ವಿಜಯಪುರದ ಪಾನ್ ಶಾಪ್ ನಲ್ಲಿ ನಿಗೂಢ ಸ್ಪೋಟ ಸಂಭವಿಸಿದೆ.ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.ರವಿಕಿರಣ ಎಂಬುವವರಿಗೆ ಸೇರಿದ ಶೆಡ್ ಮಾದರಿಯ ಪಾನ್ ಶಾಪ್ ಇದಾಗಿದೆ.
ಪಾನ್ ಶಾಪ್ ಒಳಗಿದ್ದ ಪ್ರಿಡ್ಜ್ ಗೆ ಯಾವುದೇ ಹಾನಿಯಾಗಿಲ್ಲ.ಹೊರಗಡೆಯಿಂದ ಸ್ಪೋಟವಾಗಿರಬಹುದಾದ ಶಂಕೆಯ ಹಿನ್ನೆಲೆಯಲ್ಲಿ
ಸ್ಥಳಕ್ಕೆ ಬಬಲೇಶ್ವರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ದಳ, ಸೊಕೋ ತಂಡ ಶ್ವಾನದಳದಿಂದ ಸ್ಥಳ ಪರೀಕ್ಷೆ ನಡೆದಿದೆ.ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ.ತನಿಖೆಯ ಬಳಿಕವೇ ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬರಲಿದೆ.