್ಯಮದಲ್ಲಿ ತೊಡಗಿರುವ ಲಂಚುಲಾಲ್ ರವರು ಇದೀಗ ಸ್ವರ್ಣ ಉದ್ಯಮಕ್ಕೆ ಹೆಜ್ಜೆ ಇಟ್ಟು ಅಸ್ತ್ರ ಗೋಲ್ಡ್ ಅಂಡ್ ಡೈಮಂಡ್ ಮಳಿಗೆಯನ್ನು ಮಂಗಳವಾರ ಶುಭಾರಂಭಗೊಳಿಸಿ ನಾಡಿನ ಜನರಿಗೆ ಸಮರ್ಪಿಸಿದ್ದಾರೆ. ವಿವಿಧ ವಿನ್ಯಾಸದ ಚಿನ್ನ ,…

Read More

ಕ್ರಿಸ್‌ ಮಸ್ ಸತ್ಯ, ಪಾರದರ್ಶಕತೆ ಹಾಗೂ ನೈತಿಕ ಜೀವನಕ್ಕೆ ಕರೆ ನೀಡುತ್ತದೆ : ಮಂಗಳೂರು ಧರ್ಮಧ್ಯಕ್ಷ ಡಾ. ಪೀಟರ್ ಪಾವ್ ಸಲ್ದಾನ್ಹಾ

ಮಂಗಳೂರು:ಕ್ರಿಸ್‌ಮಸ್‌ ಹಬ್ಬದ ಈ ಪವಿತ್ರ ಸಂದರ್ಭದಲ್ಲಿ, ಯೇಸು ಕ್ರಿಸ್ತರು ಈ ಜಗತ್ತಿಗೆ ತಂದ ಪ್ರೀತಿ, ಶಾಂತಿ ಮತ್ತು ಮಾನವೀಯತೆಯ ಶಾಶ್ವತ ಸಂದೇಶವನ್ನು ನಾವು ಇವತ್ತು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಈ ಹಬ್ಬವು ಸಮಾಜದಲ್ಲಿ ಸತ್ಯ, ನ್ಯಾಯ ಹಾಗೂ ಸಹಜೀವನದ ಮೌಲ್ಯಗಳನ್ನು ಮರುಸ್ಥಾಪಿಸುವ ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ ಎಂದು ನಾವು ಸ್ಪಷ್ಟವಾಗಿ ಹೇಳಬಹುದು ಎಂದು ಮಂಗಳೂರು ಕೊಡಿಯಾಲ್‌ಬೈಲ್‌ನ ಬಿಷಪ್ಸ್ ಹೌಸ್ ನಲ್ಲಿ ಧರ್ಮಾಧ್ಯಕ್ಷರಾದ ಮಂಗಳೂರು ಕಥೊಲಿಕ್ ಧರ್ಮಕ್ಷೇತ್ರದ ಅತೀ ವಂದನೀಯ ಡಾ| ಪೀಟರ್ ಪಾವ್ ಸಲ್ದಾನ್ಹಾ ಹೇಳಿದರು. ಅವರು ಕ್ರಿಸ್ಮಸ್…

Read More

ಬಾಂಗ್ಲಾದೇಶಿ ಪ್ರಜೆಗೆ ಅಕ್ರಮವಾಗಿ ಪಾಸ್‌ಪೋರ್ಟ್ ಪಡೆಯಲು ಸಹಾಯ . ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧನ

ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಶಂಕಿತ ಬಾಂಗ್ಲಾದೇಶಿ ಪ್ರಜೆಗೆ ಅಕ್ರಮವಾಗಿ ಪಾಸ್‌ಪೋರ್ಟ್ ಪಡೆಯಲು ಸಹಾಯ ಮಾಡಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿರುವ ಸುದ್ದಿ ಅತ್ಯಂತ ಆತಂಕಕಾರಿ ಹಾಗೂ ಖಂಡನೀಯವಾಗಿದೆ.ಪೊಲೀಸ್ ಇಲಾಖೆ ಎಂಬುದು ಕಾನೂನು ಜಾರಿ ಮಾಡುವ ಸಂಸ್ಥೆಯಾಗಿದ್ದು, ರಾಷ್ಟ್ರ ಭದ್ರತೆ ಮತ್ತು ನಾಗರಿಕರ ಸುರಕ್ಷತೆಯನ್ನು ಕಾಪಾಡುವ ಮಹತ್ವದ ಜವಾಬ್ದಾರಿ ಹೊಂದಿದೆ. ಇಂತಹ ಇಲಾಖೆಯೊಳಗಿಂದಲೇ ದೇಶದ ಕಾನೂನು ಹಾಗೂ ಭದ್ರತಾ ವ್ಯವಸ್ಥೆಗೆ ಧಕ್ಕೆ ತರುವ ಕೃತ್ಯ ನಡೆದಿದೆ ಎಂಬುದು ಕರ್ನಾಟಕ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅಕ್ರಮ…

