ಕಡಬ ತಾಲೂಕು ಪಂಚಾಯಿತಿ ಕೆಡಿಪಿ ಸಭೆ

ಕಡಬ: ಕಡಬ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಸಭೆಯಲ್ಲಿ ಕಡಬ ತಾಲೂಕು ಆಡಳಿತ ಕಚೇರಿ ಉಪತಹಶೀಲ್ದಾರ ಸಯ್ಯುದುಲ್ ಖಾನ್ ಮಾಹಿತಿ ನೀಡಿ, ಕಡಬದಲ್ಲಿ ಕೆ.ಎಸ್ ಆರ್ ಟಿಸಿ ಬಸ್ಸು ನಿಲ್ದಾಣಕ್ಕೆ ಗುರುತಿಸಲಾದ ಕೋಡಿಂಬಾಳ ಗ್ರಾಮದ ೧೪೩/೧ಎ ಸರ್ವೆ ನಂಬರಿನ ೨.೮೩ ಎಕ್ರೆ ಜಾಗಕ್ಕೆ ಉಚ್ಚ ನ್ಯಾಯಲಯದ ತಡೆಯಾಜ್ಞೆಯಿದೆ. ಅಲ್ಲದೆ ಈ ಜಾಗಕ್ಕೆ ಸಂಪರ್ಕ ರಸ್ತೆ ಕಿರಿದಾಗಿದೆ ಎಂದು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ವರದಿ ನೀಡಿರುವುದರಿಂದ ಬದಲಿ ಜಮೀನು ಕೋಡಿಂಬಾಳ ಗ್ರಾಮದ ಸ.ನಂ೧೯/೩ಎ ರಲ್ಲಿ ೧.೧೦ ಎಕ್ರೆ ಗುರುತಿಸಿ ಪುತ್ತೂರು ಸಹಾಯಕ ಆಯುಕ್ತರಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದರು. ಈ ಬಗ್ಗೆ ಚರ್ಚೆ ನಡೆದು ಎರಡು ಜಾಗವನ್ನು ಕೆ ಎಸ್ ಆರ್ ಟಿ ಸಿ ಗೆ ಕಾದಿರಿಸುವ ಬಗ್ಗೆ ಪ್ರಯತ್ನಿಸುವ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು.


ಸುಬ್ರಹ್ಮಣ್ಯ ಸಮೂದಯ ಆರೋಗ್ಯ ಕೇಂದ್ರಕ್ಕೆ ೪.೫೦ ಎಕ್ರೆ ಭೂಮಿಯಿದ್ದು ಆಳತೆ ಮಾಡುವಾಗ ೨.೯೦ ಎಕ್ರೆ ಮಾತ್ರ ಇದೆ ಉಳಿದಂತೆ ಒತ್ತುವರಿಯಾಗಿದೆ ಎಂದು ಕೆಡಿಪಿ ಸದಸ್ಯ ಶಿವರಾಮ ರೈ ಹೇಳಿದರು. ಈ ಬಗ್ಗೆ ಉತ್ತರಿಸಿದ ಉಪತಹಶೀಲ್ದಾರ್ ಈ ಜಮೀನನ್ನು ಸರ್ಕಾರದ ಸುತ್ತೋಲೆಯಂತೆ ಪೋಡಿ ದುರಸ್ತಿ ನಡೆಸಲಾಗುತ್ತಿದ್ದ್ತು, ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಕ್ಷಣ ಕ್ರಮವಾಗದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಶಿವರಾಮ ರೈ ಎಚ್ಚರಿಕೆ ನೀಡಿದರು.


