ಕಾಸರಗೋಡು ನಗರಸಭೆ ಆರೋಗ್ಯ ವಿಭಾಗದ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಹಲವು ಹೋಟೆಲ್‌ಗಳಿಂದ ಹಳಸಿದ ಹಾಗೂ ಮಾನವ ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ.

ಓಷನ್ ಸೀ ಫುಡ್, ಲೆ ಬಾಂಬೂ ರೆಸ್ಟೋರೆಂಟ್, ಹೋಟೆಲ್ ಡೀಲಕ್ಸ್ ಹಾಗೂ ಚಾಯ ಕಥಾ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ತಪಾಸಣೆ ನಡೆಸಿ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಗ್ಯ ನಿರೀಕ್ಷಕ ಮಧು ಕೆ. ಹಾಗೂ ಪಿಎಚ್‌ಐಗಳಾದ ಶೀನಾ, ವೈಶಾಖ್, ಮುಬಶಿರಾ ಮತ್ತು ನೌಫಿಯಾ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ. ನಿಯಮ ಉಲ್ಲಂಘಿಸಿದ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ತಪಾಸಣೆ ಮತ್ತಷ್ಟು ತೀವ್ರಗೊಳಿಸಲು ನಗರಸಭೆ ನಿರ್ಧರಿಸಿದೆ.


