ಪುತ್ತೂರು: ಪುತ್ತೂರಿನಲ್ಲಿ ಎಂಟನೇ ಆವೃತ್ತಿಯ ಹಲಸು-ಹಣ್ಣು ಮೇಳ

ಪುತ್ತೂರು: ಪುತ್ತೂರಿನಲ್ಲಿ ಎಂಟನೇ ಆವೃತ್ತಿಯ ಹಲಸು-ಹಣ್ಣು ಮೇಳವು ಜೂ.5ರಿಂದ 7ರ ತನಕ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ. ನವತೇಜ ಟ್ರಸ್ಟ್ ಪುತ್ತೂರು ಇವರ ನೇತೃತ್ವ ಮತ್ತು ‘ಮುಳಿಯ ಮ್ಯಾನೇಜ್ ಫಾರ್ಮ್ ಲ್ಯಾಂಡ್‌’ ಇವರ ಪ್ರಾಯೋಜಕತ್ವದಲ್ಲಿ ಈ ಮೇಳ ನಡೆಯಲಿದೆ.

ನವತೇಜ ಟ್ರಸ್ಟ್‌ನ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಮತ್ತು ನವತೇಜ ಟ್ರಸ್ಟ್‌ನ ಟ್ರಸ್ಟಿ ಸುಹಾಸ್ ಮರಿಕೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2014ರಲ್ಲಿ ನಾವು ಹಲಸಿನ ಮೇಳ ಆರಂಭಿಸಿದ್ದೇವು. ಇವತ್ತು 8ನೇ ಆವೃತ್ತಿಯಲ್ಲಿ ಹಲಸಿನ ಬೇಡಿಕೆ ಹೆಚ್ಚುತ್ತಿದೆ ಎಂದ ಅವರು ಈ ಭಾರಿ ಮೇಳದ ಮಳಿಗೆಗಳನ್ನು ಬೆಳಿಗ್ಗೆ ಗಂಟೆ 9ಕ್ಕೆ ಶ್ರೀ ಮಂಗಳಾ ಹೋಮಿಯೋಪತಿಕ್ ಕ್ಲಿನಿಕ್‌ನ ಡಾ.ಕೆ.ರಮೇಶ್ ಭಟ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೇಟ್ ಇಲೆಕ್ಟ್ರಾನಿಕ್ಸ್‌ನ ಮಾಲಕ ರೂಪೇಶ್ ಶೇಟ್ ಉಪಸ್ಥಿತರಿರುತ್ತಾರೆ. ಅಪರಾಹ್ನ ಗಂಟೆ 4 ಕ್ಕೆ ಹಲಸು ಹಬ್ಬದ ಉದ್ಘಾಟನಾ ಸಮಾರಂಭವು ಪ್ರತಿಷ್ಠಿತ ಕ್ಯಾಂಸ್ಕೋ ಸಂಸ್ಥೆಯ ನಿರ್ದೇಶಕ ಮುರಳಿಕೃಷ್ಣ ಚಳ್ಳಂಗಾರು ಅವರು ಉದ್ಘಾಟಿಸಲಿದ್ದಾರೆ. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆಯವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಪುತ್ತೂರಿನ ಗೇರು ಸಂಶೋಧನಾಲಯ ನಿರ್ದೇಶನಾಲಯದ ವಿಜ್ಞಾನಿ ಡಾ. ವೀಣಾ ಶುಭಾಶಂಸನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಡಾ. ನರೇಂದ್ರ ರೈ ದೇರ್ಲ ಇವರ ‘ಹಲಸಿನಲ್ಲಿ ಹಸಿರು ಕ್ರಾಂತಿ’ ಕೃತಿಯು ಲೋಕಾರ್ಪಣೆಗೊಳ್ಳಲಿದೆ. ಇದರ ಜೊತೆಗೆ ಸ್ಥಳೀಯ ಕೃಷಿಕ ಸಂದೀಪ್ ಶೆಟ್ಟಿ ಅರಿಯಡ್ಕ ಅವರು ಅಭಿವೃದ್ಧಿ ಪಡಿಸಿದ ಹಲಸು ತಳಿ ಆರ್‌ಆರ್ -38 ಮಾಣಿ ಇದರ ಅನಾವರಣ ಕಾರ್ಯಕ್ರಮ ನಡೆಯಲಿದೆ.

