ಬಂಟ್ವಾಳ: ಪಾಲ್ತಾಜೆ ಸಾಲೆತ್ತೂರು ಮಾರಿಗುಡಿ ಬಳಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕೊಳವೆಬಾವಿ ಹಾಗೂ ವಿದ್ಯುತ್ ಸಂಪರ್ಕ ಸಹಿತ ಕಾಲೋನಿಗೆ ಕುಡಿಯುವ ನೀರಿನ ಯೋಜನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರಾದ ಮಾಧವ ಮಾವೆ ಪ್ರಾಸ್ತಾವಿಕ ಭಾಷಣ ಮಾಡಿದರು, ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಕೃಷ್ಣಪ್ರಸಾದ್ ಶೆಟ್ಟಿ ಮಲಾರಬೀಡು, ಆನಂದ ಪೂಜಾರಿ ಮಾವೆ , ಪ್ರಶಾಂತ್ ಶೆಟ್ಟಿ ಅಗರಿ, ಬೂತ್ ಸಮಿತಿ ಅಧ್ಯಕ್ಷೆ ಸುನೀತಾ ಯು ರೈ, ಕಾರ್ಯದರ್ಶಿ ಸಂದೇಶ್ ಶೆಟ್ಟಿಗಾರ್, ಬಿ ಎಲ್ ಎ ನಾಗರಾಜ ಆಳ್ವ ಮೆದು, ಎಸ್ಟಿ ಮೋರ್ಚಾದ ಕಾರ್ಯದರ್ಶಿ ಉದಯಕುಮಾರ್ ನಾಯ್ಕ್, ಕುಟುಂಬದ ಹಿರಿಯರಾದ ಶಿವಯ್ಯ ಪಾಲ್ತಾಜೆ, ತರವಾಡು ಮನೆಯ ಹಿರಿಯರಾದ ಸೇಸಪ್ಪ ಪಾಲ್ತಾಜೆ, ರಾಮಣ್ಣ ಶೆಟ್ಟಿ ಕಾಂತು ಮೂಲೆ, ಪ್ರವೀಣ್ ಶೆಟ್ಟಿ ಗೌರಿ ಕೋಡಿ, ವೆಂಕಪ್ಪ ಶೆಟ್ಟಿಗಾರ್, ಬಾಲು ಪಾಲ್ತಾಜೆ, ಸಂತೋಷ್ ಪಾಲ್ತಾಜೆ ಹಾಗೂ ಪಲಾನುಭವಿಗಳು ಉಪಸ್ಥಿತರಿದ್ದರು.
ಸಾಲೆತ್ತೂರು ಶಕ್ತಿ ಕೇಂದ್ರದ ಪ್ರಮುಖರಾದ ವಿದ್ಯೇಶ್ ರೈ ಸ್ವಾಗತಿಸಿದರು.