ಮಂಗಳೂರು : ರಾಜಕೀಯದಲ್ಲಿ ಹೆಣ್ಣುಮಕ್ಕಳು ಗ್ಲಾಮರಸ್ ಆಗಿರ್ಬೇಕು ಅನ್ನೊದು ಹೆಚ್ಚಾಗಿದೆ ಎಂಬ ಮಾಜಿ ಸಚಿವೆ ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಹೇಳಿಕೆ ವಿವಾದಕ್ಕೆ ಹಾದಿ ತೆರೆದಿದೆ.
ಮಹಿಳಾ ವೈಭವ 2026ರ ಕಾರ್ಯಕ್ರಮದಲ್ಲಿ ಮಾಜಿ ಸಚಿವರೂ ಆಗಿರುವ ಮೋಟಮ್ಮ ಭಾಷಣ ಮಾಡಿದ್ದರು.ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಆಯೋಜನೆಯಾದ ಕಾರ್ಯಕ್ರಮದಲ್ಲಿ ರಾಜಕೀಯದಲ್ಲಿ ಮಹಿಳೆಯರು ಚುರುಕಾಗಿರಬೇಕು.
ಅದನ್ನು ಬಿಟ್ಟು, ಹೆಣ್ಣುಮಕ್ಕಳು ನಾವು, ಗ್ಲಾಮರಸ್ ಆಗಿ ಇರ್ಬೇಕು. ಎಂಬುದು ಸರಿಯಲ್ಲ ಎಂಬ ರೀತಿಯಲ್ಲಿ ಅವರು ಮಾತನಾಡಿದ್ದರು.
‘ರಾಜಕೀಯ ಮುಖಂಡರು ನಮ್ಮನ್ನು ಗುರುತಿಸಬೇಕು.’
‘ಅವರಿಗೆ ನಾವು ಬಹಳ ಒಬಿಡಿಯಂಟ್ ಆಗಿ ಇರಬೇಕು.’ ಎಂಬ ಮನೋಭಾವವನ್ನು ಬಿಡಬೇಕು.
ಎಲ್ಲಿಯವರೆಗೆ ಹಲ್ಲುಕಿರಿಯೋದನ್ನು ನಾವು ಬಿಡುವುದಿಲ್ಲವೋ ಅಲ್ಲಿಯವರೆಗೂ ನಾವು ರಾಜಕೀಯದಲ್ಲಿ ಊಟಕ್ಕೆ ಉಪ್ಪಿನಕಾಯಿ ಅಷ್ಟೆ. ಎಂಬ ಅವರ ಮಾತು ಚಪ್ಪಾಳೆ ಗಿಟ್ಟಿಸಿತು.
ಹಿಂದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿ ಕಾರ್ಯ ನಿರ್ವಹಿಸಿದ್ದ ಮೋಟಮ್ಮ ಅವರ ಮಾತು ಅವರು ಪ್ರತಿನಿಧಿಸುವ ಪಕ್ಷದ ಪರಿಸ್ಥಿತಿ ಹಾಗು ಮಹಿಳೆಯರ ಸ್ಥಾನದ ಬಗ್ಗೆ ಬೆಳಕು ಚೆಲ್ಲಿದೆ ಎಂಬುದಾಗಿ ವ್ಯಾಖ್ಯಾನಿಸಲಾಗುತ್ತಿದೆ.