ಅಮೆರಿಕದೊಂದಿಗೆ ಪೂರ್ಣಪ್ರಮಾಣದ ಯುದ್ಧ; ಪರಿಣಾಮಗಳನ್ನು ಎದುರಿಸಲು ಸಿದ್ಧ: ಇರಾನ್ ಅಧ್ಯಕ್ಷ

ಟೆಹರಾನ್ : ಅಮೆರಿಕದೊಂದಿಗೆ ಇರಾನ್ ಪೂರ್ಣಪ್ರಮಾಣದ ಯುದ್ಧದಲ್ಲಿ ತೊಡಗಿಕೊಂಡಿದ್ದು, ಅದರ ಪರಿಣಾಮಗಳನ್ನು ದೇಶ ಎದುರಿಸಲು ಸಿದ್ಧವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝಶ್ಚಿಯಾನ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, “ನಾವು ವಾಸ್ತವಿಕವಾಗಿರಬೇಕು. ಈ ಪ್ರತಿರೋಧದ ಸಹಜ ಪರಿಣಾಮಗಳನ್ನು ಸ್ವೀಕರಿಸಲೇಬೇಕು. ಪ್ರಸ್ತುತ ಸಂಘರ್ಷವು ಕೇವಲ ಕ್ಷಿಪಣಿ ದಾಳಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇರಾನ್ ತನ್ನ ರಾಷ್ಟ್ರೀಯ ಹಕ್ಕುಗಳು ಹಾಗೂ ಹಿತಾಸಕ್ತಿಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ಕೇವಲ ಮಿಲಿಟರಿ ಕ್ರಮಗಳ ಮೂಲಕ ಇರಾನ್ ಜನರನ್ನು ಶರಣಾಗುವಂತೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ವಿರೋಧಿಗಳು ಈಗಾಗಲೇ ಅರಿತುಕೊಂಡಿದ್ದಾರೆ. ದೇಶದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನಾವು ದೃಢ ನಿಲುವು ಹೊಂದಿದ್ದೇವೆ” ಎಂದು ಅವರು ಹೇಳಿದರು.

ದೇಶದಲ್ಲಿ ಈಗ ಎಂದಿಗಿಂತಲೂ ಹೆಚ್ಚು ಏಕತೆ, ಒಗ್ಗಟ್ಟು ಮತ್ತು ಸಾಮೂಹಿಕ ವಿವೇಕದ ಅಗತ್ಯವಿದೆ ಎಂದು ಕರೆ ನೀಡಿದ ಪೆಝಶ್ಚಿಯಾನ್, “ತಿಳುವಳಿಕಾ ಪತ್ರದಲ್ಲಿ ನಾವು ಯಾವುದೇ ರಿಯಾಯಿತಿ ನೀಡಿಲ್ಲ. ಒಪ್ಪಂದದ ಯಾವುದೇ ನಿಬಂಧನೆಯಡಿ ಇರಾನ್ ತನ್ನ ಹಕ್ಕುಗಳು, ಹಿತಾಸಕ್ತಿಗಳು ಅಥವಾ ತತ್ವಗಳಿಂದ ಹಿಂದೆ ಸರಿದಿಲ್ಲ” ಎಂದು ಪುನರುಚ್ಚರಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!