ಆಘಾತಕಾರಿ ಅಂಕಿಅಂಶ! ಬಿಡುಗಡೆಯ ಮುನ್ನವೇ ‘ಜನನಾಯಕನ್’ ಚಿತ್ರವನ್ನು 1.2 ಕೋಟಿ ಮಂದಿ ವೀಕ್ಷಣೆ; ವಿಜಯ್‌ಗೆ ಭಾರಿ ಹೊಡೆತ

ಸೆನ್ಸಾರ್ ಮಂಡಳಿಯೊಂದಿಗೆ ನಡೆದ ಕಾನೂನು ವಿವಾದದಿಂದ ನಟ ವಿಜಯ್ ಅಭಿನಯದ ‘ಜನನಾಯಕನ್’ ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿಲ್ಲ. ಆದರೆ ಬಿಡುಗಡೆಯಾಗುವ ಮುನ್ನವೇ ಚಿತ್ರದ ಪೈರಸಿ ಪ್ರತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ಬಿಡುಗಡೆಯಾಗದ ಈ ಚಿತ್ರವನ್ನು ಈಗಾಗಲೇ 1.2 ಕೋಟಿ ಮಂದಿ ಆನ್‌ಲೈನ್‌ನಲ್ಲಿ ವೀಕ್ಷಿಸಿದ್ದಾರೆ ಎಂದು ಪೊಲೀಸರು ಮದ್ರಾಸ್ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಪೈರಸಿ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ವೇಳೆ ಈ ಮಾಹಿತಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇದೇ ವೇಳೆ, ಚಿತ್ರದ ನಿರ್ಮಾಪಕರ ಆಪ್ತ ಮೂಲಗಳ ಪ್ರಕಾರ, ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ (ಸೆನ್ಸಾರ್ ಸರ್ಟಿಫಿಕೆಟ್) ಶೀಘ್ರದಲ್ಲೇ ದೊರೆಯುವ ಸಾಧ್ಯತೆ ಇದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!