ಆತ್ಮಹತ್ಯೆಗೆತ್ನಿಸಿದ ವಿದ್ಯಾರ್ಥಿನಿಯನ್ನು ರಕ್ಷಿಸಲು ಆಸ್ಪತ್ರೆಗೆ ಸಾಗಿಸುತ್ತಿರುವ ಮಧ್ಯೆ ಅಪಘಾತಕ್ಕೊಳಗಾಗಿ ಮ್ಯತ್ಯು.

ಕಾಸರಗೋಡು :ಬೇತೂರು ಪಾರ ಸಮೀಪದಲ್ಲಿ ಬುಧವಾರ ಬೆಳಿಗ್ಗೆ ಆತ್ಮಹತ್ಯೆಗೆ ಯತ್ನಿಸಿದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ರಕ್ಷಿಸಲು ಮನೆಯಿಂದ ಆಸ್ಪತ್ರೆಗೆ ಸಾಗಿಸುತ್ತಿರುವ ಮಧ್ಯೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಆಕೆ ಸಾವನ್ನಪ್ಪಿದ್ದಾಳೆ.ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಬೇಡಡ್ಕ ಬೇತೂರುಪಾರ ತಚ್ಚಾ‌ರ್ ಕುಂಡುವಿನ ಬಾಬು ಎಂಬವರ ಪುತ್ರಿ ಮಹಿಮಾ (19) ಸಾವನ್ನಪ್ಪಿದ ದುರ್ದೈವಿ. ಬುಧವಾರ ಬೆಳಗ್ಗೆ ಮಹಿಮಾ ಮನೆಯ ಮಲಗುವ ಕೊಠಡಿಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಮನೆಯವರು ತಕ್ಷಣ ನೇಣು ಹಗ್ಗದಿಂದ ಕೆಳಕ್ಕಿಳಿಸಿ ಕಾರಿನಲ್ಲಿ ಆಸ್ಪತ್ರೆಗೆ ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ….

Read More

ತುಳುರತ್ನ, ಬಹುಭಾಷಾ ವಿದ್ವಾಂಸ ಡಾ. ಪಿ.ವೆಂಕಟರಾಜ ಪುಣಿಂಚಿತ್ತಾಯರ ‘ಪುವೆಂಪು ನೆನಪು-2025’ ಕಾರ್ಯಕ್ರಮ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಪ್ರತಿಷ್ಠಾನ ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿ ಮಂಜೇಶ್ವರ, ಕೇರಳ ಸರ ಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತುಳುರತ್ನ, ಬಹುಭಾಷಾ ವಿದ್ವಾಂಸ ಡಾ. ಪಿ.ವೆಂಕಟರಾಜ ಪುಣಿಂಚಿತ್ತಾಯರ ‘ಪುವೆಂಪು ನೆನಪು-2025’ ಕಾರ್ಯಕ್ರಮ ಇಂದು ಬೆಳಿಗ್ಗೆ ಹೊಸಂಗಡಿ ಸಮೀಪದ ದುರ್ಗಿಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಭಾವ ಗಾಯನ, ನೃತ್ಯ ವೈಭವ, ಪ್ರಶಸ್ತಿ ವಿತರಣೆ ಸಮಾರಂಭ ನಡೆಯಿತು. ಎಡನೀರು ಮಠಾಧೀಶ ಶ್ರೀ…

Read More

ಕೇರಳ ರಾಜ್ಯ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಶನ್ 9ನೇ ಕಾಸರಗೋಡು ಜಿಲ್ಲಾ ಸಮ್ಮೇಳನ. ಧ್ವಜ ಸ್ತಂಭದ ಮೆರವಣಿಗೆಗೆ ಚಾಲನೆ

