ಬಾಳಿಯೂರಿನಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿ ಆರಂಭ.

ಮಂಜೇಶ್ವರ : ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಅಯ್ಯಪ್ಪ ಕೃಪ ಯಕ್ಷಗಾನ ಅಧ್ಯಯನ ಕೇಂದ್ರ ಬಾಳಿಯೂರು ಸಂಸ್ಥೆಯ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭವು ನಡೆಯಿತು.


ಇಲ್ಲಿನ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಸಂಕಬೈಲು ಸತೀಶ್ ಅಡಪ್ಪ ಉದ್ಘಾಟಿಸಿದರು.

ಯಕ್ಷಗಾನ ಗುರುಗಳಾದ ಶ್ರೀ ಶೇಖರ ಶೆಟ್ಟಿ ಬಾಯಾರು, ಶ್ರೀ ರಾಧಾಕೃಷ್ಣ ರೈ ಶ್ರೀಮತಿ ತಾರಾಮಣಿ ವಿ ರೈ, ಯೋಗೇಶ್ ರಾವ್ ಚಿಗುರುಪಾದೆ, ಶ್ರೀ ಅಶ್ವಿನ್ ಕಲ್ಲಗದ್ದೆ ಮುಂತಾದವರು ಉಪಸ್ಥಿತರಿದ್ದರು. ಬಾಳಿಯೂರು ಶ್ರೀ ಅಯ್ಯಪ್ಪ ಭಜರ ಮಂದಿರದ ಅಧ್ಯಕ್ಷರಾದ ಶ್ರೀ ಮುತ್ತು ಶೆಟ್ಟಿ ಬಾಳಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ರಾಮಕೃಷ್ಣ ಸಂತಡ್ಕ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಶ್ರೀ ಬ್ರಿಜೇಶ್ ಬಾಳಿಯೂರು ವಂದನಾರ್ಪಣೆಗೈದರು.


ಪ್ರತಿ ಭಾನುವಾರ ಸಂಜೆ 03:30 ರಿಂದ ಉಚಿತ ತರಗತಿಗಳು ನಡೆಯಲಿದೆ ಖ್ಯಾತ ಯಕ್ಷಗಾನ ಗುರುಗಳಾದ ಶ್ರೀ ಶೇಖರ್ ಶೆಟ್ಟಿ ಬಾಯಾರು ತರಗತಿ ನಡೆಸಿಕೊಡಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!