ಡಿವೈಡರ್‌ನಿಂದ ಹೊರಗೆ ಬಂದು ನಿಂತಿದ್ದ ಕಬ್ಬಿಣದ ರಾಡ್‌ಗೆ ಕಾರು ನೇರವಾಗಿ ಡಿಕ್ಕಿ-ಅಪಘಾತದಲ್ಲಿ ಇಬ್ಬರು ಗಂಭೀರ

ಮಂಜೇಶ್ವರ : ಡಿವೈಡರ್‌ನಿಂದ ಹೊರಗೆ ಬಂದು ನಿಂತಿದ್ದ ಕಬ್ಬಿಣದ ರಾಡ್‌ಗೆ ಕಾರು ನೇರವಾಗಿ ಡಿಕ್ಕಿಯಾದ ಪರಿಣಾಮ, ಪ್ರಯಾಣಿಕನ ಕೈಗೆ ಕಬ್ಬಿಣದ ರಾಡ್ ತೂರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯ ಗೊಂಡಿದ್ದಾರೆ. ಗಾಯಗೊಂಡ ಪಳ್ಳಿಕರ ಮೌವ್ವಲೆಯ ಶೆಬಾಬ್ (24), ಫಯಾದ್ (28) ಎಂಬವರನ್ನು ಕುಂಬಳೆ ಜಿಲ್ಲಾ ಸಹಕಾರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಸುಮಾರು 7.30ರ ಸುಮಾರಿಗೆ ಕುಂಬಳೆ ಜುಮಾ ಮಸೀದಿ ಬಳಿ ಸಂಭವಿಸಿದೆ. ಪಳ್ಳಿಕೆರೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿವೈಡರ್‌ನ ಹೊರಗೆ ಬಂದು ನಿಂತಿದ್ದ…

Read More

ಸುನಾಮಿಯಂತೆ ಬರುತ್ತಿರುವ ಬೇನಾಮಿ ವಿದ್ಯಾ ಸಂಸ್ಥೆಗಳು.ವಿದ್ಯಾರ್ಥಿಗಳ ಪ್ರವೇಶದ ಕೊರತೆಯಲ್ಲಿ ಸರ್ಕಾರಿ ಶಾಲೆಗಳು.

ತಿರುವನಂತಪುರ : ಸರಕಾರವು ಸರಕಾರಿ ಶಾಲೆಗಳ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸಿ ನೂತನ ವಿವಿಧ ಯೋಜನೆಗಳನ್ನು ರೂಪಿಸಿ ಪರಿಚಯಿಸಿದರೂ, ಇತ್ತೀಚಿನ ವರ್ಷಗಳಲ್ಲಿ ಸುನಾಮಿಯಂತೆ ಬರುತ್ತಿರುವ ಕೆಲವು ಬೇನಾಮಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳಿಂದಾಗಿ ಕೆಲವು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶವು ತೀರಾ ಕುಂಠಿತವಾಗಿದೆ. ಹೆಚ್ಚಿನ ಖಾಸಗಿ ವಿದ್ಯಾ ಸಂಸ್ಥೆಗಳು ವಿವಿಧ ರಾಜಕೀಯ ಪಕ್ಷದ ಉನ್ನತ ನಾಯಕರ ಆಡಳಿತದಲ್ಲಿ ಕಾರ್ಯಾಚರಿಸುತ್ತಿದ್ದು, ತಮಗೆ ಬೇಕಾದ ರೀತಿಯಲ್ಲಿ ಅನುಕೂಲಕರವಾದ ವರದಿಯನ್ನ ತಯಾರಿಸಿ ಸುಲಭವಾಗಿ ರಾಜ್ಯ ಸರ್ಕಾರದಿಂದ ಅನುಮತಿ ಪತ್ರ ( NOC) ಪಡೆದು ಕೇಂದ್ರ…

Read More

ವಿ.ವಿ. ಪಠ್ಯ ಕ್ರಮದಲ್ಲಿ ವೇಡನ್ ಗೀತೆ. ಅಳವಡಿಕೆ ಗೆ ಮಾನದಂಡವೇನು.?ಸ್ಪಷ್ಟನೆ ಕೇಳಿದ ಚಾನ್ಸ್ಲರ್

ತೀರಾ ಕಡುಬಡತನ ದಿಂದ ಅವಿರತ ಶ್ರಮ ದೊಂದಿಗೆ ಯಾವುದಾದರು ಕ್ಷೇತ್ರ ದಲ್ಲಿ ವಿಶಿಷ್ಟ ಸಾಧನೆ ಮಾಡಿದ ಪ್ರತಿಭಾನ್ವಿತ ಸಾಧಕರ ಕುರಿತಾಗಿ ಅವರ ಸಾಧನೆಯ ಬಗ್ಗೆ ಶಾಲಾ ಕಾಲೇಜು ಪಠ್ಯಪುಸ್ತಕದಲ್ಲಿ ಸೇರಿಸಿ ಮುಂದಿನ ಜನಾಂಗಕ್ಕೆ, ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ವಾಗುವಂತೆ ಮಾಡುವುದು ಉತ್ತಮ ಕಾರ್ಯವಾಗಿದೆ. ಆದರೆ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ 2025-26 ನೇ ಶೈಕ್ಷಣಿಕ ವರ್ಷದ ವಿವಿ ಪಠ್ಯಕ್ರಮದಲ್ಲಿ ಬುಡಕಟ್ಟು ಸಮುದಾಯದಿಂದ ಬಂದ ವಿಶಿಷ್ಟ ಪ್ರತಿಭೆಯ ಕಲಾವಿದ ಹರಿದಾಸ್ ಮುರಳಿ @ ವೇಡನ್ ಇತ್ತೀಚೆಗೆ ಹಾಡಿ ತುಂಬಾ ಜನಪ್ರಿಯ…

Read More

ಬಾಳಿಯೂರಿನಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿ ಆರಂಭ.

ಮಂಜೇಶ್ವರ : ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಅಯ್ಯಪ್ಪ ಕೃಪ ಯಕ್ಷಗಾನ ಅಧ್ಯಯನ ಕೇಂದ್ರ ಬಾಳಿಯೂರು ಸಂಸ್ಥೆಯ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭವು ನಡೆಯಿತು. ಇಲ್ಲಿನ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಸಂಕಬೈಲು ಸತೀಶ್ ಅಡಪ್ಪ ಉದ್ಘಾಟಿಸಿದರು. ಯಕ್ಷಗಾನ ಗುರುಗಳಾದ ಶ್ರೀ ಶೇಖರ ಶೆಟ್ಟಿ ಬಾಯಾರು, ಶ್ರೀ ರಾಧಾಕೃಷ್ಣ ರೈ ಶ್ರೀಮತಿ ತಾರಾಮಣಿ ವಿ ರೈ, ಯೋಗೇಶ್…

Read More

ಆಚಾರವಿಲ್ಲದ… ನಾಲಿಗೆಯಲ್ಲಿ ನೀಚ ಬುದ್ಧಿಯ ತೋರಿಸಿದ. ಪ್ರಮೋದ್ ನ ‘ಪ್ರಮಾದ.VSSC ಸಿಬ್ಬಂದಿ ಜಿಆರ್ ಪ್ರಮೋದ್ ಗೆ ಕಠಿಣ ಶಿಕ್ಷೆ ಆಗಬೇಕು

ತಿರುವನಂತಪುರ : ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ದೇಶದ ಗರಿಮೆಯನ್ನು, ಹಿರಿಮೆಯನ್ನು ವಿಶ್ವ ರಾಷ್ಟ್ರಗಳ ಮುಂದೆ ಬಾನೆತ್ತರಕ್ಕೆ ಹಾರಿಸಿದ ನಮ್ಮ ಹೆಮ್ಮೆಯ ಸಂಸ್ಥೆ. ಇಂತಹ ಸಂಸ್ಥೆಗಳ ಸುಪರ್ದಿಯಲ್ಲಿ ಬರುವ ಇನ್ನೊಂದು ಸಂಸ್ಥೆಯೇ (vssc.) ವಿಕ್ರಂ ಸಾರಾಭಾಯಿ ಸ್ಪೆಸ್ ಸೆಂಟರ್. ಕೇಂದ್ರ ಸರಕಾರದ ಆದೀನ ದಲ್ಲಿ ಈ ಸಂಸ್ಥೆಯು ಕಾರ್ಯಾಚರಿಸುತ್ತಿದೆ. ಇಂತಹ ಅಭಿಮಾನದ ನಮ್ಮ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿರುವ G R ಪ್ರಮೋದ್ ಎಂಬಾತ ತನ್ನ ಮುಖಪುಟದ ಬ್ಲಾಗಿನಲ್ಲಿ ಭಾರತಾಂಬೆಯ ಕುರಿತು ಕೆಟ್ಟ ಶಬ್ದಗಳನ್ನು ಉಪಯೋಗಿಸಿ ಲೇಖನ ಮಾಡಿದ್ದು, ನಾಗರಿಕ…

Read More

ಕೇರಳ: ಆರೋಗ್ಯ ಇಲಾಖೆ ಯ ಆನಾರೋಗ್ಯ ದ ಬಗ್ಗೆ ಡಾ. ಯೆರಿಸ್ ಬಿಚ್ಚಿಟ್ಟ ಸತ್ಯ.

ಇದೇನಾ ನಂಬರ್ ಒನ್ ಅಭಿವೃದ್ಧಿ ? ಸಾರ್ವಜನಿಕ ರ ಯಕ್ಷ ಪ್ರಶ್ನೆ. ತಿರುವನನಂತಪುರ : ಕಳೆದ 9 ವರ್ಷದ ನಿರಂತರವಾದ ಎಡರಂಗ ಸರಕಾರದ ಆಡಳಿತದಲ್ಲಿ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಮಾಡಿದ್ದೇವೆ ಎಂಬ ಉದ್ದಟ್ಟ ತನ ಮೆರೆಯುತ್ತಿರುವ ಸಹಕಾರಕ್ಕೆ ತಿರುವನಂತಪುರ ಮೆಡಿಕಲ್ ಕಾಲೇಜಿನ ಸರ್ಜನ್ ಡಾಕ್ಟರ್ ಹೇರಿಸ್ ಚಿರೇಕಲ್ ಬಿಚ್ಚಿಟ್ಟ ಸತ್ಯ ಆರೋಗ್ಯ ಇಲಾಖೆಯ ದುರಾವಸ್ತೆಯ ಸತ್ಯಾ ಸತ್ಯತೆಯನ್ನು ಬಯಲಿಗೆಳೆದಿದೆ. ಇಂದು ಚುನಾವಣಾ ಸಮಯದಲ್ಲಿ ಆ ಕ್ಷೇತ್ರವನ್ನು ನನ್ನ ಪ್ರತಿಷ್ಠೆಯ ಕಣವನ್ನಾಗಿ ತನ್ನಲ್ಲೇ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಪಡುತ್ತಿರುವ…

Read More

ಕೇರಳ: ರಾಜಕೀಯ ಪಕ್ಷಗಳ ಮುಂದಿನ ಚಿತ್ತ ಸ್ಥಳೀಯಾಡಳಿತ ಚುನಾವಣೆಯತ್ತ.

ತಿರುವನಂತಪುರಂ : 2026 ರ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ಸ್ಥಳೀಯಾಡಳಿತ ಚುನಾವಣೆಯು ಬಹುತೇಕ ಒಕ್ಟೋಬರ್ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು,ತ್ರೀ ಸ್ಥರ ಪಂಚಾಯತುಗಳಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಎಲ್ಲ ರಾಜಕೀಯ ಪಕ್ಷಗಳು ಪೂರ್ವ ಸಿದ್ಧತೆಯಲ್ಲಿದೆ. ರಾಜ್ಯದ ಒಟ್ಟು 941 ಗ್ರಾಮ ಪಂಚಾಯತ್ , 152 ಬ್ಲಾಕ್ ಪಂಚಾಯತ್ ,14 ಜಿಲ್ಲಾ ಪಂಚಾಯತ್ ,87 ಮುನ್ಸಿಪಾಲಿಟಿ ಮತ್ತು 6 ಕಾರ್ಪೋರೇಶನ್ ಗೆ ಚುನಾವಣೆ ನಡೆಯಲಿದೆ. ಇತ್ತೀಚೆಗೆ ನಡೆದ ನಿಲಂಬೂರ್ ಉಪಚುನಾವಣೆಯ ನಂತರ ಎಲ್ಲಾ ರಾಜಕೀಯ ಪಕ್ಷ…