ಜೂ.6 ರಂದು ‘ಹಣ್ಣುಗಳೊಂದಿಗೆ ಮಾತುಕತೆ’ ಎನ್ನುವ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಮುಳಿಯ ಮ್ಯಾನೇಜ್ ಫಾರ್ಮ್ ಲ್ಯಾಂಡ್ ಇದರ ಮುಖ್ಯಸ್ಥ ಕೇಶವ ಪ್ರಸಾದ್ ಮುಳಿಯ, ಕೊಕ್ಕೋ-ಕಾಫಿ ಬೆಳೆಗಾರ ಚಂದ್ರಶೇಖರ ತಾಳ್ತಜೆ, ಮೂಲ್ಕಿಯ ಗೇರು ಹಣ್ಣಿನ ಮೌಲ್ಯವರ್ಧಕರಾದ ಕೆನ್ಯೂಟ್ ಅರಾನ್ಹಾ ವಿಷಯ ಪ್ರಸ್ತುತಿ ಮಾಡಲಿದ್ದಾರೆ.

ಜೂ.7ರಂದು ಪೂರ್ವಾಹ್ನ ಗಂಟೆ 10ಕ್ಕೆ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ “ಹಲಸು-ಮಾವು-ಕೃಷಿ ರಸಪ್ರಶ್ನೆ’ ನಡೆಯಲಿದೆ. ಬಳಿಕ ಹಲಸು ವೈವಿಧ್ಯ.

ವಿವಿಧ ಸ್ಪರ್ಧೆಗಳು ನಡೆಯಲಿದೆ. ಅಪರಾಹ್ನ ಗಂಟೆ 4 ಕ್ಕೆ ಶ್ಯಾಮ ಜ್ಯುವೆಲ್ಸ್ ಗ್ರೂಪ್ ಇದರ ಸಿ.ಎಂ.ಡಿ. ಕೇಶವ ಪ್ರಸಾದ್ ಮುಳಿಯ ಇವರ ಸಭಾ ನೇತೃತ್ವದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ವಿಧಾನ ಪರಿಷತ್ ಅಧ್ಯಕ್ಷ ಕಿಶೋ‌ರ್ ಕುಮಾ‌ರ್ ಬೊಟ್ಯಾಡಿ ಹಾಗೂ ಜೆಸಿಐ ವಲಯ ಅಧ್ಯಕ್ಷ ಸಂತೋಷ್‌ ಕುಮಾರ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ಹಾಗೂ ಪುತ್ತೂರಿನ ಗ್ರಾಮಜನ್ಯ ರೈತೋತ್ಪಾದಕ ಸಂಸ್ಥೆ ‘ಗ್ರಾಮಜನ್ಯ’ದ ನಿರ್ದೇಶಕ ನಿರಂಜನ್ ಪೋಳ್ಯ ಶುಭಾಶಂಸನೆ ಮಾಡಲಿದ್ದಾರೆ ಎಂದವರು ಹೇಳಿದರು.

