ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ‘ಕಮ್ಯುನಿಟಿ ಹೆಲ್ಪರ್ಸ್ ಡೇ’: ಸಮುದಾಯ ಸೇವಕರಿಗೆ ಪುಟ್ಟ ಮಕ್ಕಳಿಂದ ಗೌರವ ನಮನ
ಮಂಜೇಶ್ವರ: ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಮಹಾನ್ ವ್ಯಕ್ತಿಗಳನ್ನು ಗೌರವಿಸುವ ಮತ್ತು ಅವರ ಸೇವೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ, ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯ ಕೆ.ಜಿ. ವಿಭಾಗದ ವತಿಯಿಂದ ವಿನೂತನ ‘ಕಮ್ಯುನಿಟಿ ಹೆಲ್ಪರ್ಸ್ ಡೇ’ ಸಮುದಾಯ ಸೇವಕರ ದಿನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ವಿದ್ಯಾರ್ಥಿಗಳು ವೈದ್ಯರು, ಪೊಲೀಸರು, ರೈತರು, ಅಗ್ನಿಶಾಮಕ ದಳದ ಸಿಬ್ಬಂದಿ, ಶಿಕ್ಷಕರು ಮತ್ತು ಸಮಾಜದ ಇತರ ವಿವಿಧ ವಲಯಗಳ ಸೇವಕರ ವೇಷಭೂಷಣಗಳನ್ನು ಧರಿಸಿ ಪಾತ್ರಗಳನ್ನು…
