ಮತ್ತೆ ಕರಾವಳಿಯಾದಂತ್ಯ ಅಬ್ಬರಿಸಲಿದೆ ಮಳೆರಾಯ.

ಬೆಂಗಳೂರು: ಕರ್ನಾಟಕದಾದ್ಯಂತ ಮುಂಗಾರು ಮಳೆ ಚುರುಕುಗೊಳ್ಳಲು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ತೀವ್ರತೆ ಕಾರಣವೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಋತುವಿನ ಆರಂಭದಿಂದಲೂ ಸಮುದ್ರ ಮಟ್ಟದಲ್ಲಿ ನಿರಂತರ ಬದಲಾವಣೆಗಳು ಮುಂದುವರಿದಿವೆ. ಕರಾವಳಿ ಕರ್ನಾಟಕವು ತೀವ್ರ ಮಳೆ ಎಚ್ಚರಿಕೆ ನೀಡಲಾಗಿದೆ. ಈ ಪ್ರದೇಶದಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಇನ್ನು ಆಗಸ್ಟ್ 16ರಂದು ಕರಾವಳಿ ಜಿಲ್ಲೆಗಳು ಬೆಳಗಾವಿ, ಬೀದರ್ ಸೇರಿ ಐದು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದ್ದು, ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ….

Read More

ಮುಡಿಮಾರಿನ ಯುವಕರಿಂದ ರಸ್ತೆ ಶ್ರಮದಾನ

ಪಾವೂರು :ಸ್ವಾತಂತ್ರ್ಯ ದಿವಸ ಮುಡಿಮಾರು ಬಸ್ಟ್ಯಾಂಡಿನಿಂದ ಮುಡಿಮಾರು ಮಲರಾಯ ಕ್ಷೇತ್ರದವರೆಗೆ ರಸ್ತೆಯನ್ನು ಮುಡಿಮಾರಿನ ಯುವಕರು ಶ್ರಮದಾನದ ಮೂಲಕ ದುರಸ್ಥಿಗೊಳಿಸಿದರು. ರಸ್ತೆಯಲ್ಲಿ ವಾಹನಗಳು ಬಿಡಿ ಶಾಲಾ-ಕಾಲೇಜು ಕೆಲಸಕ್ಕೆ ಹೋಗುವ ಮಹಿಳೆಯರು ದಿನ ನಿತ್ಯ ಆ ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೂ ಪರದಾಡುತ್ತಿದ್ದರು.ಇಂಥ ದುಸ್ಥಿತಿಗೆ ತಲುಪಿರುವ ರಸ್ತೆಯನ್ನು ಮುಡಿಮಾರಿನ ಯುವಕರು ರಸ್ತೆಯ ಬದಿಯಲ್ಲಿರುವ ಮರದ ಕೊಂಬೆಗಳನ್ನು ಕಡಿದು ರಸ್ತೆಯಲ್ಲಿರುವ ಹೊಂಡಗಳನ್ನು ಕಲ್ಲುಗಳಿಂದ ಮುಚ್ಚಿ ರಸ್ತೆಯನ್ನು ದುರಸ್ಥಿಗೊಳಿಸಿದರು.

Read More

ಸಾಮರಸ್ಯದಿಂದ ಅಭಿವೃದ್ಧಿ ಸಾಧ್ಯ : ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್.

ಮಂಗಳೂರು: ಸಾಮರಸ್ಯದಿಂದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಮಾಜದ ಜನರಿಗೆ ಮತ್ತು ಚರ್ಚ್‌, ಮಸೀದಿ ಮಂದಿರಗಳ ಮುಖ್ಯಸ್ಥರಿಗೆ ಮನದಟ್ಟು ಮಾಡಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ನಗರದ ನೆಹರೂ ಮೈದಾನದಲ್ಲಿ ನಡೆದ ಪಥಸಂಚಲನದೊಂದಿಗೆ 79ನೇ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಂದೇಶ ಭಾಷಣದಲ್ಲಿ ಅವರು ಕರೆ ನೀಡಿದರು. ಕಲೆ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲೂ ಸಹ ಸಾಮರಸ್ಯ ಸಂದೇಶ ಸಾರುವತ್ತ ಕಲಾವಿದರು ಹೆಚ್ಚಿನ ಗಮನ ಹರಿಸಬೇಕು. ಹಿಂಸೆಗೆ ಅವಕಾಶ ನೀಡದೇ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈ…

