ಮಾದಕವಸ್ತು ವಿರುದ್ಧ ಅಬಕಾರಿ ಕಾರ್ಯಾಚರಣೆ: ಮೂವರು ಆರೋಪಿಗಳ ಬಂಧನ

ಕಾಸರಗೋಡು | ಜು. 9: ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಸಾಗಿಸುತ್ತಿದ್ದ ಮೂವರನ್ನು ಬಂಧಿಸಿ, ಮಾದಕವಸ್ತು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ತಾಲೂಕಿನ ಚಂಗಲ ಗ್ರಾಮದ ಸಂತೋಷ್ ನಗರದಲ್ಲಿ ಕಾರಿನಲ್ಲಿ 1.899 ಗ್ರಾಂ ಎಂಡಿಎಂಎ ಸಾಗಿಸುತ್ತಿದ್ದ ವೇಳೆ ಆರೋಪಿಗಳಾದ ಅಬ್ದುಲ್ ರೌಫ್, ಕೌಶಿಕ್ ಹಾಗೂ ಮುಹಮ್ಮದ್ ಜಸೀರ್ ಅವರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕಾಸರಗೋಡು ಅಬಕಾರಿ ನಿರೀಕ್ಷಕ ಅಶ್ವಿನ್ ಟಿ.ಕೆ. ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಾದಕವಸ್ತು ಸಾಗಾಟಕ್ಕೆ…

Read More

ಜು.11ರಂದು ಸಿಐಐ ಮಂಗಳೂರು ಆರೋಗ್ಯ ಶೃಂಗಸಭೆ

ಮಂಗಳೂರು: ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಮಂಗಳೂರು ವಲಯದ ವತಿಯಿಂದ ಪ್ರಥಮ ಸಿಐಐ ಮಂಗಳೂರು ಆರೋಗ್ಯ ಶೃಂಗಸಭೆ-2026 ಜುಲೈ 11ರಂದು ಬೆಳಿಗ್ಗೆ 10 ಗಂಟೆಗೆ ನಗರದ ಅವತಾರ್ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಸಿಐಐ ಮಂಗಳೂರು ಅಧ್ಯಕ್ಷ ಅಭಿನವ್ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರಾವಳಿ ಕರ್ನಾಟಕವನ್ನು ಜಾಗತಿಕ ಆರೋಗ್ಯ ಸೇವಾ ಗಮ್ಯಸ್ಥಾನವಾಗಿ ರೂಪಿಸುವುದು” ಎಂಬ ಧ್ಯೇಯದೊಂದಿಗೆ ಶೃಂಗಸಭೆ ಆಯೋಜಿಸಲಾಗಿದೆ. ಆರೋಗ್ಯ ಕ್ಷೇತ್ರದ ತಜ್ಞರು, ಆಸ್ಪತ್ರೆಗಳ ಆಡಳಿತ ಮಂಡಳಿಗಳು, ನೀತಿ ನಿರ್ಧಾರಕರು, ವೈದ್ಯರು, ವೈದ್ಯಕೀಯ…

Read More

ಕೋಝಿಕ್ಕೋಡಿನಲ್ಲಿ ರೖಲ್ವೇ ಹಳಿಗೆ ಜರಿದು ಬಿದ್ದ ಕ್ಲಾಕ್ ಟವರ್: ರೖಲು ಸಂಚಾರ ಅಸ್ತವ್ಯಸ್ತ

ಕೋಝಿಕ್ಕೋಡ್ ಜು 9): ಕೋಝಿಕ್ಕೋಡ್ ರೖಲು ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಕ್ಲಾಕ್ ಟವರ್ ಕಟ್ಟಡ ಕುಸಿದು ಬಿದ್ದ ಘಟನೆ ನಡೆದಿದೆ.ನಿಲ್ದಾಣದ ಎರಡನೇ ಫ್ಲಾಟ್ ಫಾರ್ಮ್ ಗೆ ಕ್ಲಾಕ್ ಟವರ್ ಜರಿದು ಬಿದ್ದ ಪರಿಣಾಮ 1,2,3 ಫ್ಲಾಟ್ ಫಾಮಿನ ವಿದ್ಯುತ್ ವಿಚ್ಛೇದನವಾಗಿದೆ. ರೖಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ರೖಲು ನಿಲ್ದಾಣದ ನವೀಕರಣ ಕಾಮಗಾರಿಗಳು ನಡೆಯುತ್ತಿರುವುದರ ನಡುವೆ ಕ್ಲಾಕ್ ಟವರು ಜರಿದು ಬಿದ್ದಿದ್ದು, ಜನರಿಗೆ ಅಪಾಯಗಳೇನೂ ಸಂಭವಿಸಿಲ್ಲ ಎಂದು ವರದಿಯಾಗಿದೆ.ಟವರ್ ಬೀಳುವಾಗ ರೖಲು ನಿಲ್ಧಾಣದಲ್ಲಿ ರೖಲೊಂದು ನಿಂತಿತ್ತು. ಘಟನೆಯ ಹಿನ್ನೆಲೆಯಲ್ಲಿ…