ಮಂಜೇಶ್ವರ: ಕೇರಳ ರಾಜ್ಯ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಶನ್ 9ನೇ ಕಾಸರಗೋಡು ಜಿಲ್ಲಾ ಸಮ್ಮೇಳನದ ಅಂಗವಾಗಿ ಕೇರಳ ಕರ್ನಾಟಕ ಗಡಿಪ್ರದೇಶವಾದ ತಲಪ್ಪಾಡಿಯಿಂದ ಧ್ವಜ ಹಾಗೂ ಧ್ವಜ ಸ್ತಂಭದ ಮೆರವಣಿಗೆಗೆ ಚಾಲನೆ ದೊರಕಿತು. ಕೆಎಸ್‌ಎಚ್‌ಜಿಒ ಜಿಲ್ಲಾ ಉಪಾಧ್ಯಕ್ಷ ಫಿರೋಜ್ ಪಡಿಂಇಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ವಿ. ಬಾಲನ್ ಉದ್ಘಾಟಿಸಿದರು. ಜಾಥಾ ಕ್ಯಾಪ್ಟನ್ ಸುಕುಮಾರನ್ ಕೊಪ್ಪಲಂ, ವೈಸ್ ಕ್ಯಾಪ್ಟನ್ ಹನೀಫ್ ಕರಿಂಗಪ್ಪಲ್ಲಂ, ಜಾಥಾ ಮ್ಯಾನೇಜರ್ ರಜಾಕ್ ಕಾಫಿಲ, ರಿಯಾಜ್ ಚೌಕಿ, ಬಶೀರ್‌ಕೋಟೂರ್, ಅಬು…

Read More

CPIM ಕೊಡ್ಲಮೊಗರು ಲೋಕಲ್ ಸಮಿತಿ ಕಚೇರಿ ಕಾಂ. ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರ ಅಕ್ಟೋಬರ್ 19 ರಂದು ಉದ್ಘಾಟನೆ.

ಕೊಡ್ಲಮೊಗರು: ವರ್ಕಾಡಿ ಪಂಚಾಯತ್ ನಲ್ಲಿ ಸಿಪಿಐಎಂ ಪಕ್ಷದ ಸಂಘಟನೆಗಾಗಿ ಹಗಲಿರುಳೆನ್ನದೆ ದುಡಿದು, ತನ್ನ ಜೀವನವನ್ನೇ ಕಾರ್ಮಿಕ ವರ್ಗದ ಹಿತಕ್ಕಾಗಿ ಮುಡಿಪಾಗಿಸಿದ, ಹಲವಾರು ವರ್ಷಗಳ ಕಾಲ ಲೋಕಲ್ ಸಮಿತಿ ಕಾರ್ಯದರ್ಶಿಯಾಗಿ ಸೇವೆಗೈದ ಕಾಂ. ಕೆ. ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರವಾದ ಸಿಪಿಐಎಂ ಕೊಡ್ಲಮೊಗರು ಲೋಕಲ್ ಸಮಿತಿ ಕಚೇರಿಯ ಉದ್ಘಾಟನೆಯನ್ನು ಅಕ್ಟೋಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ. ವಿ. ಗೋವಿಂದನ್ ಮಾಸ್ಟರ್ ನಿರ್ವಹಿಸಲಿದ್ದಾರೆ. ರಾಜ್ಯ ಸಮಿತಿ ಸದಸ್ಯರಾದ, ಕೆ. ಪಿ. ಸತೀಶ್ ಚಂದ್ರನ್,…

Read More

ಕೋಟೆ,ಧೂಮಾವತಿ “ದೀಪಾವಳಿ ನೇಮೋತ್ಸವ “ಕ್ಕೆ ವೀಳ್ಯ.

ಕಾಸರಗೋಡು ಕೋಟೆ -ಪಳ್ಳದ ಕೊಟ್ಯ ಶ್ರೀ ಧೂಮಾವತಿ “ದೀಪಾವಳಿ ನೇಮೋತ್ಸವ “ದಿನಾಂಕ 19ರ ಸಂಜೆ 6ಕ್ಕೆ ನೆಲ್ಲಿಕುಂಜೆ ಪಳ್ಳದ ಕೊಟ್ಯ ತರವಾಡು ದೈವಸ್ಥಾನ ದಿಂದ ಮೆರವಣಿಗೆ ಮೂಲಕ ಭಂಡಾರ ಕೋಟೆಬಾಗಿಲಿನಲ್ಲಿನ ಪಳ್ಳದಕೊಟ್ಯ ಚಾವಡಿಯಲ್ಲಿ, ಕೋಟೆ ನಾಯಕರ ಮನೆ ಯವರು ರಾಮಕ್ಷತ್ರಿಯ ಸಮಾಜ ಹಾಗೂ ಊರ, ಪರವೂರ ಭಕ್ತಾದಿಗಳ ಕೂಡುವಿಕೆಯಿಂದ ದಿನಾಂಕ 20. ದೀಪಾವಳಿ ದಿನದಂದು ನಡೆಯಲಿರುವ ದೈವ ಕೋಲದ “ವೀಳ್ಯ ಕೊಡುವಿಕೆ “ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ನಡೆಯಲ್ಲಿ ನಡೆಯಿತು. ಕೋಟೆ ಧೂಮಾವತಿ ಉತ್ಸವ ಸಮಿತಿ ನೇತೃತ್ವದಲ್ಲಿ ಧೂಮಾವತಿ…