ನವತೇಜ ಟ್ರಸ್ಟ್‌ನ ಟ್ರಸ್ಟಿ ಸುಹಾಸ್ ಮರಿಕೆ ಅವರು ಮಾತನಾಡಿ ಮೇಳದಲ್ಲಿ ಮೂರು ವಿಭಾಗ ಮಾಡಲಾಗಿದ್ದು, ಮೇಳದ ಹೊರಗಡೆ ನರ್ಸರಿ, ಹಣ್ಣುಗಳ ಮತ್ತು ಕಮರ್ಷಿಯಲ್ ಸ್ಟಾಲ್‌ಗಳು ಇರುತ್ತವೆ. ಹಲಸು ಮೇಳದ ದ್ವಾರದ ಒಳಗೆ ಕೃಷಿಗೆ ಸಂಬಂಧಿಸಿದ ಮತ್ತು ನೀರಿನ ನಿರ್ವಾಹಣೆ, ಸೋಲಾರ್ ವ್ಯವಸ್ಥೆಯ ಕುರಿತ ಹಾಗು ಹಣ್ಣುಗಳ ಪ್ರದರ್ಶನ, ಮಾರಾಟವಿದೆ. ಹೊರಗಡೆ ಹೋಗುವಲ್ಲಿ ಹಲಸು ಮತ್ತು ಹಲಸಿಗೆ ಸಂಬಂಧಿಸಿದ ಪುಡ್ ಸ್ಟಾಲ್, ಸುಮಾರು 80ಕ್ಕೂ ಮಿಕ್ಕಿದ ಹಲಸಿನ ಉತ್ಪನ್ನಗಳು ಮೇಳದಲ್ಲಿವೆ. 15ಕ್ಕೂ ಹೆಚ್ಚು ಬರೇ ಹಲಸಿನ ಸ್ಟಾಲ್‌ಗಳಿವೆ ಎಂದರು.

ಮುಳಿಯ ಮ್ಯಾನೇಜ್ ಫಾರ್ಮ್ ಲ್ಯಾಂಡ್‌ನ ಪ್ರತಿನಿಧಿ ರಜತ್ ಅವರು ಮಾತನಾಡಿ 8 ರಿಂದ 14 ಸೆಂಟ್ಸ್ ಜಾಗದಲ್ಲೂ ಹಣ್ಣಿನ ಗಿಡ ನಡುವ ಮೂಲಕ ಹಣ್ಣು ಬೆಳೆಸಬಹುದು. ನಮ್ಮ ಸಂಸ್ಥೆಯಿಂದಲೇ ಇದರ ನಿರ್ವಾಹಣೆ ಇರುತ್ತದೆ ಎಂದು ಮಾಹಿತಿ ನೀಡಿದರು.

ನವತೇಜ ಟ್ರಸ್ಟ್‌ನ ಟ್ರಸ್ಟಿ ಮತ್ತು ನವನೀತ ನರ್ಸರಿಯ ಮಾಲಕ ವೇಣುಗೋಪಾಲ್ ಅವರು ಮಾತನಾಡಿ ಸಮಗ್ರ ತೋಟಗಾರಿಕೆ ಬೆಳೆಯಲು ಬೇಕಾದಷ್ಟು ಅವಕಾಶವಿದೆ. ಈ ನಿಟ್ಟಿನಲ್ಲಿ ಮೇಳದಲ್ಲಿ ಸಂಶೋಧನಾ ಕೇಂದ್ರಗಳು ಹಾಗೂ ಕೃಷಿಕರನ್ನು ಒಂದೇ ಸೂರಿನಡಿ ತಂದು ಕೃಷಿ ಉತ್ಪನ್ನಗಳಿಗೆ ಉದ್ಯಮದ ಸ್ವರೂಪ ನೀಡುವ ಯತ್ನವು ಮೇಳದ ಉದ್ದೇಶಗಳಲ್ಲೊಂದು ಅವರು ತಿಳಿಸಿದರು.

