ರಾಜ್ಯದ ದೀರ್ಘಾವದಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸುತ್ತಿರುವ ಸಿದ್ದರಾಮಯ್ಯನವರಿಗೆ ತುಂಬು ಹೃದಯದ ಶುಭಾಶಯಗಳು!ರಾಜ್ಯದ ರಾಜಕೀಯದಲ್ಲಿ ಕಾಲಘಟ್ಟವನ್ನ ಸ್ಥಾಪಿಸಿದವರು ನೀವು. ಸಿದ್ದರಾಮಯ್ಯನವರ ಕಾಲ ಎಂದು ಜನ ಗರ್ವದಿಂದ ಹೇಳಿಕೊಳ್ಳುವ ಅವಧಿ ಕೊಟ್ಟಿದ್ದೀರಿ.ನಿಮ್ಮ ಅವಧಿಯಲ್ಲಿ ನಾವು ಜೊತೆಗಿದ್ದೆವು ಎಂಬುದು ನಮಗೂ ಹೆಮ್ಮಯ ವಿಷಯ. ಈ ಹಿಂದೆ ದೇವರಾಜ್ ಅರಸು ಅವರು ದಾಖಲೆ ಮಾಡಿದ್ದ ಸಂದರ್ಭದಲ್ಲಿ ನಮ್ಮ ತಂದೆ ಫರೀದ್ ಅವರ ಜೊತೆ ಶಾಸಕರಾಗಿ ಕೆಲಸ ಮಾಡಿದ್ದರು.ಈಗ ನಿಮ್ಮ ಜೊತೆ ನಾನು ಸಹ ಉನ್ನತ ಜವಾಬ್ದಾರಿ ನಿರ್ವಹಿಸುತ್ತಿರುವುದು ಖುಷಿಯ ವಿಚಾರ.ಒಡೆಯುವ ಈ ಜಗತ್ತಿನಲ್ಲಿ ನೀವು ಒಂದಾಗಿಸುವವರಿಗೆ ನಾಯಕತ್ಬ ನೀಡಿದ್ದಿರಿ. ನೀವು ಹಿಡಿದಿರುವ ಸಮಾನತೆಯ ಹಣತೆಗೆ ನಾವು ಕೈಜೋಡಿಸುತ್ತೇವೆ.ಶೋಷಿತ ಪೀಡಿತ ಹಾಗೂ ದಮನಿತರ ಪರ ನಿಮ್ಮ ದನಿಗೆ ನಾವು ದನಿಗೂಡಿಸುತ್ತೇವೆ. ಈ ಸುಸಂದರ್ಭದಲ್ಲಿ ಸಮಾನತೆಯ ಸಮಾಜದ ಪಣ ಇನ್ನಷ್ಟು ಗಟ್ಟಿಗೊಳಸೋಣ…!