ಕೇಂದ್ರ ಸರಕಾರದ ವಕ್ಸ್ ತಿದ್ದುಪಡಿ ಕಾಯ್ದೆಯ ವಿರುದ್ಧ ಬೃಹತ್‌ ಪ್ರತಿಭಟನಾ ಮೆರವಣಿಗೆ

ಮಂಜೇಶ್ವರ : ಕೇಂದ್ರ ಸರಕಾರದ ವಕ್ಸ್ ತಿದ್ದುಪಡಿಕಾಯ್ದೆಯ ವಿರುದ್ಧ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಎಲ್ಲಾ ಮುಸ್ಲಿಂ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ರಾಷ್ಟ್ರಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿರುವ ವಕ್ಫ್ ತಿದ್ದುಪಡಿ ವಿಧೇಯಕ 25ನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ವಕ್ಫ್ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕುಂಜತ್ತೂರಿನಿಂದ ಹೊಸಂಗಡಿ ತನಕ ಶುಕ್ರವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾ ಮೆರವಣಿಗೆಗೂ ಮುನ್ನ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಅಮಾನುಷ ಕೃತ್ಯವನ್ನು ಖಂಡಿಸಿ ಹುತಾತ್ಮರಾದವರ ಆತ್ಮಕ್ಕೆ ಶಾಂತಿಗಾಗಿ ಒಂದು ನಿಮಿಷದ ಮೌನ…

Read More

ಅನಧಿಕೃತವಾಗಿ ಸಾಗಿಸುತಿದ್ದ ಅರ್ಧ ಕಿಲೋ ಚಿನ್ನ ವಶಪಡಿಸಿಕೊಂಡ ಪೊಲೀಸರು

ಮಂಜೇಶ್ವರ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಅನಧಿಕೃತವಾಗಿ ಸಾಗಾಟ ಮಾಡುತಿದ್ದ ಅರ್ಧ ಕಿಲೋ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಒಬ್ಬನನ್ನು ಸೆರೆ ಹಿಡಿಯಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಪ್ರಯಾಣಿಕನಾದ ರಾಜಸ್ಥಾನ ಮೂಲದ ಚೆಗನ್‌ಲಾಲ್ ಎಂಬಾತನಿಂದಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ನಲ್ಲಿ ನಡೆಸಿದ ವಾಹನ ತಪಾಸಣೆಯ ಸಂದರ್ಭದಲ್ಲಿ ದಾಖಲೆಗಳಿಲ್ಲದೆ ಕಳ್ಳಸಾಗಣೆ ಮಾಡುತ್ತಿದ್ದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ನಿರೀಕ್ಷಕ ಗಂಗಾಧರನ್, ಪ್ರಿವೆಂಟಿವ್ ಆಫೀಸರ್ ಎಂ.ವಿ. ಜಿಜಿನ್, ಗ್ರೇಸ್ ಪ್ರಿವೆಂಟಿವ್ ಆಫೀಸರ್ಸ್ ವಿಜಯನ್,ಬಾಬುರಾಜ್ ಮತ್ತು ಸಿಇಒ…

Read More

ಪಹಲ್ ಗಾಂವ್ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ, ಅದೃಷ್ಟವಶಾತ್ ಪಾರಾದ ಕಾಸರಗೋಡಿನ ಕುಟುಂಬ

ಪಹಲ್ಲಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ಕಾಸರಗೋಡಿನ ಪರಪ್ಪದ ಎಂಟು ಜನರ ಕುಟುಂಬವೊಂದು ಅದೃಷ್ಟವಶಾತ್ ಪಾರಾಗಿದೆ. ಪರಪ್ಪದಲ್ಲಿರುವ ಸಪ್ಪಾ ಟೆಸ್ಟೈಲ್ಸ್ ಮಾಲೀಕ ನಿಸಾರ್, ಅವರ ಸಂಬಂಧಿ ಕೆ.ಪಿ. ಸುಹೇಲ್ ಮತ್ತು ಅವರ ಕುಟುಂಬ ಅದೃಷ್ಟವಶಾತ್ ಪಾರಾಯಿತು. ಭಯೋತ್ಪಾದಕ ದಾಳಿ ನಡೆದ ಅದೇ ಸಮಯದಲ್ಲಿ ಅವರು ಪಹಲ್ಲಾಮ್‌ನ ಬೈಸರನ್ ತಲುಪಬೇಕಿತ್ತು. ಹವಾಮಾನದಲ್ಲಿನ ಬದಲಾವಣೆಯಿಂದಾಗಿ ಅವರು ಭಾನುವಾರ ಬೈಸರನ್‌ಗೆ ಭೇಟಿ ನೀಡುತ್ತಿದ್ದರು. ಬೈಸಾರನ್‌ಗೆ ಬರುವ ಎಲ್ಲಾ ಪ್ರವಾಸಿಗರು ವಿಶ್ರಾಂತಿ ಪಡೆದು ಊಟ ಮಾಡುವ ವಿಶಾಲವಾದ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಪ್ರವಾಸಿಗರ…