1 ಲೋಡ್ ಬರಲಿದೆ ಕೆಂಪು ಹಲಸಿನ ಹಣ್ಣು 80 ಕ್ಕೂ ಮಿಕ್ಕಿದ ಹಲಸಿನ ಹಣ್ಣಿನ ಉತ್ಪನ್ನ ಹಲಸಿನ ಹಣ್ಣಿನ ಹೊಸ ತಳಿಯ ಅನಾವರಣ ಗೇರು ಹಣ್ಣಿನ ಮೌಲ್ಯವರ್ಧನೆಯಲ್ಲಿ ಸುಕಾಜು ಸ್ಪೆಷಲ್
25 ಬಗೆಯ ಮಾವಿನ ಹಣ್ಣುಗಳು ನರ್ಸರಿ, ಹಣ್ಣುಗಳ, ಹಸಲಿನ ಹಣ್ಣು, ಪುಡ್ ಸ್ಟಾಲ್‌ಗಳು ಇರಲಿದೆ ಎಂದು ಸುಹಾಸ್ ಮರಿಕೆ ಹೇಳಿದರು.

ವಿಶೇಷ ಎಂದರೆ ಈ ಭಾರಿ ಗೇರು ಹಣ್ಣಿಗೂ ಮೌಲ್ಯವರ್ಧನೆ ಅವಕಾಶ ನೀಡಲಾಗಿದೆ. ಈಗಾಗಲೇ ಗೇರು ಬೀಜ ಮಾತ್ರವಲ್ಲ ಗೇರು ಹಣ್ಣಿನಿಂದಲೂ ಹಲವಾರು ಉತ್ಪನ್ನ ಮಾಡಲಾಗುತ್ತಿದೆ. ಗೇರುಹಣ್ಣು ಕ್ಯಾಶೂಆಪಲ್ ಜ್ಯೂಸ್ ಶೀಥಲಿಕರಣದಿಂದ ಮಾಡಿಕೊಡಲಾಗುವುದು. ಅದೇ ರೀತಿ ಗೇರು ಹಣ್ಣನ್ನು ಒಣಗಿಸಿದ ಸುಕಾಜು ವಿಶೇಷ ಆಹಾರ ಉತ್ಪನ್ನವಾಗಿದೆ. ಇದರ ಜೊತೆಗೆ ವೆಸ್ಟ್‌ಬೆಂಗಾಲ್ ಸಹಿತ ನಮ್ಮೂರಿನ ಸುಮಾರು 25 ಬಗೆಯ ಮಾವಿನ ಹಣ್ಣುಗಳು ಮತ್ತು ಕಾಡು ಮಾವಿನ ಹಣ್ಣಿನ ಪ್ರದರ್ಶನ ಇರಲಿದೆ. ಇದೆಲ್ಲ ಈ ಭಾಗಿ ಮೇಳದಲ್ಲಿ ವಿಶೇಷವಾಗಿರಲಿದೆ ಎಂದು ಸುಹಾಸ್ ಮರಿಕೆ ಹೇಳಿದರು.

ಮುಳಿಯ ಮ್ಯಾನೇಜ್ ಫಾರ್ಮ್ ಲ್ಯಾಂಡ್‌ನ ಪ್ರತಿನಿಧಿ ರಜತ್ ಅವರು ಮಾತನಾಡಿ 8 ರಿಂದ 14 ಸೆಂಟ್ಸ್ ಜಾಗದಲ್ಲೂ ಹಣ್ಣಿನ ಗಿಡ ನಡುವ ಮೂಲಕ ಹಣ್ಣು ಬೆಳೆಸಬಹುದು. ನಮ್ಮ ಸಂಸ್ಥೆಯಿಂದಲೇ ಇದರ ನಿರ್ವಾಹಣೆ ಇರುತ್ತದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಮುಳಿಯ ಮ್ಯಾನೇಜ್ ಫಾರ್ಮ್ ಲ್ಯಾಂಡ್‌ನ ಪ್ರತಿನಿಧಿ ರಜತ್,ನವತೇಜ ಟ್ರಸ್ಟ್‌ನ ಟ್ರಸ್ಟಿ ಮತ್ತು ನವನೀತ ನರ್ಸರಿಯ ಮಾಲಕ ವೇಣುಗೋಪಾಲ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!