ಆಂಜನೇಯ ಫ್ರೆಂಡ್ಸ್ ಕ್ಲಬ್ ಕಣ್ವತೀರ್ಥ – 79 ನೇ ಸ್ವಾತಂತ್ರ್ಯ ದಿನಾಚರಣೆ

ಮಂಜೇಶ್ವರ : ಕಣ್ವತೀರ್ಥದ ಆಂಜನೇಯ ಫ್ರೆಂಡ್ಸ್ ಕ್ಲಬ್ ನವರು 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಂಜನೇಯ ಮೈದಾನ ಕಣ್ವತೀರ್ಥದಲ್ಲಿ ಸಂಭ್ರಮದಿಂದ ಆಚರಿಸಿದರು . ಧ್ವಜಾರೋಹಣವನ್ನು ಯುವ ಉದ್ಯಮಿ, ಸಮಾಜ ಸೇವಕರಾದ ಶ್ರೀ ಪವನ್ ಅಂಜರೆಯವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ 21 ನೇ ವಾರ್ಡ್ ನ ಪಂಚಾಯತ್ ಸದಸ್ಯ ಲಕ್ಷ್ಮಣ್ ಕುಚ್ಚಿಕ್ಕಾಡ್ , ಧಾರ್ಮಿಕ ಚಿಂತಕರು, ಸಮಾಜ ಸೇವಕರಾದ ಶ್ರೀನಿವಾಸ್ ಭಟ್ ,ಆಂಜನೇಯ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಸುನಿಲ್ .ಪಿ ಕಣ್ವತೀರ್ಥರವರು ಅತಿಥಿಗಳಾಗಿ ಭಾಗವಹಿಸಿದ್ದರು.

Read More

🙏ಹರಿಜಲ್ ಶ್ರೀ ಮಹಾವಿಷ್ಣು ದೇವಸ್ಥಾನದ ಮೇಲ್ಚಾವಣಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ D.D ಹಸ್ತಾಂತರ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಾಸರಗೋಡು ತಾಲೂಕಿನ ಮೊಗ್ರಾಲ್ ಪುತ್ತೂರು ಸಮೀಪದ ಹರಿಜಲ್ ಶ್ರೀ ಮಹಾವಿಷ್ಣು ದೇವಸ್ಥಾನದ ಮೇಲ್ಚವಾನಿ ನಿರ್ಮಾಣಕ್ಕೆ 50,000 ರೂಪಾಯಿ ಮೊತ್ತ D.Dಯನ್ನ ನಿನ್ನೆ ಕಾಸರಗೋಡು ತಾಲೂಕಿನ ಯೋಜನಾಧಿಕಾರಿ ಶ್ರೀ ದಿನೇಶ್ ಅವರು ಶ್ರೀ ಮಹಾವಿಷ್ಣು ದೇವಸ್ಥಾನದ ಸಮಿತಿಯ ಅಧಕ್ಷರ ಹಾಗೂ ಪದಾಧಿಕಾರಿಗಳ ಉಪ್ಪಸ್ಥಿತಿಯಲ್ಲಿ ಸಮಿತಿಯರಿಗೆ ಹಸ್ತಾಂತರಿಸಿದರು . ಈ ಸಂದರ್ಭದಲ್ಲಿ ಸಮಿತಿಯ ಅಧಕ್ಷರಾದ ಶ್ರೀ ಉಮೇಶ್ ಕಡಪುರ , ಪದಾಧಿಕಾರಿಗಳಾದ ಶಿವಪ್ಪ ಗಟ್ಟಿ , ಶ್ರೀನಿವಾಸ , ಸುಂದರ ,…

Read More

ಮಂಜೇಶ್ವರಾದ್ಯಂತ ಭಕ್ತಿ ಹಾಗೂ ಭಾವನಾಪೂರ್ಣವಾಗಿ ಆಚರಿಸಿದ ಸ್ವಾತಂತ್ರ್ಯ ದಿನಾಚರಣೆ.