Read More

ಅನುಪಮಾ ರಾಘವೇಂದ್ರಗೆ ‘ಕನ್ನಡ ಪಯಸ್ವಿನಿ ಕಲಾ ರತ್ನ’ ಪ್ರಶಸ್ತಿ

ಕಾಸರಗೋಡು: ಭರತನಾಟ್ಯ ಕಲಾವಿದೆ, ಲೇಖಕಿ, ಸಂಘಟಕಿ, ಸಂಪನ್ಮೂಲ ವ್ಯಕ್ತಿ ಹಾಗೂ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.), ಎಡನೀರು ಸಂಸ್ಥೆಯ ಸ್ಥಾಪಕಾಧ್ಯಕ್ಷೆ ವಿದುಷಿ ಶ್ರೀಮತಿ ಅನುಪಮಾ ರಾಘವೇಂದ್ರ ಅವರು ಕನ್ನಡ ಭವನ ನೀಡುವ ಪ್ರತಿಷ್ಠಿತ ಅಂತರ್‌ರಾಜ್ಯ ‘ಕನ್ನಡ ಪಯಸ್ವಿನಿ ಕಲಾ ರತ್ನ’ ಅಚೀವ್‌ಮೆಂಟ್ ಅವಾರ್ಡ್–2026ಕ್ಕೆ ಆಯ್ಕೆಯಾಗಿದ್ದಾರೆ. ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಸಮಾರಂಭದ ಅಂಗವಾಗಿ ನಡೆಯಲಿರುವ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್….

Read More

ಡಾ. ಕೊಲಚಪ್ಪೆ ಗೋವಿಂದ ಭಟ್‌ಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ’

ಕಾಸರಗೋಡು: ಸಾಹಿತಿ, ಸಾಹಿತ್ಯ ಪರಿಪೋಷಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಕೊಲಚಪ್ಪೆ ಗೋವಿಂದ ಭಟ್ ಅವರು ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026’ಗೆ ಆಯ್ಕೆಯಾಗಿದ್ದಾರೆ. ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಸಮಾರಂಭದ ಅಂಗವಾಗಿ ನಡೆಯಲಿರುವ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ…

Read More

ಜು. 26ರಂದು ಕಾಸರಗೋಡಿನಲ್ಲಿ ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನ; ಪೂರ್ವಭಾವಿ ಸಭೆಯಲ್ಲಿ ಸಿದ್ಧತೆಗಳ ಪರಿಶೀಲನೆ

ಕಾಸರಗೋಡು | ಜು. 9: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಭವನ ಪ್ರಕಾಶನ ಹಾಗೂ ಕನ್ನಡ ಭವನ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 26ರಂದು ನಡೆಯಲಿರುವ ‘ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನ’ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮ್ಮೇಳನ ಸಮಿತಿಯ ಸಮಾಲೋಚನಾ ಸಭೆ ಕನ್ನಡ ಭವನ ಕೇಂದ್ರ ಕಚೇರಿಯಲ್ಲಿ ನಡೆಯಿತು. ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಅವರ…

Read More

ವಯನಾಡು ಗುಡ್ಡ ಕುಸಿತ-48 ಗಂಟೆಗಳ ಕಾರ್ಯಾಚರಣೆ ಯಶಸ್ವಿ – ರಸ್ತೆ ಮೇಲೆ ಬಿದ್ದಿದ್ದ ಬೆಟ್ಟ, ಬಂಡೆಗಳ ತೆರವು

