SSLC ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಮತ್ತೆ ಮೆಲುಗೈ – ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮಹಿಳಾ ಕಾಂಗ್ರೇಸ್ ಮುಖಂಡರಾದ ಅಸ್ಮ ಹಸೈನಾರ್ ತಾಳಿತ್ತನೂಜಿ

ಕರ್ನಾಟಕ ಸರ್ಕಾರದ ಮಾರ್ಗದರ್ಶನ ಹಾಗೂ ಶಿಕ್ಷಣ ಕ್ಷೇತ್ರದ ಸಮಗ್ರ ಪ್ರಯತ್ನಗಳ ಫಲವಾಗಿ ಈ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯದಾದ್ಯಂತ ವಿದ್ಯಾರ್ಥಿಗಳು ಸಾಧನೆ ಮೆರೆದಿರುವ ಸಂದರ್ಭದಲ್ಲಿ, ಎಂದಿನಂತೆ ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಉತ್ತಮ ಫಲಿತಾಂಶ ದಾಖಲಿಸಿ ಮೆಲುಗೈ ಸಾಧಿಸಿರುವುದು ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿ ಪರಿಣಮಿಸಿದೆ.

ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು ಸಲ್ಲಿಸುತ್ತೇವೆ. ಈ ಸಾಧನೆ ನಿಮ್ಮ ಪರಿಶ್ರಮ, ಶ್ರಮಶೀಲತೆ ಹಾಗೂ ಗುರುಗಳ ಸಮರ್ಪಿತ ಮಾರ್ಗದರ್ಶನದ ಫಲವಾಗಿದೆ. ಪೋಷಕರ ಪ್ರೋತ್ಸಾಹ ಮತ್ತು ಶಿಕ್ಷಕರ ತ್ಯಾಗದೊಂದಿಗೆ ವಿದ್ಯಾರ್ಥಿಗಳು ತಲುಪಿದ ಈ ಸಾಧನೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು

ಅಂಕಗಳೇ ಜೀವನದ ಅಂತಿಮ ಗುರಿಯಲ್ಲ ಎಂಬುದು ಎಲ್ಲರೂ ಮನಗಾಣಬೇಕಾದ ಸತ್ಯ. ಅವು ವಿದ್ಯಾರ್ಥಿಗಳ ಪ್ರಯಾಣದ ಒಂದು ಹಂತ ಮಾತ್ರ. ನಿಜವಾದ ಯಶಸ್ಸು ಎಂದರೆ ವ್ಯಕ್ತಿಯ ಸಾಮರ್ಥ್ಯವನ್ನು ಅರಿತು, ಕನಸುಗಳನ್ನು ಸಾಧಿಸಲು ದಿಟ್ಟ ಮನಸ್ಸಿನಿಂದ ಮುಂದೆ ಸಾಗುವ ಧೈರ್ಯದಲ್ಲಿ ಅಡಗಿದೆ. ಸೋಲುಗಳನ್ನೂ ಕಲಿಕೆಯ ಭಾಗವೆಂದು ಸ್ವೀಕರಿಸುವ ಮನೋಭಾವ ಮುಂದಿನ ಯಶಸ್ಸಿಗೆ ದಾರಿ ತೋರಿಸುತ್ತದೆ.
ಮುಂದಿನ ಶಿಕ್ಷಣದ ಹಾದಿಯಲ್ಲಿ ವಿದ್ಯಾರ್ಥಿಗಳು ಸೂಕ್ತ ಯೋಜನೆ ಹಾಗೂ ಸ್ಪಷ್ಟ ಗುರಿಯೊಂದಿಗೆ ಹೆಜ್ಜೆ ಇಡುವುದು ಅಗತ್ಯವಾಗಿದೆ.

ಶೈಕ್ಷಣಿಕ ಗುಣಮಟ್ಟ, ಅನುಭವಸಂಪನ್ನ ಶಿಕ್ಷಕರು ಹಾಗೂ ಕಲಿಕೆಗೆ ಉತ್ತೇಜನ ನೀಡುವ ವಾತಾವರಣವಿರುವ ಕಾಲೇಜುಗಳನ್ನು ಆಯ್ಕೆ ಮಾಡುವುದು ಭವಿಷ್ಯದ ನಿರ್ಮಾಣಕ್ಕೆ ಪ್ರಮುಖವಾಗಿದೆ.
ಕೇವಲ ಹೆಸರು ಅಥವಾ ಪ್ರಚಾರಕ್ಕೆ ಮರುಳಾಗದೆ, ತಮ್ಮ ಆಸಕ್ತಿ, ಗುರಿ ಹಾಗೂ ಸಾಮರ್ಥ್ಯಕ್ಕೆ ಹೊಂದುವ ಶಿಕ್ಷಣ ಸಂಸ್ಥೆಗಳನ್ನು ಆರಿಸಿಕೊಳ್ಳುವುದು ಅತ್ಯಂತ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಿದರೆ, ಅವರು ಭವಿಷ್ಯದಲ್ಲಿ ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡುವ ಶಕ್ತಿಯಾಗುತ್ತಾರೆ.

ನಂಬಿಕೆಯಿಂದ ಮುಂದುವರಿದರೆ ಸಾಧನೆ ನಿಮ್ಮದೇ ಆಗಲಿದೆ ಎಂದು ಮಹಿಳಾ ಕಾಂಗ್ರೆಸ್ ದಕ್ಷಿಣ ಕನ್ನಡದ ಪ್ರಧಾನ ಕಾರ್ಯದರ್ಶಿ ಕೆ.ಎ. ಅಸ್ಮ ಹಸೈನಾರ್ ತಾಳಿತ್ತನೂಜಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!