ಕಳೆದ ಕೆಡಿಪಿ ಸಭೆಯಲ್ಲಿ ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಜಾಗ ಒತ್ತುವರಿಯಾಗಿದೆ ಎನ್ನುವ ಆರೋಪಕ್ಕೆ ಸಂಬAದಿಸಿದ0ತೆ ಉತ್ತರಿಸಿದ ಉಪತಹಶೀಲ್ದಾರ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಮನವಿ ಸಲ್ಲಿಸಿದಲ್ಲಿ ಮುಂದಿ ಕ್ರಮಕೈಗೊಳ್ಳಲಾಗುವುದು ಎಂದರು.
ಕಡಬ ಸಮೂದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್ ಮಾತನಾಡಿ, ಸಮೂದಾಯ ಆಸ್ಪತ್ರೆ ತಾಲೂಕು ಆಸ್ಪತ್ತೆಯಾಗಿ ಮೇಲ್ದರ್ಜೆಗೇರುವ ಬಗ್ಗೆ ರಾಜ್ಯ ಮಟ್ಟದ ಶಿಫಾರಿಸ್ಸಿನಲ್ಲಿದೆ. ಶೀಘ್ರದಲ್ಲಿ ಬೇಡಿಕೆ ಇಡೇರುವ ಮಾಹಿತಿ ಸಿಕ್ಕಿದೆ. ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರಕ್ಕೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಒತ್ತಡ ಹೆಚ್ಚಾಗಿದೆ. ಹೀಗಾಗಿ ಉಪ್ಪಿನಂಗಡಿ ಸರ್ಕಾರಿ ಆಸ್ಪತೆಯಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಳೆಯ ಪ್ರಾಥಮಿಕ ಕಟ್ಟಡವನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದರು.

ಕೆಡಿಪಿ ಸದಸ್ಯ ಶಿವರಾಮ ರೈ ಮಾತನಾಡಿ, ಸುಬ್ರಹ್ಮಣ್ಯದಲ್ಲಿ ಈಗಾಗಲೇ ಉದ್ಘಾಟನೆಯಾದ ಶಿಸುಪಾಲನ ಕೇಂದ್ರಕ್ಕೆ ಸ್ವಂತ ಕಟ್ಟಡ ಬೇಕು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲಿರುವ ಎಲ್ಲಾ ಒಳಚರಂಡಿಗೆ ಹೋಟೇಲು, ರಸ್ತೆ ಬದಿ ವ್ಯಾಪಾರಿಗಳು ದ್ರತಾಜ್ಯವನ್ನು ಬಿಡುವಾಗ ಗ್ರಾಮ ಪಂಚಾಯಿತಿ ಅನುಮತಿ ಪಡೆಯಬೇಕು, ಅನಧಿಕೃತ ಅಂಗಡಿಗಳನ್ನು ಮುಚ್ಚಿಸಬೇಕು, ಇಲ್ಲಿರುವ ಎಲ್ಲಾ ಆಹಾರ ವಸ್ತು ಮಾರಟ ಮಾಡುವ ಅಂಗಡಿಗಳಿಗೆ , ಹೋಟೇಲುಗಳಿಗೆ ಆಹಾರ ನಿರೀಕ್ಷಕರು ತೆರಳಿ ಪರಿಶೀಲನೆ ನಡೆಸಬೇಕು, ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಮೆಸ್ಕಾಂ ವಿಭಾಗದಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ತಂಡವಿರಬೇಕು, ಸವಣೂರು, ಬಿಳಿನೆಲೆ ಎಂಬಲ್ಲಿ ರಾಜ್ಯ ಹೆದ್ದಾರಿಯಲ್ಲಿರುವ ಅಪಾಯಕಾರಿ ಹಂಪ್ಸ್ಗಳನ್ನು ತೆರವು ಮಾಡಬೇಕು, ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡುವಾಗ ರಸ್ತೆಯಂಚಿನ ಬಗ್ಗೆ ಗಮನವಿಸಬೇಕು, ಕುಮಾರಪರ್ವತ ಚಾರಣವನ್ನು ಒಂದೇ ದಿನದಲ್ಲಿ ಮುಗಿಸುವಂತೆ ಚಾರಣಿಗರಿಗೆ ಹಾಕಲಾದ ಷರತ್ತು ಸಡಿಲಿಸಬೇಕು , ಮೀಸಲು ಅರಣ್ಯ ಪ್ರದೇಶದ ಒಳಗಡೆ ಅಕ್ರಮ ಚಟುಟವಟಿಕೆಗೆ ಅವಕಾಶ ಮಾಡಿಕೊಡಬಾರದು ಎನ್ನುವ ಆಗ್ರಹ ವ್ಯಕ್ತಪಡಿಸಿದರು.