ವಯನಾಡು: ಕೇರಳದ ವಯನಾಡು (Wayanad) ಜಿಲ್ಲೆಯ ಮೆಪ್ಪಾಡಿ (Meppadi) ಸಮೀಪ ಸಂಭವಿಸಿದ್ದ ಭೀಕರ ಬೆಟ್ಟ ಕುಸಿತದ ಬಳಿಕ ಕೈಗೊಂಡಿದ್ದ ಮೊದಲ ಹಂತದ ರಕ್ಷಣಾ ಮತ್ತು ತೆರವು ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸುಮಾರು 48 ಗಂಟೆಗಳ ಕಾಲ ನಿರಂತರವಾಗಿ ನಡೆದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡ ಪ್ರಮುಖ ರಸ್ತೆ ಹಾಗೂ ಮೀನಾಕ್ಷಿ ನದಿ ಸೇತುವೆಯ ಮೇಲಿದ್ದ ಮಣ್ಣು, ಬಂಡೆಗಳು ಮತ್ತು ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದೆ. ಬೆಟ್ಟ ಕುಸಿತದ ವೇಳೆ ಬೃಹತ್ ಗಾತ್ರದ ಬಂಡೆಗಳು ರಸ್ತೆ…

Read More

‘ಕನ್ನಡ ಪಯಸ್ವಿನಿ ಸೇವಾ ರತ್ನ’ ಪ್ರಶಸ್ತಿಗೆ ನಾಗರಾಜ್ ಟಿ. ಆಯ್ಕೆ

ಮಂಗಳೂರು: ತುಮಕೂರಿನ ಸಮಾಜಸೇವಕ ನಾಗರಾಜ್ ಟಿ. ಅವರು ಕನ್ನಡ ಭವನ ನೀಡುವ ಪ್ರತಿಷ್ಠಿತ ಅಂತರ್‌ರಾಜ್ಯ ‘ಕನ್ನಡ ಪಯಸ್ವಿನಿ ಸೇವಾ ರತ್ನ’ ಅಚೀವ್‌ಮೆಂಟ್ ಅವಾರ್ಡ್–2026ಕ್ಕೆ ಆಯ್ಕೆಯಾಗಿದ್ದಾರೆ. ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಸಮಾರಂಭದ ಅಂಗವಾಗಿ ನಡೆಯಲಿರುವ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ…

Read More

ಆ.2ರಿಂದ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್‌ಶಿಪ್ : ಡಾ. ಅಮರ ಶ್ರೀ ಅಮರನಾಥ ಶೆಟ್ಟಿ

ಮಂಗಳೂರು: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ (ರಿ.) ವತಿಯಿಂದ ರಾಷ್ಟ್ರೀಯ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್-2026 ಆಗಸ್ಟ್ 2ರಿಂದ 8ರವರೆಗೆ ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಅಮರ ಶ್ರೀ ಅಮರನಾಥ ಶೆಟ್ಟಿ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 600ಕ್ಕೂ ಅಧಿಕ ಆಟಗಾರರು, ತರಬೇತುದಾರರು ಮತ್ತು ಪೋಷಕರು ಭಾಗವಹಿಸುವ ನಿರೀಕ್ಷೆಯಿದ್ದು, ಈ ರಾಷ್ಟ್ರೀಯ…

Read More

ಕೇರಳ ಅವಳಿ ಸುರಂಗ ನಿರ್ಮಾಣ ಕಂಪನಿಗಿದೆ ಕರ್ನಾಟಕದ ನಂಟು

ವಯನಾಡು: ಕೇರಳದ ವಯನಾಡಿನಲ್ಲಿ ಭೂಕುಸಿತ (Wayanad Landslide) ಸಂತ್ರಸ್ತ ಪ್ರದೇಶದಲ್ಲಿ ಅವಳಿ ಸುರಂಗ (Twin Tunnel) ನಿರ್ಮಿಸುತ್ತಿರುವ ದಿಲೀಪ್ ಬಿಲ್ಡ್ ಕಾನ್‌ಗೆ (Dilip Buildcon Limited) ಕರ್ನಾಟಕದ ನಂಟಿದೆ. ಜೊತೆಗೆ ಕರ್ನಾಟಕದಲ್ಲಿ ಈ ಸಂಸ್ಥೆ ಕೈಗೊಂಡ ಹಲವು ಯೋಜನೆಗಳು ಕೂಡಾ ವಿವಾದಕ್ಕೆ ತುತ್ತಾಗಿದ್ದವು. ಅಲ್ಲದೆ ಕೆಲವೊಂದು ಕೆಲಸಗಳಿಗೆ ಈ ಸಂಸ್ಥೆಗೆ ನಿರ್ಬಂಧ ಕೂಡಾ ಹೇರಲಾಗಿತ್ತು. ನಂಟು:ಮೈಸೂರು – ಬೆಂಗಳೂರು ನಡುವಿನ 117 ಕಿ.ಮೀ ಮಾರ್ಗದ ಎಕ್ಸ್‌ಪ್ರೆಸ್‌ ವೇ ಅನ್ನು 8,480 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು ಇದೇ…

Read More
error: Content is protected !!