Read More

ಆಧ್ಯಾತ್ಮಿಕ ಶೋಷಣೆ ಹಾಗೂ ವಾಮಾಚಾರದ ವಿರುದ್ಧ ಎಚ್ಚರಿಕೆಯ ಕರೆಗಂಟೆ

ಮಂಜೇಶ್ವರ: ಕೆಎನ್‌ಎಂ ಜಿಲ್ಲಾ ಸಮಿತಿಯ ವತಿಯಿಂದ ಕಳೆದ ನಾಲ್ಕು ತಿಂಗಳಿನಿಂದ “ಆಧ್ಯಾತ್ಮಿಕ ಶೋಷಣೆ ಹಾಗೂ ವಾಮಾಚಾರದ ವಿರುದ್ಧ” ಎಂಬ ಕಾರ್ಯಸೂಚಿಯಂತೆ ಆಯೋಜಿಸಿದ್ದ ಅಭಿಯಾನದ ಸಮಾರೋಪ ಅಧಿವೇಶನವು ಮಾನವ ಸಂಪತ್ತು ಮತ್ತು ಘನತೆಯನ್ನು ಶೋಷಿಸುವ ಸುಳ್ಳು ಆಧ್ಯಾತ್ಮಿಕತೆಯ ಪ್ರತಿಪಾದಕರ ಹಾಗೂ ಕಪಟ ಮಂತ್ರವಾದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿ ಎಲ್ಲಾ ಆಧ್ಯಾತ್ಮಿಕ ಶೋಷಣೆಗಳನ್ನು ಕೊನೆಗೊಳಿಸುವಂತೆ ಕರೆ ನೀಡಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ. ಉಣ್ಣೀನ್ ಕುಟ್ಟಿ ಮೌಲವಿ ಸಮಾರೋಪ ಸಮಾರಂಭ ಉದ್ಘಾಟಿಸಿದರು. ಆಧ್ಯಾತ್ಮಿಕ ಶೋಷಣೆ ದಿನೇ ದಿನೇ…

Read More

ಬಂದ್ಯೋಡ್ ಮುಟ್ಟಂ ರಾ.ಹೆದ್ದಾರಿಯಲ್ಲಿ ವ್ಯಕ್ತಿಗೆ ಕಾರು ಡಿಕ್ಕಿ ಅಪಘಾತದಲ್ಲಿ ಮುಟ್ಟಂ ನಿವಾಸಿ ದಾರುಣ ಸಾವು

ಮಂಜೇಶ್ವರ : ಬಂದ್ಯೋಡ್ ಮುಟ್ಟಂ ರಾ. ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿರುವ ಮಧ್ಯೆ ಕಾರು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಮನೆ ಯಜಮಾನ ದಾರುಣವಾಗಿ ಸಾವನ್ನಪ್ಪಿದ್ದಾರೆ.ಮುಟ್ಟಂ ನಿವಾಸಿ ಅಬೂಬಕ್ಕರ್ ಹಾಜಿ (70) ಸಾವನ್ನಪ್ಪಿದ ದುರ್ದೈವಿ.ಬಾನುವಾರ ಸಂಜೆ 3 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಆರಿಕ್ಕಾಡಿ ಮಖಾಂ ಉರೂಸ್ ನ ಸಮಾರೋಪ ಸಮಾರಂಭಕ್ಕೆ ತೆರಳಿ ಮರಳುತ್ತಿರುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವೃತೆಗೆ ರಸ್ತೆಗೆಸೆಯಲ್ಪಟ್ಟ ಅಬೂಬಕ್ಕರ್ ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರು ನಿಲ್ಲಿಸದೆ ಪರಾರಿಯಾಗಿ…

Read More

ಉದ್ಯಾವರ ಸಾವಿರ ಜಮಾಅತ್‌ ಮಸೀದಿಗೆ ದೈವಗಳ ಭೇಟಿಕೊಟ್ಟ ದೈವಗಳು

ಮಂಜೇಶ್ವರ : ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಅಣ್ಣ ತಮ್ಮ ದೈವಗಳ ಕ್ಷೇತ್ರದ ಜಾತ್ರೆಯ ಪೂರ್ವಭಾವಿಯಾಗಿ ಉದ್ಯಾವರ ಸಾವಿರ ಜಮಾಅತ್‌ ಮಸೀದಿಗೆ ದೈವಗಳ ಭೇಟಿ ಕಾರ್ಯಕ್ರಮ ಶುಕ್ರವಾರ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿತು. ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀ ಅರಸು ದೈವಗಳು ವರ್ಷಂಪ್ರತಿಯ ಪದ್ಧತಿಯಂತೆ ಶುಕ್ರವಾರ ಮಧ್ಯಾಹ್ನ ಅರಸು ದೈವ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗೂ ಸಹಸ್ರಾರು ಹಿಂದೂ ಬಾಂಧವರು ಜೊತೆಯಾಗಿ ಉದ್ಯಾವರ ಸಾವಿರ…

Read More
error: Content is protected !!