ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಮಾರ್ಗ ವ್ಯವಸ್ಥೆ: ಭಕ್ತರಿಗೆ ಸುಲಭ ದರ್ಶನ ವ್ಯವಸ್ಥೆ

ಉಡುಪಿ: ಶ್ರೀಕೃಷ್ಣ ದೇವರ ದರ್ಶನಕ್ಕಾಗಿ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ದರ್ಶನ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಪ್ರತಿಯೊಬ್ಬ ಭಕ್ತನಿಗೂ ಸುಗಮವಾಗಿ ದರ್ಶನ ಸಿಗುವಂತೆ ನೂತನ ಪಥವನ್ನು ರೂಪಿಸಲಾಗಿದೆ ಎಂದು ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳಾತ್ತಾಯ ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯಂತೆ ಭಕ್ತರು ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿ, ಬಳಿಕ ಶ್ರೀಚಂದ್ರಮೌಳೀಶ್ವರ ಹಾಗೂ ಶ್ರೀಅನಂತೇಶ್ವರ ದೇವರ ದರ್ಶನ ಪಡೆದು, ಶ್ರೀಮನ್ ಮಧ್ವಾಚಾರ್ಯರು ಅದೃಶ್ಯರಾದ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸಲಿದ್ದಾರೆ. ನಂತರ ನವಗ್ರಹ ಕಿಂಡಿಯಲ್ಲಿ ಭಗವಂತನ ದರ್ಶನ ಮಾಡಿ ಹೊರಬರುವಂತೆ ಮಾರ್ಗ ವಿನ್ಯಾಸಗೊಳಿಸಲಾಗಿದೆ.

ದೇವಳಕ್ಕೆ ತೆರಳುವ ಮಾರ್ಗದಲ್ಲಿ ಭಕ್ತರ ಅನುಕೂಲಕ್ಕಾಗಿ ಸೇವಾ ಕೌಂಟರ್ ಹಾಗೂ ಮಾಹಿತಿ ಕೌಂಟರ್‌ಗಳನ್ನು ತೆರೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಪಾನೀಯ ವ್ಯವಸ್ಥೆ

ಬೇಸಿಗೆಯ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ತಂಪು ಪಾನೀಯ ಒದಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ನಿಂಬೆಹಣ್ಣು, ಕಬ್ಬು ಸೇರಿದಂತೆ ಪ್ರತಿದಿನ ವಿಭಿನ್ನ ರೀತಿಯ ಪಾನೀಯಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಅನ್ನ ಪ್ರಸಾದ ವ್ಯವಸ್ಥೆ

ಮಠದಲ್ಲಿ ಭೋಜನ ವ್ಯವಸ್ಥೆ ಇರುವ ಎಲ್ಲ ಕಡೆಗಳಲ್ಲೂ ಎಲ್ಲಾ ಭಕ್ತರಿಗೆ ಸಮಾನವಾಗಿ ಶ್ರೀಕೃಷ್ಣನ ಅನ್ನ ಪ್ರಸಾದ ದೊರೆಯುವಂತೆ 10ರಿಂದ 12 ವಿಧದ ಪದಾರ್ಥಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!