ಕಣ್ಣೀರಿನ ವಿದಾಯ; ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನೈಮರ್ ಗುಡ್‌ಬೈ

“ನಾನು ಪ್ರಯತ್ನಿಸಿದೆ…ತುಂಬಾ ಪ್ರಯತ್ನಿಸಿದೆ…ಮೊದಲ ಬಾರಿಗೆ ಹಳದಿ ಜೆರ್ಸಿಯಲ್ಲಿ ಚೆಂಡನ್ನು ಸ್ಪರ್ಶಿಸಿದ್ದು ಇದೇ ಮೈದಾನದಲ್ಲಿ…ಇದೇ ಮೈದಾನದಲ್ಲಿ ನನ್ನ ಪಯಣಕ್ಕೆ ತೆರೆ ಬೀಳುತ್ತಿದೆ…”ಅವನು ಸೋತು ಹಿಂದಿರುಗಿದ್ದು ನಾರ್ವೇ ಎದುರಲ್ಲ. ವಿಶ್ವ ಫುಟ್‌ಬಾಲ್‌ನಲ್ಲಿ ಒಬ್ಬ ಮೆಸ್ಸಿಯಾಗಿಯೂ ಮತ್ತೊಬ್ಬ ರಾಜನಾಗಿಯೂ ಆಳುತ್ತಿದ್ದ ಕಾಲದಲ್ಲಿ, ಅವರ ಜೊತೆ ಸುಲ್ತಾನನಂತೆ ಫುಟ್‌ಬಾಲ್ ಲೋಕವೇ ಅವನನ್ನೂ ಕೊಂಡಾಡಿತ್ತು.ಅದು ಕಾರಣವಿಲ್ಲದೇ ಅಲ್ಲ. ಮೈದಾನದ ಒಂದು ತುದಿಯಿಂದ ಚೆಂಡನ್ನು ಹರಿಸುತ್ತಾ ಗೋಲ್‌ಪೋಸ್ಟ್‌ವರೆಗೆ ಮಾಯೆಯಂತೆ ಮುನ್ನಡೆಯುತ್ತಿದ್ದ ಆಟಗಾರ ಅವನು. ಕೇವಲ ಗೋಲುಗಳಿಗಾಗಿ ಅಲ್ಲ, ಚೆಂಡಿನೊಂದಿಗೆ ಮಾತನಾಡುವಂತೆ ಡ್ರಿಬಲ್ ಮಾಡಿ, ನೃತ್ಯವಾಡುವಂತೆ ಆಟವಾಡಿ…

Read More

ಐತಿಹಾಸಿಕ ಸಾಧನೆ; ಫುಟ್‌ಬಾಲ್ ವಿಶ್ವಕಪ್‌ನಲ್ಲಿ 20 ಗೋಲುಗಳಿಸಿದ ಮೊದಲ ಆಟಗಾರ ಮೆಸ್ಸಿ; ಅರ್ಜೆಂಟೀನಾ ಪ್ರೀಕ್ವಾರ್ಟರ್‌ಗೆ

ಫುಟ್‌ಬಾಲ್ ವಿಶ್ವಕಪ್ ಇತಿಹಾಸದಲ್ಲಿ 20 ಗೋಲುಗಳನ್ನು ದಾಖಲಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆಯನ್ನು ಲಿಯೊನೆಲ್ ಮೆಸ್ಸಿ ಮಾಡಿದ್ದಾರೆ. ಈ ವಿಶ್ವಕಪ್‌ನಲ್ಲಿ ತಮ್ಮ ಏಳನೇ ಗೋಲನ್ನು ಕೇಪ್ ವರ್ಡೆ ವಿರುದ್ಧದ ಪಂದ್ಯದಲ್ಲಿ ಗಳಿಸುವ ಮೂಲಕ ಅವರು ಈ ಮೈಲಿಗಲ್ಲು ತಲುಪಿದರು. ಪುರುಷ ಮತ್ತು ಮಹಿಳಾ ಫುಟ್‌ಬಾಲ್ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲುಗಳನ್ನು ದಾಖಲಿಸಿದ ಆಟಗಾರ ಎಂಬ ತಮ್ಮದೇ ದಾಖಲೆಯನ್ನು ಮೆಸ್ಸಿ ಮತ್ತಷ್ಟು ವಿಸ್ತರಿಸಿದ್ದಾರೆ. ಇದರೊಂದಿಗೆ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಅವರು ಕಿಲಿಯನ್ ಎಂಬಾಪ್ಪೆ ಅವರನ್ನು ಹಿಂದಿಕ್ಕಿದ್ದಾರೆ….