Read More

ಸಾಮಾಜಿಕ ಪಿಡುಗುಗಳ ವಿರುದ್ಧ ಜನಾಂದೋಲನ -ಕಾಂಗ್ರೆಸ್ ಘೋಷಣೆ

ಕಾಸರಗೋಡು: ಮಾದಕ ದ್ರವ್ಯ ಮತ್ತಿತರ ಸಾಮಾಜಿಕ ಪಿಡುಗುಗಳು ಜನತೆಯ ಆರೋಗ್ಯದ ಮೇಲೆ ಮಾತ್ರವಲ್ಲ, ಒಟ್ಟು ದೇಶದ ಹಿತಾಸಕ್ತಿಯ ಮೇಲಿನ ದಾಳಿ ಎಂದೇ ಪರಿಗಣಿಸಬೇಕಾಗಿದೆ. ಇದು ನಾಡಿನ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಸಕಲ ವಲಯಗಳನ್ನೂ ವಿಕಲಗೊಳಿಸುವ ಮಹಾಮಾರಿಗಳಾಗಿವೆ. ಇದರ ವಿರುದ್ಧ ಪರಿಣಾಮಕಾರಿ ಜನಾಂದೋಲನ ನಡೆಸಲು ಕಾಂಗ್ರೆಸಿಗರು ಮುಂದಾಗಬೇಕು ಎಂದು ಇಂಟಕ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಹಾಗೂ ವರ್ಕಾಡಿ ಮಂಡಲ ಕಾಂಗ್ರೆಸ್ ಉಸ್ತುವಾರಿ ಶ್ರೀ ಶಾಹುಲ್ ಹಮೀದ್ ಪೆರ್ಲ ಕರೆ ನೀಡಿದ್ದಾರೆ.ಎಐಸಿಸಿ ಹಾಗೂ ಕೆಪಿಸಿಸಿ ಆದೇಶ ಪ್ರಕಾರ…

Read More

ಐಎಂಸಿ ವತಿಯಿಂದ ಪುರಸ್ಕಾರ ಸಮಾರಂಭ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗಡಿಯಾರ ಜೋಗಿಬೆಟ್ಟುವಿನ ಐಎಂಸಿ ಸಂಘಟನೆಯ ನೇತೃತ್ವದಲ್ಲಿ ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಊರಿನ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವು ಶುಕ್ರವಾರ ಗಡಿಯಾರ ಜುಮಾ‌ ಮಸೀದಿ ಆವರಣದಲ್ಲಿ ‌ನಡೆಯಿತು. ಇದೇ ವೇಳೆ ಉತ್ತಮ ಅಂಕಗಳನ್ನು ಪಡೆದ ದುಲ್ಖತ್ಹುಲ್ ಅಫೀಫಾ (ಅಂಕ 617), ಮುಹಮ್ಮದ್ ಶಬೀರ್ ಕೆ (ಅಂಕ 590), ಮುಹಮ್ಮದ್ ರಾಫಿ (ಅಂಕ 566),ಮುಹಮ್ಮದ್ ನಿಹಾಲ್ (ಅಂಕ 560), ಮರಿಯಂ ರಾಯಿದ್ (ಅಂಕ 549) ಇವರನ್ನು ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸಮಾರಂಭದ ಮುಖ್ಯ…

Read More

ಪಾವೂರು ಅಂಗನವಾಡಿಯಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆ.

ಮಂಜೇಶ್ವರ :ಪಾವೂರು ಅಂಗನವಾಡಿಯಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ವರ್ಕಾಡಿ ಪಂಚಾಯತ್ ಸದಸ್ಯೆ ಕಾಮುರುಂನ್ನಿಸ ಮುಸ್ತಾಫಾ ದೋಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ,ಇಬ್ರಾಹಿಂ ಹಾಜಿ ಕೊಂಬಗುರಿ ,ಮುಸ್ತಾಫಾ ಮಚಂಬಾಡಿ ,ಶಾಫಿ ಭಂಡಾಸಾಲೆ, ಜಾಫರ್ ಪಾವೂರು ,ಶಾಫಿ ಪಾವೂರು ಭದ್ರು ಕುಂಡಾಪು ,ಅಬ್ಬೊಕರ್ ಕೊಂಬಗುರಿ, ಅಂಗನವಾಡಿ ಪುಟಾಣಿ ಮಕ್ಕಳು ಮಹಿಳೆಯರು ಊರಿನ ಜನರು ಭಾಗವಹಿಸಿದರು .ಅಂಗನವಾಡಿ ಕಾರ್ಯಕರ್ತೆ ಸೈಲಜಾ ಸ್ವಾಗತಿಸಿ ಸಹಾಯಕ ಕಾರ್ಯಕರ್ತೆ ಸುಚಿತ್ರ ವಂದಿಸಿದರು

Read More

ಪಿವಿಎಸ್ ವೃತ್ತ ಬಳಿಯ ಆಟೋರಿಕ್ಷಾ ನಿಲ್ದಾಣಕ್ಕೆ ನೂತನವಾಗಿ ನಿರ್ಮಿಸಲಾದ ಮೇಲ್ಚಾವಣಿಯ ಉದ್ಘಾಟನೆ ಇಂದು.