Read More

ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳ ಉದ್ಘಾಟನಾ ಸಮಾರಂಭ.

ಅಕ್ಟೋಬರ್ 13 14 ರಂದು ನಡೆಯುವ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳ ಉದ್ಘಾಟನಾ ಸಮಾರಂಭವು ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಿಜಯಕುಮಾರ್ ಧ್ವಜಾರೋಹಣಗೈದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಯುತ ಜಾರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ವೀಪ ಪ್ರಜ್ವಲಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು ಮಂಜೇಶ್ವರ ಶಾಸಕರಾದ ಶ್ರೀಯುತ ಎ ಕೆ ಎಂ ಅಶ್ರಫ್ ಕಾರ್ಯಕ್ರಮ…

Read More

ಶಾಫಿ ಪರಂಬಿಲ್ ಮೇಲೆ ಪೊಲೀಸರಿಂದ ಹಲ್ಲೆ – ಕಾಂಗ್ರೆಸ್ ಪ್ರತಿಭಟನೆ

ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಶ್ರೀ ಶಾಫಿ ಪರಂಬಿಲ್ ಹಾಗೂ ಇನ್ನಿತರ ಯುಡಿಎಫ್ ನೇತಾರರ ವಿರುದ್ಧ ಪೇರಾಂಬ್ರದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಹಾಗೂ ಮಾರಕ ಹಲ್ಲೆ ಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂದ್ಯೋಡುವಿನಲ್ಲಿ ಫ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶ್ರೀ ಬಾಬು ಬಂದ್ಯೋಡುರವರ ಅಧ್ಯಕ್ಷತೆಯಲ್ಹಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಫಾರೂಕ್ ಶಿರಿಯ ಉದ್ಘಾಟಿಸಿದರು. ಇರ್ಷಾದ್, ಅಶ್ರಫ್ ಮುಟ್ಟಂ, ಮೋಹನನ್ ಮೇಸ್ತ್ರಿ, ಇಬ್ರಾಹಿಂ, ಕುಂಞಾಲಿ ಇಚ್ಲಂಗೋಡು, ನಾಗೇಶ್, ರಾಜೇಶ್ ನಾಯ್ಕ್, ಬರ್ನಾರ್ಡ್ ಡಿ…

Read More

ಹೊಸಂಗಡಿ ಪೇಟೆಯಲ್ಲಿ ಅವ್ಯವಸ್ಥೆ ರೀತಿಯಲ್ಲಿ ವಾಹನಗಳ ಪಾರ್ಕಿಂಗ್

ಮಂಜೇಶ್ವರ: ಹೆಚ್ಚು ಸಂಖ್ಯೆಯಲ್ಲಿ ಜನ ಸಂದಣಿ ಇರುವ ಹೊಸಂಗಡಿ ಪೇಟೆಯಲ್ಲಿ ದಾರಿಮದ್ಯೆ ಅವ್ಯವಸ್ಥೆಯಾಗಿ ವಾಹನಗಳು ಪಾರ್ಕಿಂಗ್ ಮಾಡಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ. ಸಮೀಪದ ಮೇಘ ಟವರ್ ಲ್ಲಿ ಇರುವ ಅಂಗಡಿಗಳಿಗೆ ಜನಸಾಮಾನ್ಯರು ಹೋಗುವುದಕ್ಕೆ ಹರಸಾಹಸ ಪಡುವಂತಾಗಿದೆ. ಇದಕ್ಕೆ ಅಂಗಡಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಇನ್ನೊಂದೆಡೆ ಸರಿಯಾದ ಜಾಗಗಳಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದರೂ ಪೊಲೀಸರು ವಿನಾಕಾರಣ ಫೈನ್ ಹಾಕುತ್ತಿದ್ದಾರೆ ಎಂದು ವಾಹನ ಚಾಲಕರು ಆರೋಪಿಸಿದ್ದಾರೆ. ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಕೈಗೊಂಡು…

Read More

ಕನ್ನಡಿಗರ ಮೇಲೆ ಮಲಯಾಳಂ ಕಡ್ಡಾಯ ಹೇರಿಕೆ ಸರಕಾರದ ಹಾಗೂ ಇಲ್ಲಿನ ಶಾಸಕರ ಕೊಡುಗೆ-ಆದರ್ಶ ಬಿ ಎಂ

ಕೇರಳ ಪಿನರಾಯಿ ಸರಕಾರ ರಾಜ್ಯ ದಲ್ಲಿ ಮಲಯಾಳಂ ಭಾಷಾ ಕಲಿಕೆಯನ್ನು ಕಡ್ಡಾಯ ಮಾಡಿದ್ದು, ಮಸೂದೆಯನ್ನು ಜಾರಿ ಮಾಡಿದೆ ಇದು ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ರ ಸಂವಿದಾನಿಕ ಹಕ್ಕಿನ ಮೇಲಿನ ದಬ್ಬಾಳಿಕೆ. ರಾಜ್ಯ ಸರಕಾರ ವಿಧಾನ ಸಭಾದಲ್ಲಿ ಮಸೂದೆ ಪಾಸ್ ಮಾಡುವಾಗ ಅದರ ವಿರುದ್ಧ ಹೊರಟ ನಡೆಸದ ಮಂಜೇಶ್ವರ ಹಾಗೂ ಕಾಸರಗೋಡು ಶಾಸಕರ ಮೌನ ಬೇಜವಾಬ್ದಾರತನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಶಾಸಕರ ಹಾಗೂ ಸರಕಾರದ ಕ್ರಮವನ್ನು ಖಂಡಿಸಿದರು. ಮಲಯಾಳಂ ಕಡ್ಡಾಯ…

Read More

ಸ್ವಯಂ ಸೇವಕ ಸಂಘದ ಶತಾಬ್ದಿ ಯನ್ನು ಸಾಯಿ ನಿಕೇತನ ಸೇವಾಶ್ರಮದಲ್ಲಿ ಆಚರಿಸಿದ ಅಯೋಧ್ಯಾ ಶಾಖೆಯ ಸ್ವಯಂ ಸೇವಕರು.

ಬೇಕೂರು:ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷಾಚರಣೆಯ ಪ್ರಯುಕ್ತ ಅಯೋಧ್ಯಶಾಖೆ ಬೇಕೂರಿನ ಸ್ವಯಂ ಸೇವಕರು ಭೇಟಿನೀಡಿ ಬೆಳಗ್ಗಿನ ಉಪಾಹಾರವನ್ನು ಆಶ್ರಿತರಿಗೆ ವಿತರಿಸಿದರು.ಭಾರತದ ಇತಿಹಾಸದಲ್ಲಿ 100ನೇ ವರ್ಷ ಆದ ಸಂಘದ ಧ್ಯೇಯದಂತೆ ಸೇವಾ ಮನೋಭಾವದ ಸದಾಶಯದ ಸುಂದರ ಕ್ಷಣವನ್ನು ಕಣ್ತುಂಬಿಸಿ ಕೊಳ್ಳುವ ಸಮಯ ನಮ್ಮಮುಂದಿನ ಪೀಳಿಗೆಗೆ ಮನದಟ್ಟು ಮಾಡುವ ಸಲುವಾಗಿ ಈ ಭೇಟಿ ನೀಡಲಾಯಿತು. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವ ಮಾತು ಕೇವಲ…

Read More
error: Content is protected !!