ಗಜರಾಯನಿಂದ ರಾಜಧಾನಿ ಎಕ್ಸೆಸ್ ಹಳಿ ತಪ್ಪಿತ್ತೇ …. !

ಅಸ್ಸಾಂ:ನವದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸೆಸ್ ಶನಿವಾರ ಮುಂಜಾನೆ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ನಂತರ ಹಳಿ ತಪ್ಪಿದೆ.7 ಆನೆಗಳು ಸಾವನ್ನಪಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಈಶಾನ್ಯ ಗಡಿನಾಡು ರೈಲ್ವೆಯ ಲುಮ್ಮಿಂಗ್ ವಿಭಾಗದ ಜಮುನಾಮುಖ್-ಕಂಪುರ್ ವಿಭಾಗದಲ್ಲಿ ಡಿಸೆಂಬರ್ 20 ರಂದು ಮುಂಜಾನೆ 2.17 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರೈಲು ಸಂಖ್ಯೆ 20507 ಡಿಎನ್ ಸೈರಾಂಗ್-ನವದೆಹಲಿ ರಾಜಧಾನಿ ಎಕ್ಸೆಸ್ ರೈಲು ಹಳಿಯ ಮೇಲೆ ಆನೆಗಳಿಗೆ ಡಿಕ್ಕಿ ಹೊಡೆದಿದ್ದು, ಲೋಕೋಮೋಟಿವ್ ಮತ್ತು ಐದು ಬೋಗಿಗಳು ಹಳಿ ತಪ್ಪಿವೆ.ಘಟನೆ ನಡೆದ ಸ್ಥಳವು ಗುವಾಹಟಿಯಿಂದ ಸುಮಾರು 126 ಕಿ.ಮೀ ದೂರದಲ್ಲಿದೆ. ಈ ಪ್ರದೇಶವನ್ನು ಗೊತ್ತುಪಡಿಸಿದ ಆನೆ ಕಾರಿಡಾರ್ ಎಂದು ಗುರುತಿಸಲಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

SHARE
Loading spinner

One thought on “ಗಜರಾಯನಿಂದ ರಾಜಧಾನಿ ಎಕ್ಸೆಸ್ ಹಳಿ ತಪ್ಪಿತ್ತೇ …. !

  1. Guys, you know I love to keep it real so, I’m going to say betanocassino is legit. Their site is easy to navigate and I didn’t have any glitches so, I will say I’m happy with everything. betanocassino is a good shout!

    Loading spinner

Leave a Reply

Your email address will not be published. Required fields are marked *

error: Content is protected !!