ಮಂಜೇಶ್ವರ : 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಂಜೇಶ್ವರಾದ್ಯಂತ ಭಕ್ತಿ ಹಾಗೂ ಭಾವನಾಪೂರ್ಣವಾಗಿ ಆಚರಿಸಲಾಯಿತು. 1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿಯಾದ ನೆನಪಿನಲ್ಲಿ, ಈ ದಿನವನ್ನು ವಿವಿಧೆಡೆ ಸಂಭ್ರಮ ಹಾಗೂ ಘನತೆಯಿಂದ ಆಚರಿಸಲಾಯಿತು.ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಪಂಚಾಯತು ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಧ್ವಜಾರೋಹಣಗೈದರು. ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಸುನಿತಾ ಕೆ ಧ್ವಜಾರೋಹಣಗೈದರು. ಅದೇ ರೀತಿ ಪೀಸ್ ಕ್ರಿಯೇಟಿವ್ ಹೊಸಂಗಡಿ ಶಾಲೆಯಲ್ಲಿ ಶಾಲಾ ಚೇಯರ್ಮ್ಯಾನ್ ಅಬ್ದುಲ್ ರಹ್ಮಾನ್ ಅರಿಮಲ ಹಾಗೂ ಕುಂಜತ್ತೂರು ಪೀಸ್…

Read More

ಪಾವೂರು ಮಹಾತ್ಮಾ ಗಾಂಧಿ ಸರ್ಕಲ್ ನಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆ.

ಮಂಜೇಶ್ವರ :ಪಾವೂರು ಮಹಾತ್ಮಾ ಗಾಂಧಿ ಸರ್ಕಲ್ ನಡೆದ 79ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಪಾವೂರುಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷರಾದ ಮೋನಪ್ಪ ಮುಟ್ಲ ದೋಜಾರೋಹಣ ಮಾಡಿದರು ಕಾರ್ಯಕ್ರಮ ಅಧ್ಯಕ್ಷತೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು ಕಾರ್ಯಕ್ರಮದಲ್ಲಿ ತ್ಯಂಪಣ್ಣ ರೈ ಮುಟ್ಲ ಸುಧಾಕರ ಶೆಟ್ಟಿ ಪಾವೂರು ಅಶೋಕ ಪಾವೂರು ತನಿಸ್ಕಾದಯಾನಂದ ಪಾವೂರು ಜಾಫರ್ ಪಾವೂರು ಶಾಪಿ ಪಾವೂರು ಪಾರೂಕ್ ಪಾವೂರು ಖಾದರ್ ಪಾವೂರು ಪುನೀತ್ ರೈ ಪಾವೂರು ಭದ್ರು ಕುಂಡಾಪು ಅಬೂಬಕ್ಕರ್ ಕೊಂಬಗುರಿ ಹಾಗೂ…

Read More

ದಕ್ಷಿಣಕನ್ನಡದ ಹೆಸರು ಮಂಗಳೂರು ಎಂದಾಗಲಿ :- ಅಧಿವೇಶನದಲ್ಲಿ ಆಗ್ರಹಿಸಿದ ಶಾಸಕ ಕಾಮತ್

ಕೇವಲ ಒಂದೆರಡು ತಿಂಗಳಲ್ಲಿಯೇ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲು ತೋರಿದ ಉತ್ಸಾಹವನ್ನು ದಕ್ಷಿಣಕನ್ನಡದ ಹೆಸರನ್ನು ಮಂಗಳೂರು ಎಂದು ಬದಲಿಸುವಲ್ಲಿಯೂ ರಾಜ್ಯ ಸರ್ಕಾರ ತೋರಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಆಗ್ರಹಿಸಿದರು. ಗಮನ ಸೆಳೆಯುವ ವೇಳೆ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾಸಕರು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾಧಿಕಾರಿಗಳಿಂದ ವರದಿ ಬರಲು ಬಾಕಿ ಇದ್ದು ಪ್ರಸ್ತಾವನೆ ಸ್ವೀಕೃತಗೊಂಡಿರುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಆ ಪ್ರಸ್ತಾವನೆ ಸಲ್ಲಿಕೆಯಾಗಲು ಸರ್ಕಾರದಿಂದ ಪೂರಕವಾದ ವಾತಾವರಣ…

Read More

ಸದನದಲ್ಲಿ ಯಶಸ್ವಿಯಾಗಿ ಕಲಾಪ ನಡೆಸಿಕೊಟ್ಟ ಶಾಸಕ ಮಂಜುನಾಥ ಭಂಡಾರಿ!