ಪಿವಿಎಸ್ ವೃತ್ತ ಬಳಿಯ ಆಟೋರಿಕ್ಷಾ ನಿಲ್ದಾಣಕ್ಕೆ ನೂತನವಾಗಿ ನಿರ್ಮಿಸಲಾದ ಮೇಲ್ಚಾವಣಿಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು. ಈ ವೇಳೆ ಮಾತನಾಡಿದ ಶಾಸಕರು, ನಿಮ್ಮೆಲ್ಲರ ಅನುಕೂಲಕ್ಕಾಗಿ ಶಾಸಕರ ನಿಧಿಯಿಂದ ಅನುದಾನವನ್ನು ಹೊಂದಿಸಿಕೊಂಡು ಈ ಆಟೋರಿಕ್ಷಾ ನಿಲ್ದಾಣದ ಮೇಲ್ಚಾವಣಿಯನ್ನು ನಿರ್ಮಿಸಲಾಗಿದ್ದು, 79ನೇ ಸ್ವಾತಂತ್ರ್ಯೋತ್ಸವದ ಶುಭ ದಿನದಂದೇ ಉದ್ಘಾಟನೆಗೊಳ್ಳುತ್ತಿದೆ. ಇಲ್ಲಿನ ಚಾಲಕ ಬಂಧುಗಳಿಗೆ ಇದರ ಉಪಯೋಗವಾದರೆ ಅದಕ್ಕಿಂತ ಸಂತೋಷ ಬೇರೇನಿಲ್ಲ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು. ನಿಕಟಪೂರ್ವ ಪಾಲಿಕೆ ಸದಸ್ಯೆ ಪೂರ್ಣಿಮಾ, ರಮೇಶ್ ಹೆಗ್ಡೆ, ಮೋಹನ್ ಪೂಜಾರಿ, ಭಾಗ್ಯ…

Read More

ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ.

ಬಾಯಾರು :ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ವಿಜೃಂಭಣೆಯಿಂದ ಜರಗಿತು.ಶ್ರೀ ಸತ್ಯನಾರಾಯಣ ಭಟ್, ಸೇರಾಜೆ, ಚೀಫ್ ಮ್ಯಾನೇಜರ್, ರಿಫೈನರಿ ಆಫೀಸರ್, ಎಂ.ಆರ್.ಪಿ.ಎಲ್., ಮಂಗಳೂರು, ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ, ಮಾತನಾಡುತ್ತಾ ,”ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ಸ್ಮರಿಸಿ, ಚಾರಿತ್ರ್ಯದಿಂದಲೇ ಭಾರತ ವಿಶ್ವಗುರು “ಎಂಬುದಾಗಿ ಮಕ್ಕಳಿಗೆ ಹಿತವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪೆಲತ್ತಡ್ಕ ರಾಮಕೃಷ್ಣ ಭಟ್, ಉಪಾಧ್ಯಕ್ಷರು, ಪ್ರಶಾಂತಿ ಸೇವಾ ಟ್ರಸ್ಟ್ ಇವರು ವಹಿಸಿದ್ದರು.ಶ್ರೀ ಮಾಣಿಪ್ಪಾಡಿ ನಾರಾಯಣ ಭಟ್,…

Read More

ನೀರ್ಚಾಲ್ ಕಾರ್ಯ ಕ್ಷೇತ್ರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಮಜೀರ್ಪಳ್ಳ ಕಟ್ಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀರ್ಚಾಲ್ ಕಾರ್ಯ ಕ್ಷೇತ್ರದ ವತಿಯಿಂದ ನೀರ್ಚಾಲ್ ಸಮೀಪದ ಶ್ರೀ ಅಯ್ಯಪ್ಪ ಭಜನಾ ಮಂದಿರ ಮಜೀರ್ಪಳ್ಳ ಕಟ್ಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಿನ್ನೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧಕ್ಷರಾದ ಶ್ರೀ ನವೀನಾಕ್ಷ ಮಜೀರ್ಪಳ್ಳ ಕಟ್ಟೆ, ಪದಾಧಿಕಾರಿಗಳು , ನೀರ್ಚಾಲ್ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ನಳಿನಾಕ್ಷಿ , ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Read More

ಚಕ್ರವರ್ತಿ ಹೊಸಂಗಡಿ ಕ್ಲಬ್ಬಿನಲ್ಲಿ 79 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಜೇಶ್ವರ: 79 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ಚಕ್ರವರ್ತಿ ಹೊಸಂಗಡಿ ಕ್ಲಬ್ಬಿನಲ್ಲಿ ನಡೆಯಿತು.ಧ್ವಜಾರೋಹಣ ಯಾಕೋಬ್ ಹೊಸಂಗಡಿಯವರು ನೆರವೇರಿಸಿದರು.ನಾಲ್ಕು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್ಟುಗಳನ್ನು ನೀಡಲಾಯಿತು.ನ್ಯಾಯವಾದಿ ನವೀನ್ ರಾಜ್ ಕೆಜೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಶ್ರೀಮತಿ ಪ್ರಿಯಾರವರು ಸುಭಾಷಂಶಣೆಗೈದರು. ದಿನಕರ್ ಹೊಸಂಗಡಿ ನಿರೂಪಿಸಿದರು.

Read More
error: Content is protected !!