ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ: ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ
ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ, ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ. ಮಂಜೇಶ್ವರ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೀಂಜ ಪಂಚಾಯತ್‌ನ ಮೀಯಪದವು ವಿದ್ಯಾವರ್ಧಕ ಹೈಸ್ಕೂಲ್‌ನ ಹಿಂಭಾಗದಲ್ಲಿರುವ ಕೃಷಿಕ ಬಾಬು ಎಂಬವರ ಮನೆ ಬಳಿಯಲ್ಲಿನ ಕೆಳಭಾಗದಲ್ಲಿ ಗುಡ್ಡೆ ಕುಸಿದು ಯಾವುದೇ ಕ್ಷಣದಲ್ಲಿ ಮನೆ ಧಾರಾಶಾಹಿಗೊಳ್ಳು ಭೀತಿ ಉಂಟಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಇದರಿಂದ ಮನೆಯ ಸುತ್ತು ಕಲ್ಲಿನ ಆವರಣಗೋಡೆ ಸಂಪೂರ್ಣ ಕುಸಿದು ಹೋಗಿ ಮನೆ ಅಡಿಪಾಯ ಬಳಿ ತನಕ ತಲುಪಿದ್ದು,…