ಭತ್ತದ ಕೃಷಿ ಮಾಡಿ ಗಮನ ಸೆಳೆದ ಸಭಾಧ್ಯಕ್ಷ ಯು.ಟಿ. ಖಾದರ್.
ಯುವ ಸಮುದಾಯಕ್ಕೆ ಭತ್ತವನ್ನ ಹೇಗೆ ಬೆಳೆಯಲಾಗುತ್ತದೆ ಮತ್ತು ಅದರ ಬೆಗೆಗಿನ ಸಮಗ್ರ ಮಾಹಿತಿಯ ಜೊತೆಗೆ ಕೃಷಿ ಕಾಯಕದಲ್ಲೂ ಅವರನ್ನು ತೊಡಗಿಸುವ ಕಾರ್ಯ ಅತ್ಯಂತ ಅರ್ಥ ಪೂರ್ಣವಾಗಿದೆ. ಉಳ್ಳಾಲ ತಾಲೂಕು ವ್ಯಾಪ್ತಿಯ ಹಡಿಲು ಬಿದ್ದ ಕೃಷಿ ಭೂಮಿಗಳನ್ನು ಕಂದಾಯ ಇಲಾಖೆಯ ಮೂಲಕ ಸರ್ವೆ ಮಾಡಿಸಿ ಕೃಷಿ ಇಲಾಖೆ ಮೂಲಕ ಗ್ರಾಮವಾರು ಕೇಂದ್ರೀಕರಿಸಿ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಜೊತೆ ಸೇರಿ ಫಲವತ್ತಾದ ಉಳ್ಳಾಲ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗುವುದೆಂದು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ತೊಕ್ಕೊಟ್ಟು…
