ತಿರುವನಂತಪುರ : ಯೋಗ ಜಾತಿ ಮತ ಪಂಗಡಗಳನ್ನು ಮೀರಿ ಸರ್ವರ ಬದುಕಿಗೂ ಮಾನವೀಯ ಮೌಲ್ಯಗಳನ್ನು ತಿಳಿಸುವ ಜೊತೆಗೆ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ಸಂಘರ್ಷ ಭರಿತ ಜಗತ್ತು ಮತ್ತು ಬದುಕಿಗೆ ಯೋಗ ಜೀವನ ಶಾಂತಿಯನ್ನು ನೀಡಿದೆ. ಯೋಗದಿಂದ ಮಾನವೀಯತೆ ಮತ್ತು ಶಾಂತಿಯ ಆರಂಭವಾಗಿದೆ, ಯೋಗವು ಇಂದು ಜಗತ್ತನ್ನೇ ಒಂದುಗೂಡಿಸಿದೆ.
ಕಳೆದ 11 ವರ್ಷಗಳಿಂದ ಯೋಗ ಪ್ರಪಂಚವನ್ನು ಬಿಸೇದಿದೆ ಎಂದ ಅವರು, ಕೋಟ್ಯಂತರ ಜನರ ನಿತ್ಯ ಜೀವನದ ಒಂದು ಭಾಗವಾಗಿ ಯೋಗ ಪರಿವರ್ತಿತವಾಗಿದೆ ಎಂದು ಹೇಳಿದರು.
ಈ ಬಾರಿಯ ಯೋಗ ದಿನಾಚರಣೆ ಆರೋಗ್ಯ ಮತ್ತು ಪ್ರೀತಿಯ ಆಶಯವನ್ನು ಹೊಂದಿದ್ದು ಇದು ನಮ್ಮನ್ನು ಇನ್ನಷ್ಟು ಜಾಗೃತಗೊಳಿಸುತ್ತದೆ ನಮ್ಮ ಆರೋಗ್ಯದಲ್ಲಿ ಪ್ರಕೃತಿಯ ಕೊಡುಗೆ ಅಪಾರವಾಗಿದೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಪ್ರಕೃತಿ ಸಂರಕ್ಷಣೆಯ ಬಗ್ಗೆಯೂ ನಮ್ಮನ್ನು ಜಾಗೃತಗೊಳಿಸುತ್ತದೆ ಎಂದು ಪ್ರಧಾನ ಮಂತ್ರಿ ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.