ಬಂಟ್ವಾಳ:ಪಾರ್ಸೆಲ್ ಸಾಗಾಟದ ಲಾರಿಯೊಂದು ಆರು ತಿಂಗಳ ಗಬ್ಬದ ದನಕ್ಕೆ ಡಿಕ್ಕಿ ಹೊಡೆದು ಕಾಲಿಗೆ ಗಾಯವಾದ ಘಟನೆ ರಾಷ್ಟ್ರೀಯ ಹೆದ್ದಾರಿ ಬಿಸಿರೋಡಿನ ಗಾಣದಪಡ್ಪು ಎಂಬಲ್ಲಿ ನಡೆದಿದೆ.ಬಂಟ್ವಾಳ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಗಾಣದಪಡ್ಪು ಎಂಬಲ್ಲಿ ರಸ್ತೆ ದಾಟುತ್ತಿದ್ದ ಗಬ್ಬದ ದನಕ್ಕೆ ಡಿಕ್ಕಿಯಾಗಿದೆ.
ದನದ ಎಡದ ಕಾಲು ಚಕ್ರಕ್ಕೆ ಸಿಲುಕಿಕೊಂಡಿದ್ದು, ದನದ ಗೊರಸು ತುಂಡಾಗಿದೆ. ಹಾಗಾಗಿ ದನಕ್ಕೆ ಎದ್ದು ನಿಂತು ಓಡಾಟ ಮಾಡಲು ಅಸಾಧ್ಯವಾಗದೆ ಇದ್ದ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಸ್ಥಳೀಯರು ದನವನ್ನು ರಸ್ತೆಯ ಬದಿಗೆ ತಂದು ಹಾಕಿದ್ದಾರೆ. ಆದರೆ ಗೊರಸು ತುಂಡಾಗಿ ರಕ್ತ ಶ್ರಾವವಾಗುತ್ತಿರುವುದನ್ನು ಸಹಿಸಲಾರದೆ ಸ್ಥಳದಲ್ಲಿದ್ದ ಛಾಯಾಗ್ರಾಹಕ ವಿಕೇಶ್ ಸಾಲಿಯಾನ್ ಹಾಗೂ ಮ್ಯಾಕನಿಕ್ ರಾಜೇಶ್ ಅವರು ಗೂಡಿನ ಬಳಿಯಲ್ಲಿರುವ ಪಶು ಆರೋಗ್ಯ ಕೇಂದ್ರಕ್ಕೆ ತೆರಳಿ ಪಶು ವೈದ್ಯಾಧಿಕಾರಿ ಸುನಿಲ್ ಅವರಿಗೆ ಮಾಹಿತಿ ನೀಡಿ ಅವರನ್ನು ಕರೆಸಿಕೊಂಡರು.
ಸ್ಥಳಕ್ಕೆ ಬಂದ ಸುನಿಲ್ ಅವರು ರಕ್ತ ಶ್ರಾವವಾಗುತ್ತಿದ್ದ ಕಾಲಿಗೆ ಚುಚ್ಚು ಮದ್ದು ಹಾಗೂ ಔಷಧಿಗಳನ್ನು ಹಾಕಿ ಆರೈಕೆ ಮಾಡಿದರು.ಈ ದನ ಕಾಮಾಜೆ ನಿವಾಸಿ ನಾಗೇಶ್ ಅವರಿಗೆ ಸೇರಿದ್ದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವಿಕೇಶ್ ಸಾಲಿಯಾನ್, ಮ್ಯಾಕನಿಕ್ ರಾಜೇಶ್, ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅರ್ಚಕ ತಿಲಕ್ ಶಾಂತಿ, ಅಜಿತ್ ಶೆಟ್ಟಿ, ವಿಜಯ ಬಂಟ್ವಾಳ, ದಿನೇಶ್ ರಾಯಿ, ರಮೇಶ್ ಮ್ಯಾಕನಿಕ್ ಹಾಗೂ ಸ್ಥಳೀಯರು ಸೇರಿ ಪಿಕಪ್ ವಾಹನದ ಮೂಲಕ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.ಲಾರಿ ಚಾಲಕ ಕೊನೆಯವರೆಗೂ ಮನೆಯವರ ಜೊತೆ ಇದ್ದು ಆಕಸ್ಮಿಕವಾಗಿ ನಡೆದ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
Nnbet4, here I come! Always up for a bit of a flutter. I’ll let you know if it’s a good one! nnbet4