Read More

ಶ್ರೀಶಾಂತ್ ಮೇಲಿನ ನಿಷೇಧ ಹಿಂಪಡೆದ ಕೇರಳ ಕ್ರಿಕೆಟ್ ಸಂಸ್ಥೆ; ಕ್ಷಮೆಯಾಚನೆಗೆ ಮನ್ನಣೆ

ಮಾಜಿ ಭಾರತೀಯ ಕ್ರಿಕೆಟಿಗ ಶ್ರೀಶಾಂತ್ ಅವರ ಮೇಲಿದ್ದ ಮೂರು ವರ್ಷದ ನಿಷೇಧವನ್ನು ಕೇರಳ ಕ್ರಿಕೆಟ್ ಅಸೋಸಿಯೇಷನ್ (KCA) ಹಿಂಪಡೆದಿದೆ. ಶ್ರೀಶಾಂತ್ ಅವರು ಕ್ಷಮೆಯಾಚಿಸಿ ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ನಡೆದ ಕೆಸಿಎ ವಿಶೇಷ ಸಾಮಾನ್ಯ ಸಭೆಯಲ್ಲಿ ನಿಷೇಧವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಏಕಮತದಿಂದ ಅಂಗೀಕರಿಸಲಾಯಿತು. ದೃಶ್ಯ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕೆಸಿಎಗೆ ಅಪಕೀರ್ತಿ ಉಂಟುಮಾಡುವ ರೀತಿಯ ಹೇಳಿಕೆಗಳನ್ನು ನೀಡಿದ್ದ ಆರೋಪದ ಮೇಲೆ ಶ್ರೀಶಾಂತ್ ಅವರಿಗೆ ಮೂರು ವರ್ಷಗಳ ನಿಷೇಧ ವಿಧಿಸಲಾಗಿತ್ತು….

Read More

ಫಿಫಾ ವಿಶ್ವಕಪ್ 2026ಕ್ಕೆ ಮೆಕ್ಸಿಕೊ ಭರ್ಜರಿ ಆರಂಭ: ದಕ್ಷಿಣ ಆಫ್ರಿಕಾ ವಿರುದ್ಧ 2-0 ಜಯ, ಪಂದ್ಯದಲ್ಲಿ ಮೂರು ಕೆಂಪು ಕಾರ್ಡ್

ಮೆಕ್ಸಿಕೊ ಸಿಟಿ, 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೊ ತಂಡವು ದಕ್ಷಿಣ ಆಫ್ರಿಕಾವನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸಿ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಜೂನ್ 11ರಂದು ಐತಿಹಾಸಿಕ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯವು ರೋಚಕ ಕ್ಷಣಗಳ ಜೊತೆಗೆ ಮೂರು ಕೆಂಪು ಕಾರ್ಡ್‌ಗಳ ಕಾರಣಕ್ಕೂ ವಿಶೇಷ ಗಮನ ಸೆಳೆಯಿತು. ಪಂದ್ಯ ಆರಂಭವಾದ ಕೇವಲ 9ನೇ ನಿಮಿಷದಲ್ಲೇ ಜೂಲಿಯನ್ ಕ್ವಿನೋನ್ಸ್ ಗೋಲು ದಾಖಲಿಸುವ ಮೂಲಕ ಮೆಕ್ಸಿಕೊಗೆ ಮುನ್ನಡೆ ತಂದುಕೊಟ್ಟರು. ಆರಂಭದಿಂದಲೇ…

Read More

ಎಸ್ ಪಿ ಬಿ ತೀಯ ಚಾಂಪಿಯನ್ಶಿಪ್ ಕ್ರಿಕೆಟ್ ಕ್ರಿಡಾ ಕೂಟ ಸಂಪನ್ನ

ಎಸ್ ಪಿ ಬಿ ತೀಯ ಇದರ ಆಶ್ರಯದಲ್ಲಿ ಲೀಗ್ ಮಾದರಿಯ 9s ಕ್ರಿಕೆಟ್ ಕ್ರೀಡಾ ಕೂಟವನ್ನು ಕಳೆದ ಭಾನುವಾರ ಸಂತಡ್ಕ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.ಲಿಗ್ ಮಾದರಿಯ ಈ ಕ್ರೀಡಾ ಕೂಟದಲ್ಲಿ ತಿಯ ಸಮುದಾಯಕ್ಕೆ ಒಳಪಟ್ಟ ಪ್ರಗತಿ ಮುಟ್ಟಂ,ತಾಂಡವ ಲಾಲ್ಬಾಗ್,ಟೀಮ್ ಎಸ್ ಪಿ ಬಿ,ಜನನಿ ವೀರ ನಗರ ಅಡ್ಕ ,ಬ್ರದರ್ಸ್ ಶಾಸ್ತ ,ತಿಯ ಸ್ಟ್ರೈಕರ್ಸ್ ,ಕೆ ಎಫ್ ಸಿ ಕನಿಲ ,ಫ್ರೆಂಡ್ಸ್ ಕನಿಲ ಈ ರೀತಿ 8 ತಂಡಗಳು ಭಾಗವಹಿಸಿದ್ದು. ಫೈನಲ್ ಸ್ಪರ್ಧೆಯಲ್ಲಿ ಕೆ ಎಫ್ ಸಿ ಕನಿಲ ಹಾಗು…

