ಕಡಬ ತಾಲೂಕಿನ ಹಲವು ಗ್ರಾಮಗಳಲ್ಲಿ ಹಿಂದೂಗಳನ್ನು ಮತಾಂತರ ಮಾಡುವ ಷಡ್ಯಂತರ ನಡೆಯುತ್ತಲೇ ಇದೆ, ಈh ಬಗ್ಗೆ ನಾವು ಪೋಲೀಸ್ ಇಲಾಖೆಗೆ ದೂರು ನೀಡುತ್ತೇವೆ, ತಕ್ಷಣ ಮತಾಂರಗಳ ಅಡ್ಡೆಗಳನ್ನು ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು, ತಪ್ಪಿದ್ದಲ್ಲಿ ಉಗ್ರ ಪ್ರತಿಭನೆ ಎದುರಿಸಬೇಕಾದೀತು ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಎಚ್ಚರಿಸಿದರು. ಅವರು ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹಿಂದೂಗಳ ದೌರ್ಬಲ್ಯ ಹಾಗೂ ಬಡತನದಂತಹ ಸಮಸ್ಯೆಗಳನ್ನು ಬಂಡವಾಳ ಮಾಡಿಕೊಂಡು ವಿವಿಧ ಆಮಿಷಗಳನ್ನು ಒಡ್ಡಿ ಮತಾಂತರ ಯತ್ನಗಳು ನಡೆಯುತ್ತಿವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಮತಾಂತರದAತಹ ಸವಾಲನ್ನು ವಿಶ್ವಹಿಂದೂ ಪರಿಷತ್ ಎದುರಿಸುತ್ತಾ ಬಂದಿದೆ, ಹಿಂದೂ ಧರ್ಮದಿಂದ ಮತಾಂತರವಾದರೂ ಅವರನ್ನು ಮರಳಿ ಸ್ವಧರ್ಮಕ್ಕೆ ತರುವಲ್ಲಿ ಮಹತ್ತರವಾದ ಕೆಲಸವನ್ನು ಮಾಲಾಗುತ್ತಿದೆ. ಇತ್ತೀಚೆಗೆ ಕಡಬ ಠಾಣಾ ವ್ಯಾಪ್ತಿಯ ಕೆರ್ಮಾಯಿಯ ಮನೆಯೊಂದರಲ್ಲಿ ಬೆಂಗಳೂರು ಮೂಲದವರನ್ನು ಕರೆತಂದು ಗುಪ್ತವಾಗಿ ಪ್ರಾರ್ಥನೆ ಹಾಗೂ ಮತಾಂತರ ಯತ್ನ ನಡೆಸಲಾಗುತ್ತಿದೆ ಎಂದು ನಮ್ಮ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಮತಾಂತರ ಯತ್ನ ನಡೆದಿರುವುದು ಕಂಡುಬAದಿದೆ. ನಾಲ್ಕು ತಿಂಗಳ ಹಿಂದೆ ಅವರನ್ನು ಮತಾಂತರ ಮಾಡಿ ಇಲ್ಲಿ ಧರ್ಮ ಭೋಧನೆ ಮಾಡಲಾಗುತ್ತಿತ್ತು. ಆದರೆ ಪೋಲೀಸರಿಗೆ ಅವರು ಹೇಳಿಕೆ ನೀಡುವಾಗ ೨೦ ವರ್ಷಗಳ ಹಿಂದೆ ಮತಾಂತರವಾಗಿರುವುದಾಗಿ ತಿರುಚಿದ್ದಾರೆ. ಪ್ರತೀ ಗ್ರಾಮ ಹಾಗೂ ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಮತಾಂತರದAತಹ ಕೃತ್ಯಗಳ ಬಗ್ಗೆ ನಿಗಾವಹಿಸಿ ಪೋಲೀಸರಿಗಿಂತ ಮೊದಲೆ ಮಾಹಿತಿ ಸಂಗ್ರಿಸುತ್ತಾರೆ.
ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆಗಳಿಂದ ಮಾದಿಗ ಜನಾಂಗದವರನ್ನು ಕರೆತಂದು, ಮತಾಂತರ ಮಾಡಿ ಕಡಬ ತಾಲೂಕಿನ ವಿವಿಧ ಚರ್ಚ್ಗಳಿಗೆ ಪ್ರಾರ್ಥನೆ ಮಾಡಿಸಿ , ಮತಾಂತರವನ್ನು ಗಟ್ಟಿಗೊಳಿಸುವ ಕೆಲಸ ಮಾಡಿದ್ದಾರೆ. ಪ್ರೀತಿಸಿದ ಹುಡಿಗಿಯರನ್ನು ಮದುವೆ ಮಾಡಿಸಿಕೊಡುತ್ತೇವೆ ಎನ್ನುವ ಆಮಿಷವೊಡ್ಡಿ ಆ ಮೂಲಕ ಹುಡುಗಿಯ ಕುಟುಂಬವನ್ನು ಮತಾಂತರ ಮಾಡುವ ಷಡ್ಯಂತರ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ದೊಡ್ಡ ಸಮುದಾಯವಾದ ಮಾದಿಗ ಸಮುದಾಯವನ್ನು ಟಾರ್ಗೆಟ್ ಮಾಡಿ, ದೂರದ ಊರಿನಲ್ಲಿ ಮತಾಂತರ ಮಾಡಿ ಈ ಭಾಗದಲ್ಲಿ ಅದನ್ನು ಗಟ್ಟಿ ಮಾಡುವ ಕೆಲಸ ನಡೆಯುತ್ತಿದೆ. ದೂರದ ಬೆಂಗಳೂರು ಮುಂತಾದೆಡೆ ಮಾದಿಗ ಸಮುದಯದವರು ಹಿಂದುತ್ವದ ಜೊತೆಗೆ ಗಟ್ಟಿಯಾಗಿದ್ದಾರೆ, ಅಲ್ಲಿ ಇವರ ಅಟೋಪಗಳು ನಡೆಯುವುದಿಲ್ಲ ಹಾಗಾಗಿ ಅಲ್ಲಿ ಗುಪ್ತವಾಗಿ ಮತಾಂತರ ಮಾಡಿ ಕಡಬ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನ ಮಾಡಲು ಹೊರಟಿದ್ದಾರೆ. ನಾವು ಕಡಬ ತಾಲೂಕನ್ನು ಸೂಕ್ಷವಾಗಿ ಗಮನಿಸುತ್ತಿದ್ದೇವೆ. ಇಲ್ಲಿ ಎಲ್ಲೆಲ್ಲಿ, ಹೇಗೆ ಮತಾಂತರ ನಡೆಯುತ್ತಿದೆ ಎಂದು ನಮಗೆ ಗೊತ್ತಿದೆ. ಎರಡು ಮೂರು ತಿಂಗಳಿAದ ಮತಾಂತರ ಮಾಡಿರುವ ೧೨ ಪ್ರಕರಣಗಳು ಇವೆ. ೧೫ ರಿಂದ ೨೦ ಹಿಂದೂ ಯುವತಿಯರನ್ನು ಕ್ರಿಶ್ಚಿಯನ್ನರು ಮದುವೆಯಾಗಿ ಮತಾಂತರಿಸಿದ್ದಾರೆ.
ಈ ಬಗ್ಗೆ ನಾವು ಪೊಲೀಸರಿಗೆ ದೂರು ನೀಡುತ್ತೇವೆ, ಇಷ್ಟಕ್ಕೂ ಬಗ್ಗದಿದ್ದರೆ, ಒಂದು ಹಂತದವರಗೆ ನಾವು ಸಹಿಸುತ್ತೇವೆ, ಕೈ ಮೀರಿದರೆ ಅದಕ್ಕೆ ಜಿಲ್ಲಾಡಳಿತ ಹೊಣೆಯಗುತ್ತದೆ ಎಂದು ಎಚ್ಚರಿಸಿದ ನವೀನ್ ನೆರಿಯ ಪಂಜದ ಒಂದು ಕುಟುಂಬವನ್ನು ಆಮಿಷವೊಡ್ಡಿ ಮತಾಂತರ ಮಾಡಿ ಯಾವುದೇ ಸವಲತ್ತು ನೀಡದೆ ವಂಚಿಸಿದವರನ್ನು ನಾವು ಘರ್ ವಾಪಾಸಿ ಮಾಡಿದ್ದೇವೆ. ಬೆಂಗಳೂರಿನಿAದ ಅಥವಾ ಬೇರೆ ಕಡೆಗಳಿಂದ ಮತಾಂತರ ಮಾಡಿ ಇಲ್ಲಿಗೆ ಕರೆ ತಂದು ಗುಪ್ತವಾಗಿ ಮತಾಂತರವನ್ನು ಗಟ್ಟಿಗೊಳಿಸುವ ಕಾರ್ಯ ಮಾಡಿದರೆ ನಮ್ಮ ಕಾರ್ಯಕರ್ತರು ಸುಮ್ಮನಿರುವುದಿಲ್ಲ. ಮತಾಂತರಿಗಳ ವಿರುದ್ಧ ಪೊಲೀಸರು ಹಾಗೂ ಜಿಲ್ಲಾಡಳಿತ ಗಂಭೀರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ರೈ ನಂದಗುರಿ, ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ ಹಾಗೂ ಮಾತೃಶಕ್ತಿ ಸಂಯೋಜಕಿ ಪ್ರೇಮಲತಾ ಕೇಪುಂಜ ಉಪಸ್ಥಿತರಿದ್ದರು.