Read More

ಭಾರೀ ಗಾಳಿಗೆ ಭಾರೀ ಗಾತ್ರದ ಮಾವಿನ ಮರ ಧಾರಾಶಾಯಿ

ಐನೂರು ವರ್ಷಗಳ ಇತಿಹಾಸ ಸಾರುವ ಪಾವೂರು ಪೊಯ್ಯ “ಕಟ್ಟೆಜಾತ್ರೆ” (ದೊಂಪದ ಜಾತ್ರೆ) ನಡೆಯುವ ಬೃಹತ್ ‘ಮಾವಿನ ಮರ’ ಮಧ್ಯಾಹ್ನ ಬೀಸಿದ ಭಾರಿ ಗಾಳಿಗೆ ಧಾರಾಶಾಯಿ, ಮಂಜೇಶ್ವರ: “ಕಟ್ಟೆ ಜಾತ್ರೆ” (ದೊಂಪದ ಜಾತ್ರೆ) ನಡೆಯುವ ಇತಿಹಾಸ ಸಾರುವ ಕಟ್ಟೆಯ ಬೃಹತ್ ಮಾವಿನ ಮರವೊಂದು ಇಂದು ಅಪರಾಹ್ನ 3 ಗಂಟೆಗೆ ಬೀಸಿದ ಭಾರಿ ಗಾಳಿಗೆ ಧಾರಾಶಾಯಿಯಾದ ಘಟನೆ ಮಂಜೇಶ್ವರ ಪಾವೂರಿನಲ್ಲಿ ನಡೆದಿದೆ. ಇಲ್ಲಿನ ಪೊಯ್ಯ ಶ್ರೀ ಚಾಮುಂಡಿ ಬಂಟ ಪರಿವಾರ ದೈವಗಳ ಆದಿಸ್ಥಳದ ಕಟ್ಟೆಯಲ್ಲಿರುವ ಬೃಹತ್ ಮಾವಿನ ಮರವೊಂದು ಮಧ್ಯಭಾಗದಿಂದಲೇ…

Read More

ವರ್ಕಾಡಿಯಲ್ಲಿ ನಡೆದ ಭೀಬತ್ಸ ಘಟನೆ :ಬೆಂಕಿ ಹಚ್ಚಿ ತಾಯಿಯನ್ನು ಕೊಂದ ಮಗ, ನೆರೆಮನೆಯ ಮಹಿಳೆಗೂ ಗಂಭೀರ

ರಾತ್ರಿ ಹೊತ್ತು ಮನೆಯಲ್ಲಿ ಮಲಗಿದೆ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಂದು ಬಳಿಕ, ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದ್ದು ತಾಯಿ ಸಾವನ್ನಪ್ಪಿದ್ದಾರೆ ನೆರೆಮನೆಯ ಮಹಿಳೆ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರ್ಕಾಡಿ ನಲ್ಲಂಗಿ ನಿವಾಸಿ ದಿ.ಲೂಯಿಸ್ ಮೊಂತೇರೋರವರ ಪತ್ನಿ ಹಿಲ್ಡಾ (60) ಮೃತಪಟ್ಟ ಮಹಿಳೆ. ಪುತ್ರ ಮೇಲ್ವಿನ್ ಈ ಕೃತ್ಯವೆಸಗಿಧ್ಧಾನೆ. ನೆರೆಮನೆಯ ವಿಕ್ಟರ್ ರವರ ಪತ್ನಿ ಲೊಲಿಟಾ (30) ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಜೂನ್ 26 ಗುರುವಾರ ಮುಂಜಾನೆ ಈ ಘಟನೆ…

Read More

ವಯನಾಡು ಚೂರುಲ್ ಮಲೆಯಲ್ಲಿ ಮತ್ತೆ ವರುಣನ ರುದ್ರ ನರ್ತನ.ಶಾಶ್ವತ ಪರಿಹಾರಕ್ಕೆ ನಾಗರಿಕರ ಆಗ್ರಹ

ತಿರುವನಂತಪುರಂ : ಕಳೆದ ಬಾರಿ ಸುರಿದ ಕುಂಭ ದ್ರೋಣ ಮಳೆಗೆ ಇಡೀ ಮನುಕುಲವನ್ನೇ ಹೃದಯ ವಿದ್ರಾವಾಹಕ ಸನ್ನಿವೇಶಕ್ಕೆ ತಂದೊಡ್ಡಿದ್ದ ವಯನಾಡು ಜಿಲ್ಲೆಯ ಚೂರುಲ್ ಪೇಟೆಯ ಗುಡ್ಡ ಜರಿತ ಪ್ರದೇಶದಲ್ಲಿ ನಿನ್ನೆಯಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಮತ್ತೆ ಅದೇ ಸ್ಥಿತಿ ಉಂಟಾಗಿದ್ದು ,ಶಾಶ್ವತ ಪರಿಹಾರಕ್ಕೆ ನಾಗರಿಕರು ಸರಕಾರಕ್ಕೆ ಒತ್ತಾಯ ಪಡಿಸಿದ್ದಾರೆ. ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಯಿಂದ ಅಪಾರವಾದ ನಾಶ ನಷ್ಟ ಉಂಟಾಗಿದ್ದು ,ಸ್ಥಳೀಯರನ್ನು ಸೂಕ್ತವಾದ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.ಸ್ಥಳಕ್ಕಾಗಮಿಸಿದ ದುರಂತ ಪರಿಹಾರ ಸ್ಪೆಷಲ್ ಆಫೀಸರ್ ಹಾಗೂ ಜಿಲ್ಲಾಧಿಕಾರಿಯವರಲ್ಲಿ…

Read More
error: Content is protected !!