Read More

ರಾಷ್ಟ್ರಮಟ್ಟದಲ್ಲಿ ಮಿಂಚಿದ ವಿಟ್ಲದ ಈಜುಗಾರ್ತಿ ಶ್ರೀಲಕ್ಷ್ಮಿ

ವಿಟ್ಲ: ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುವ ವಿಟ್ಲದ ಪ್ರತಿಭಾವಂತ ಈಜುಗಾರ್ತಿ ಶ್ರೀಲಕ್ಷ್ಮಿ ಅವರು ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ. ವಿಟ್ಲದ ಹಿತ್ಲು ಕೋಟಿಕೆರೆ ನಿವಾಸಿಗಳಾದ ದಿವಂಗತ ಗೋಪಿಕಾ ಸಪಲ್ಯ ಮತ್ತು ಲೀಲಾವತಿ ದಂಪತಿಗಳ ತೃತೀಯ ಪುತ್ರಿಯಾದ ಶ್ರೀಲಕ್ಷ್ಮಿ ಬಾಲ್ಯದಲ್ಲಿಯೇ ಈಜು ಕ್ರೀಡೆಗೆ ಆಸಕ್ತಿ ಬೆಳೆಸಿಕೊಂಡರು. ಈಜಿನಲ್ಲಿ ಸಾಧನೆಗೈಯುವ ದಿಟ್ಟ ಸಂಕಲ್ಪ ಹೊಂದಿದ್ದ ಅವರಿಗೆ ತಂದೆಯೇ ಮೊದಲ ಗುರು ಆಗಿದ್ದು, ಬಳಿಕ ಉಮೇಶ್ ಗಾಣಿಗ ವಿಟ್ಲ ಹಾಗೂ ತುಳಸಿದಾಸ್ ಶೆಣೈ ಅವರಿಂದ ತರಬೇತಿ ಪಡೆದು ಕ್ರೀಡೆಯಲ್ಲಿ…

Read More

ಟಿ20 ವಿಶ್ವಕಪ್ 2026: ನ್ಯೂಜಿಲೆಂಡ್ ವಿರುದ್ಧ ಭಾರತ ಐತಿಹಾಸಿಕ ಜಯ, ಮೂರನೇ ಬಾರಿ ಚಾಂಪಿಯನ್

ಅಹಮದಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಇಂಡಿಯಾ ನ್ಯಾಷನಲ್ ಕ್ರಿಕೆಟ್ ತಂಡವು ನವ Zealand national cricket team ವಿರುದ್ಧ ಐತಿಹಾಸಿಕ ಸಾಧನೆ ಮಾಡಿದ್ದು ಮೂರನೇ ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ಗಳ ಭಾರೀ ಮೊತ್ತ ಪೇರಿಸಿತು. ಇದು ಟಿ20…

Read More

ತಣ್ಣೀರುಬಾವಿ ಬೀಚ್‌ನಲ್ಲಿ ಅಲ್ಟಿಮೇಟ್ ಫ್ರಿಸ್ಬಿ ನ್ಯಾಷನಲ್ಸ್: ಪಶ್ಚಿಮ ಕರಾವಳಿಯಲ್ಲಿ ಇದೇ ಮೊದಲ ಬಾರಿ