Read More

ಕೆಸಿ ರೋಡಲ್ಲಿ ಎಮ್ ಡಿಎಮ್ಎ ಮಾರಾಟ,ಉಳ್ಳಾಲ ಪೊಲೀಸರ ದಾಳಿ.ಓರ್ವನ ಬಂಧನ,ಇಬ್ಬರು ಆರೋಪಿಗಳು ಪರಾರಿ.11 ಗ್ರಾಂ ಡ್ರಗ್ಸ್ ವಶಕ್ಕೆ.

ಉಳ್ಳಾಲ: ತಲಪಾಡಿ ಗ್ರಾಮದ ಕೆ.ಸಿ ರೋಡ್ ಫಲಾಹ್ ಶಾಲಾ ಬಸ್ಸು ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಎಮ್ ಡಿಎಮ್ಎ ಕ್ರಿಸ್ಟಲ್ ಎಂಬ ಮಾದಕ ವಸ್ತುವನ್ನು ಮಾರಾಟದಲ್ಲಿ ತೊಡಗಿದ್ದ ಕೇರಳದ ಉಪ್ಪಳ, ಮಂಗಲ್ಪಾಡಿ ನಿವಾಸಿ ಶೇಖ್ ಮೊಹಮ್ಮದ್ ಕೈಫ್ (22)ಎಂಬಾತನನ್ನು ಉಳ್ಳಾಲ ಪೊಲೀಸರು ಸೋಮವಾರದಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು ,ಕೃತ್ಯದಲ್ಲಿ ತೊಡಗಿದ್ದ ಮತ್ತಿಬ್ಬರು ಪೆಡ್ಲರ್ ಗಳು ಪರಾರಿಯಾಗಿದ್ದಾರೆ. ಬಂಧಿತ ಆರೋಪಿ ಮೊಹಮ್ಮದ್ ಕೈಫ್ ನಿಂದ 55,000/- ರೂಪಾಯಿ ಬೆಲೆ ಬಾಳುವ ನಿಷೇಧಿತ 11 ಗ್ರಾಂ ಎಮ್ ಡಿಎಮ್ಎ…

Read More

ಡಿ 25 ರಿಂದ 27 ತನಕ “ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ” -ಸ್ತಬ್ಧಚಿತ್ರ ರಥಯಾತ್ರೆ… !

ಮಂಗಳೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಸಮಿತಿ ರಾಜ್ಯಾದ್ಯಂತ ಯುವ ಸಮುದಾಯದ ಭವಿಷ್ಯ, ಆರೋಗ್ಯ ಮತ್ತು ಸಾಮರ್ಥವನ್ನು ಬಲಪಡಿಸುವ ಗಂಭೀರ ಜವಾಬ್ದಾರಿಯೊಂದಿಗೆ ವಿನಾಶಕಾರಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಮಹತ್ವಾಕಾಂಕ್ಷಿ ಪ್ರಯತ್ನದೊಂದಿಗೆ – “ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ” -ಸ್ತಬ್ಧಚಿತ್ರ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸಲಿದ್ದು ಡಿ 25 ಬೆಳಗ್ಗೆ 9.00 ಗಂಟೆಗೆ ಮಂಗಳೂರಿಗೆ ಸ್ತಬ್ದಚಿತ್ರ ಹೊತ್ತ ರಥವು ಬರಲಿದೆ ಎಂದು ಕಾರ್ಯಕ್ರಮದ ಸಂಚಾಲಕರು , ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ ಶಾಖೆ ಇದರ ಸಭಾಪತಿಗಳಾದ…

Read More

ಡಿ.25 ರಂದು ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಶೇಣಿ ಪ್ರಶಸ್ತಿ

ಮಂಗಳೂರು:ಯಕ್ಷಗಾನದ ಭೀಷ್ಮ, ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರ ಹೆಸರಿನಲ್ಲಿ ಎರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಟ್ರಸ್ಟ್ 2025ನೇ ಸಾಲಿನ ಶೇಣಿ ಪ್ರಶಸ್ತಿಗೆ ಹಿರಿಯ ತಾಳಮದ್ದಳೆ ಅರ್ಧದಾರಿ, ಪ್ರವಚನಕಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರು ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ನ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಡಿ.25 ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಗರದ ಉರ್ವಸ್ಟೋರ್ ನ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ…