ಬೆಂಗಳೂರು: ಇಂದು ವಿಧಾನಸೌಧದಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿಯವರು ಸಭಾಪತಿ ಪೀಠದಲ್ಲಿ ಕುಳಿತು ಶೂನ್ಯ ವೇಳೆಯ ಚರ್ಚೆಯನ್ನು ಹಾಗೂ ವಿವಿಧ ವಿಧೇಯಕಗಳ ಅಂಗೀಕಾರದ ಮೇಲಿನ ಚರ್ಚೆಯನ್ನು ಬಹಳ ಸುಧೀರ್ಘವಾಗಿ ಹಾಗೂ ಅರ್ಥಗರ್ಭಿತವಾಗಿ ನಡೆಸಿಕೊಟ್ಟರು. ಶಾಸಕ ಭಂಡಾರಿ ಅವರು ಈ ಹಿಂದೆಯೂ ಅನೇಕ ಬಾರಿ ಯಶಸ್ವಿಯಾಗಿ ವಿಧಾನ ಪರಿಷತ್ ಕಲಾಪವನ್ನು ನಿರ್ವಹಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದಾರೆ.

Read More

ರಿಧಂ ಕಲ್ಚರಲ್ ವಿಂಗ್ ಮಂಜೇಶ್ವರ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ವಿಡಿಯೋ ಆಲ್ಬಮ್ ‘ಮಾ ತುಜೆ ಸಲಾಂ’ ಬಿಡುಗಡೆ:

ರಿಧಂ ಕಲ್ಚರಲ್ ವಿಂಗ್ ಮಂಜೇಶ್ವರದ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ವಿಡಿಯೋ ಆಲ್ಬಮ್ ‘ಮಾ ತುಜೆ ಸಲಾಂ’ ಬಿಡುಗಡೆ ನಮ್ಮ ಮೀಡಿಯಾ ಕಚೇರಿಯಲ್ಲಿ ಖ್ಯಾತ ಚಲನಚಿತ್ರ ,ನಾಟಕ ಹಾಸ್ಯ ನಟ ಸು ಫ್ರಮ್ ಸೋ ಚಿತ್ರದ ಬಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ ಬಿಡುಗಡೆಗೊಳಿಸಿದರು ಈ ಹಾಡಿಗೆ ಸಬಿ ತೆಕ್ಕೆಪುರಂ ,ಅಬ್ದುಲ್ ರಾಫಿ ,ಸತೀಶ್ ಕಯ್ಯಾರ್ ,ನಜೀರ ಎಂ.ಪಿ ಸಾಹಿತ್ಯವನ್ನು ನೀಡಿದ್ದು , ಧ್ವನಿ ಮುದ್ರಣವನ್ನು ರಾಜು ಉಪ್ಪಳ , ದಸ್ತಕೀರ್ ನಿರ್ವಾಹಿದ್ದಾರೆ , ಗಫೂರ್ ಪೆರ್ವಾಡ್ ಛಾಯಾಗ್ರಹಣದಲ್ಲಿ…

Read More

ಶಾರದಾ ಆರ್ಟ್ಸ್ ಕಲಾವಿದರು (ರಿ) ಮಂಜೇಶ್ವರ: ಹೊಚ್ಚ ಹೊಸ ನಾಟಕ “ಜೈ ಭಜರಂಗ ಬಲಿ” ನಾಟಕ ಪ್ರದರ್ಶನ. ಆ.16ರಂದು.

ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಐಸಿರಿ ತಂಡದ ಈ ವರ್ಷದ ಹೊಚ್ಚ ಹೊಸ ನಾಟಕ ಜೈ ಭಜರಂಗ ಬಲಿ ಆಗಸ್ಟ್ 16 ರ ಶನಿವಾರದಂದು ರಾತ್ರಿ 8 ಗಂಟೆಗೆ ಶ್ರೀ ಪಾಂಡುರಂಗ ಭಜನಾ ಮಂದಿರ ಮುದಂಗಾರು ಕಟ್ಟೆಯಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ. ‘ಸು ಫ್ರಮ್ ಸೊ’ ಚಿತ್ರದ ಭಾವ ಬಂದರು ಖ್ಯಾತಿಯ ಪ್ರಬುದ್ಧ ಕಲಾವಿದ ಪುಷ್ಪರಾಜ್ ಬೊಳ್ಳಾರ್ ,’ತುಳುನಾಡ ರಂಗ ಬೊಳ್ಳಿ’ ರವಿ ರಾಮ ಕುಂಜ ,’ಗಡಿನಾಡ ಅಭಿನಯ ರತ್ನ’ ಅನಿಲ್ ರಾಜ್ ಉಪ್ಪಳ ,’ರಂಗ ಚತುರ’…

Read More

ರೇಣುಕಾಸ್ವಾಮಿ ಹತ್ಯೆ ಕೇಸ್‌ – ಎಲ್ಲಾ ಜೈಲುಗಳಿಗೂ ಸುಪ್ರೀಂ ಎಚ್ಚರಿಕೆ

ನವದೆಹಲಿ, ಆ. 15 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಏಳು ಮಂದಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪರಿಗಣಿಸುವಲ್ಲಿ ಗಂಭೀರ ಹಗರಣವಾಗಿದೆ ಎಂಬ ಕಾರಣದಿಂದ, ಸುಪ್ರೀಂಕೋರ್ಟ್ ಇಂದು ಗಂಭೀರ ತೀರ್ಪು ಪ್ರಕಟಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್ ಮತ್ತು ಇತರರು ಜಾಮೀನಿನ ಹಿನ್ನಲೆಯಲ್ಲಿ ಹೊರಗಿದ್ದರೂ, ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಜಾಮೀನನ್ನು ರದ್ದುಗೊಳಿಸಿ ತೀರ್ಪು ನೀಡಿದೆ. “ಯಾರೂ ಕಾನೂನಿಗಿಂತ ಮೇಲಲ್ಲ. ಆರೋಪಿ ಎಷ್ಟೇ ಪ್ರಸಿದ್ಧ ವ್ಯಕ್ತಿಯಾದರೂ ಕೂಡ ಕಾನೂನಿನ ಮುಂದೆ ಎಲ್ಲರೂ ಸಮಾನರು,” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ….

Read More

ಮೂತ್ರ ವಿಸರ್ಜನೆ ವೇಳೆ ರಸ್ತೆ ಬದಿಯ ಮರದ ರೆಂಬೆ ತಲೆಗೆ ಬಿದ್ದು ಲಾರಿ ಚಾಲಕ ದಾರುಣ ಮೃತ್ಯು

ಪೆರ್ಲ: ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಮರದಡಿಗೆ ತೆರಳಿದ ಚಾಲಕ ಮರದ ರೆಂಬೆ ಮುರಿದು ಬಿದ್ದು ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. ದ. ಕ. ಜಿಲ್ಲೆಯ ಬಂಟ್ವಾಳ ಪೆರಾಜೆ ಬಳಿಯ ಕುಡೇಲು ನಿವಾಸಿ ಕಾಂತಪ್ಪ ಗೌಡ – ಗೀತಮ್ಮ ದಂಪತಿ ಯ ಪುತ್ರ ಕೆ. ಜಗದೀಶ ಗೌಡ (50) ಮೃತ ವ್ಯಕ್ತಿಯಾಗಿದ್ದಾರೆ.ಬುಧವಾರ ಮುಂಜಾನೆ ಆರೂಕಾಲರ ವೇಳೆಗೆ ಪೆರ್ಲ- ಸೀತಾಂಗೋಳಿ ರಸ್ತೆಯ ಬೆದ್ರಂಪಳ್ಳದಲ್ಲಿ ಈ ಘಟನೆ ನಡೆಯಿತು. ಮೂಡಬಿದಿರೆಯಿಂದ ಕಾಸರಗೋಡಿಗೆ ಪಶು ಆಹಾರ ಸಾಗಿಸುತ್ತಿದ್ದ…

Read More
error: Content is protected !!