ಮಂಗಳೂರು: ಪಶ್ಚಿಮ ಕರಾವಳಿಯ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿ ಅಲ್ಟಿಮೇಟ್ ಫ್ರಿಸ್ಬಿ ಬೀಚ್ ನ್ಯಾಷನಲ್ಸ್ ರಾಷ್ಟ್ರೀಯ ಟೂರ್ನಮೆಂಟ್ ಮಂಗಳೂರಿನ ತಣ್ಣೀರುಬಾವಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಮಾರ್ಚ್ 6 ರಿಂದ 8ರವರೆಗೆ ನಡೆಯಿತು. ಈ ಮೂಲಕ ತಣ್ಣೀರುಬಾವಿ ಬೀಚ್ ಈ ವಿಶಿಷ್ಟ ಕ್ರೀಡಾಕೂಟಕ್ಕೆ ಸಾಕ್ಷಿಯಾಯಿತು. ಅಮೆರಿಕ ಮೂಲದ ಈ ಕ್ರೀಡೆ ಭಾರತದಲ್ಲಿ ಇನ್ನೂ ವ್ಯಾಪಕವಾಗಿ ಜನಪ್ರಿಯವಾಗದಿದ್ದರೂ, ಕಳೆದ ಕೆಲವು ವರ್ಷಗಳಿಂದ ನಿಧಾನವಾಗಿ ಬೆಳವಣಿಗೆ ಕಾಣುತ್ತಿದೆ. ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿರುವ ಪಶ್ಚಿಮ ಕರಾವಳಿಯಲ್ಲಿ ಈ ರೀತಿಯ ರಾಷ್ಟ್ರೀಯ ಮಟ್ಟದ ಟೂರ್ನಮೆಂಟ್ ಇದೇ…

Read More

WCPL 2026 ಕ್ರಿಕೆಟ್ ಹಬ್ಬ: ‘ ನಮ್ಮ ಉಡುಪಿ’ ತಂಡಕ್ಕೆ ಚಾಂಪಿಯನ್ ಪಟ್ಟ

ಮಹಿಳಾ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ‘ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್’ (WCPL) 2026 ಟೂರ್ನಿಯು ಬೆಂಗಳೂರಿನ ಬನಶಂಕರಿಯ ಪಿಇಎಸ್ ಯೂನಿವರ್ಸಿಟಿ ಕ್ರಿಕೆಟ್ ಮೈದಾನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಡಾ. ಸಂದೀಪ್ ಪಿ. ಶೆಟ್ಟಿ ಅವರ ನಾಯಕತ್ವದಲ್ಲಿ ಆಯೋಜಿಸಲಾಗಿದ್ದ ಈ ಟೂರ್ನಿಯಲ್ಲಿ ‘ನಮ್ಮ ಉಡುಪಿ’ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತದಲ್ಲೇ ಮೊದಲ ಬಾರಿಗೆ 125 ಗ್ರಾಂ ಹಾರ್ಡ್ ಟೆನ್ನಿಸ್ ಬಾಲ್ ಬಳಸಿ ವೃತ್ತಿಪರ ಮಹಿಳಾ ಟೂರ್ನಿಯನ್ನು ಆಯೋಜಿಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಬಂದ 80ಕ್ಕೂ ಹೆಚ್ಚು…

Read More

ಮಂಗಳೂರಿನ ಅಸ್ಮಿತ ಸ್ವಿಮ್ಮಿಂಗ್ ಲೀಗ್: ಉದ್ಘಾಟಿಸಿದ ದ್ರೋಣಾಚಾರ್ಯ ಪುರಸ್ಕೃತ ತರಬೇತುದಾರ ಶ್ರೀ ಪ್ರದೀಪ್ ಕುಮಾರ್

ಮಹಿಳಾ ಕ್ರೀಡಾಪಟ್ಟುಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಹಾಗೂ ಮಹಿಳೆಯರಿಂದ ಕ್ರೀಡಾ ರಂಗಕ್ಕೆ ಹೆಚ್ಚಿನ ಕೊಡುಗೆ ಸಿಗುವಂತಾಗಬೇಕು ಎಂದು ದ್ರೋಣಾಚಾರ್ಯ ಪುರಸ್ಕೃತ, ಈಜು ಕ್ರೀಡೆಯಲ್ಲಿ ಹಲವಾರು ಒಲಂಪಿಯನ್ ಈಜು ಪಟ್ಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ತರಬೇತುದಾರ ಶ್ರೀ ಪ್ರದೀಪ್ ಕುಮಾರ್ ಹೇಳಿದರು. ಅವರು ಮಾರ್ಚ್ 01ರಂದು ಮಂಗಳೂರಿನ ಎಮ್ಮೆಕೆರೆಯ ಸ್ಮಾರ್ಟ್ ಸಿಟಿ ಈಜುಕೊಳದಲ್ಲಿ ಜರುಗಿದ ಅಸ್ಮಿತ 2026 ಈಜು ಸ್ಪರ್ಧೆಯ ಲೀಗ್ ನ್ನು ಉದ್ಘಾಟಿಸಿದರು. ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಖೇಲೋ ಇಂಡಿಯಾ ಜಂಟಿಯಾಗಿ ಮಹಿಳೆಯರಿಗಾಗಿ ಆಯೋಜಿಸಿರುವ…

Read More
error: Content is protected !!