ಎಸ್ ಪಿ ಬಿ ತೀಯ ಇದರ ಆಶ್ರಯದಲ್ಲಿ ಲೀಗ್ ಮಾದರಿಯ 9s ಕ್ರಿಕೆಟ್ ಕ್ರೀಡಾ ಕೂಟವನ್ನು ಕಳೆದ ಭಾನುವಾರ ಸಂತಡ್ಕ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.ಲಿಗ್ ಮಾದರಿಯ ಈ ಕ್ರೀಡಾ ಕೂಟದಲ್ಲಿ ತಿಯ ಸಮುದಾಯಕ್ಕೆ ಒಳಪಟ್ಟ ಪ್ರಗತಿ ಮುಟ್ಟಂ,ತಾಂಡವ ಲಾಲ್ಬಾಗ್,ಟೀಮ್ ಎಸ್ ಪಿ ಬಿ,ಜನನಿ ವೀರ ನಗರ ಅಡ್ಕ ,ಬ್ರದರ್ಸ್ ಶಾಸ್ತ ,ತಿಯ ಸ್ಟ್ರೈಕರ್ಸ್ ,ಕೆ ಎಫ್ ಸಿ ಕನಿಲ ,ಫ್ರೆಂಡ್ಸ್ ಕನಿಲ ಈ ರೀತಿ 8 ತಂಡಗಳು ಭಾಗವಹಿಸಿದ್ದು. ಫೈನಲ್ ಸ್ಪರ್ಧೆಯಲ್ಲಿ ಕೆ ಎಫ್ ಸಿ ಕನಿಲ ಹಾಗು ಫ್ರೆಂಡ್ಸ್ ಕನಿಲ ಮುಖಾಮುಖಿಯಾಗಿದ್ದು ರೋಚಕ ಸ್ಪರ್ಧೆಯ ಬಳಿಕ ಕೆ ಎಫ್ ಸಿ ಕನಿಲ ಪ್ರಥಮ ,ಫ್ರೆಂಡ್ಸ್ ಕನಿಲ ದ್ವಿತೀಯ ,ಟೀಮ್ ಎಸ್ ಪಿ ಬಿ ತೃತೀಯ ಸ್ಥಾನವನ್ನು ಪಡೆಯಿತು.
ಬೆಳಗ್ಗೆ 7 ಗಂಟೆಗೆ ಅರಂಭವಾದ ಕ್ರೀಡಾಕೂಟವು ಸಾಯಂಕಾಲ ಅಥಿತಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನದೊಂದಿಗೆ ಸಂಪನ್ನಗೊಂಡಿತು. ತೀಯ ಸಮಾಜದ ಯುವಕರ ಸಂಘಟನೆಯ ಸಹಯೋಗದಲ್ಲಿ ಕ್ರೀಡಾ ಕೂಟವನ್ನು ಆಯೋಜಿಸಲಾಗಿದ್ದು, ಸಮಾಜದ ಏಕತೆ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ತೀಯ ಸಮಾಜವು ಸಮಾಜದ ಅಭಿವೃದ್ಧಿ, ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದು, ಯುವಕರನ್ನು ಒಗ್ಗೂಡಿಸುವ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ.ಕ್ರೀಡೆಗಳ ಮೂಲಕ ಯುವಕರಲ್ಲಿ ತಂಡಭಾವನೆ, ಶಿಸ್ತು ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಈ ರೀತಿಯ ಟೂರ್ನಿಗಳನ್ನು ಆಯೋಜಿಸಲಾಗುತ್ತಿದೆ ಎಂದು ತೀಯ ಸಮಾಜದ ಮುಖಂಡರು ಹಾಗೂ ಆಯೋಜಕರು ತಿಳಿಸಿದ್ದಾರೆ.