ಕಡಬದಲ್ಲಿರುವ ಮೌಲಾನಾ ಅಜಾದ್ ಮಾದರಿ ಶಾಲೆಯು ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಕಾರ್ಯಚರಿಸುತ್ತಿದೆ ಇಲ್ಲಿನ ಸಂಪರ್ಕಕ್ಕೆ ಸುಸಜ್ಜಿತ ರಸ್ತೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ದಾಖಲಾತಿಯ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ರಸ್ತೆಯ ಇಕ್ಕಡೆಗಳಲ್ಲಿ ಪೊದರು ತುಂಬಿಕೊ0ಡಿದೆ ತಕ್ಷಣ ತೆರವು ಮಾಡಬೇಕು, ಕಡಬ ಪೇಟೆಯ ಸುತ್ತಮುತ್ತಲಿರುವ ರಸ್ತೆ ಬದಿಗಳ ಅಪಾಯಕಾರಿ ಮರಗಳ ತೆರವು ಮಾಡಬೇಕು, ಮೆಸ್ಕಾಂ ಇಲಾಖೆಯ ಜನ ಸಂಪರ್ಕ ಸಭೆಗೆ ಕೆಡಿಪಿ ಸದಸ್ಯರನ್ನು ಆಹ್ವಾನಿಸಬೇಕೆಂದು ಕೆಡಿಪಿ ಸದಸ್ಯ ಆಶ್ರಫ್ ಶೇಡಿಗುಂಡಿ ಆಗ್ರಹಿಸಿದರು. ಆಲಂಕಾರು ಗ್ರಾಮದಲ್ಲಿರುವ ಡಿ ಸಿ ಮನ್ನಾ ಭೂಮಿಯನ್ನು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಬೇಕೆಂದು ಒಂದು ವರ್ಷದಿಂದ ಆಗ್ರಹಿಸಲಾಗುತ್ತಿದೆ. ಜಂಟಿ ಸರ್ವೆಗೆ ತಕ್ಷಣ ದಿನ ನಿಗದಿ ಮಾಡುವಂತೆ ಕೆಡಿಪಿ ಸದಸ್ಯ ಮೋನಪ್ಪ ವಳಕಡಮ ಆಗ್ರಹಿಸಿದರು. ಈ ಬಗ್ಗೆ ಶಾಸಕರು ಮಾತನಾಡಿ ತಕ್ಷಣ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಉಪತಹಶೀಲ್ದಾರ್ ಹತ್ತು ದಿನದೊಳಗಡೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.


ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಂದಾಯ , ಆರಣ್ಯ ಇಲಾಖೆ ಜಂಟಿ ಸರ್ವೆಗಳು ಲೈಸನ್ಸ್ ಸರ್ವೆಯರ್‌ಗಳ ಪ್ರತಿಭಟನೆಯಿಂದ ವಿಳಂಭವಾಗುತ್ತಿದೆ ಈ ಬಗ್ಗೆ ಜನರಿಗೆ ಆಗುವ ಸಮಸ್ಯೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಬೇಕೆಂದು ಕೆಡಿಪಿ ಸದಸ್ಯರು ಶಾಸರಿಗೆ ಮನವಿ ಮಾಡಿದರು. ಈಗಾಗಲೇ ಕ್ಷೇತ್ರದ ಬಗೆಗಿನ ಸಮಸ್ಯೆಗಳ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚಿಸಿದ್ದೇನೆ ಕೆಲವೊಂದಕ್ಕೆ ಸಂಬAದಪಟ್ಟ ಇಲಾಖೆಯಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು. ಸಭೆಯಲ್ಲಿ ವ್ಯಕ್ತವಾದ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಸರಿಪಡಿಸುವಂತೆ ಸಂಬAದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕಡಬ ತಾಲೂಕು ಪಂಚಾಯಿತಿ ಕಾರ್ಯನಿವಾಹಣಾಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಕೆಡಿಪಿ ಸದಸ್ಯರಾದ ಗಿರೀಶ್ ಇಚ್ಲಂಪಾಡಿ, ಉಷಾ ಒ.ಕೆ ನೆಲ್ಯಾಡಿ, ಪದ್ಮನಾಭ ಗೌಡ ಗುಂಡ್ಯ, ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.

SHARE
Loading spinner

Leave a Reply

Your email address will not be published. Required fields are marked *

error: Content is protected !!