Read More

ಡಿ.27 ರಂದು ಮಂಗಳೂರಿನ ರಾಮಕೃಷ್ಣ ಮಿಷನ್ನಲ್ಲಿ ಹರಿಕಥಾ ಸ್ಪರ್ಧೆ-2025

ಮಂಗಳೂರು: ಹರಿಕಥಾ ಪರಿಷತ್ ಮಂಗಳೂರು ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸಿಎ ಎಸ್ ಎಸ್ ನಾಯಕ್ ಪ್ರಾಯೋಜಕತ್ವದಲ್ಲಿ, ಎಸ್ ಕೆ ಜಿ ಇಂಡಸ್ಟ್ರೀಯಲ್ ಕೋ-ಆಪರೇಟಿವ್‌ ಸೊಸೈಟಿ ಲಿ., ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಲಿ. ಹಾಗೂ ಗ್ರಾಮ ಸಂಘ ಸಹಕಾರದ ವತಿಯಿಂದ ಕರಾವಳಿಯಲ್ಲಿ ಮೊದಲ ಬಾರಿಗೆ ರಾಜ್ಯದ ವಿದ್ಯಾರ್ಥಿಗಳಿಗೆ ಡಿ.27 ರಂದು ‘ಹರಿಕಥಾ ಸ್ಪರ್ಧೆ-2025 ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾ‌ರ್ ತಿಳಿಸಿದರು. ನಗರದ…

Read More

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ಧಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ . ಇದನ್ನು ಬಿಜೆಪಿ ಸಹಿಸಲ್ಲ : ಸಂಸದ ಕ್ಯಾ ಬ್ರಿಜೇಶ್‌ಚೌಟ

ಮಂಗಳೂರು: ಪೊಲೀಸ್ ಅಧಿಕಾರಿಗಳು ಕೋಳಿ ಅಂಕದಲ್ಲಿ ಅಕ್ರಮ ಚಟುವಟಿಗಳು ಆಗುತ್ತಿದೆ ಎಂದು ನೆಪವನ್ನು ಒಡ್ಡಿ ನಮ್ಮ ಧಾರ್ಮಿಕ ನಂಬಿಕೆಯನ್ನು ಹಾಳುಮಾಡುವ ಪ್ರಯತ್ನ ಮಾಡ್ತಾ ಇದ್ದಾರೆ. ರಾಜಕೀಯ ಬೆಂಬಲ ಇಲ್ಲದೆ ಈ ರೀತಿಯ ಬೆಳವಣಿಗೆ ಸಾಧ್ಯವಿಲ್ಲ. ನಮ್ಮ ನಂಬಿಕೆಯ ಆಚರಣೆಯಾದ ಕೋಳಿ ಅಂಕ, ಕಂಬಳ, ಯಕ್ಷಗಾನ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಎಂದು ಸಂಸದ ಕ್ಯಾ ಬ್ರಿಜೇಶ್‌ಚೌಟ ಆರೋಪಿಸಿದ್ದಾರೆ. ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಶಾಸಕರ ಉಪಸ್ಥಿತಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು,…

Read More

ನಾಯಕತ್ವ ವಿಚಾರ ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ:ರಾಜ್ಯದಲ್ಲಿ ಸಿಎಂ ಕುರ್ಚಿ ಕದನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವುದೇ ಗೊಂದಲ ಸೃಷ್ಟಿ ಮಾಡಿಲ್ಲ. ಇದು ಸ್ಥಳೀಯ ಮಟ್ಟದಲ್ಲೇ ಇದ್ದು, ಸ್ಥಳೀಯ ನಾಯಕರೇ ಇದನ್ನ ಬಗೆಹರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, “ಹೈಕಮಾಂಡ್ ಯಾವುದೇ ಗೊಂದಲವನ್ನು ಸೃಷ್ಟಿಸಿಲ್ಲ. ಅದು ಸ್ಥಳೀಯ ಮಟ್ಟದಲ್ಲೇ ಇದೆ” ಎಂದರು. ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ “ಹೈಕಮಾಂಡ್ ಮೇಲೆ ಆರೋಪ ಹೊರಿಸುವುದು ಎಷ್ಟು ಸರಿ?”. ಹೈಕಮಾಂಡ್…

Read More
error: Content is protected !!