ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಆರೈಕೆ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಕೆಲವು ಕಡೆ ಸರ್ಕಾರಿ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ.. ಕೆಲವು ಆಸ್ಪತ್ರೆಗಳಲ್ಲಿ ಸರಿಯಾದ ಆರೈಕೆ ಇಲ್ಲದೆ ಬಡ ರೋಗಿಗಳು ಪರದಾಡುವಂತಾಗಿದೆ.. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ತಮ್ಮ ಜೀವವನ್ನೇ ಕಳೆದುಕೊಂಡ ಕೆಲವು ಘಟನೆಗಳು ಕೂಡ ತಮ್ಮ ಕಣ್ಣೆದುರು ಇದೇ.. ಹಾಗೂ ಬಡ ಜನಾಂಗದವರಿಗೆ ದುಬಾರಿ ಹಣ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಷ್ಟು ಸಾಮರ್ಥ್ಯ ಇರುವುದಿಲ್ಲ… ಆದ್ದರಿಂದ ಸರ್ಕಾರಿ ಆಸ್ಪತ್ರೆ ನಿರ್ವಹಣೆ ಸರಿಯಾಗಿ ಮಾಡಿ ಬಡ ಜನರಿಗೆ ಸರಿಯಾದ ಚಿಕಿತ್ಸೆ ನೀದೇಬೇಕೆಂದು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಆಕ್ರೋಶ ವ್ಯಕ್ತ ಪಡಿಸಿದ್ದಾರೆ..
ಉಡುಪಿ ಜಿಲ್ಲೆಯಲ್ಲಿ ಸುಮಾರು 5 ತಾಲೂಕುಗಳನ್ನು ಒಳಗೊಂಡ ಒಂದು ಜಿಲ್ಲೆಯಗಿದ್ದು ಉಡುಪಿಯಲ್ಲಿ ಒಂದು ಸರಿಯಾದ ಸರ್ಕಾರಿ ಆಸ್ಪತ್ರೆ ನಿರ್ವಹಣೆ ಇಲ್ಲದ್ದು ನಮಗೆಲ್ಲರಿಗೂ ಗೊತ್ತಿದ್ದ ವಿಷಯ.. ಸುಮಾರು 5-6 ವರ್ಷಗಳಿಂದ ಹೊಸ ಜಿಲ್ಲಾಸ್ಪತ್ರೆ ಆಗದೆ ಜನರು ಆ ಹಳೆಯ ಕಟ್ಟಡದಲ್ಲೇ ಚಿಕಿತ್ಸೆ ಪಡೆಯುವಂತಾಗಿದೆ…ಜನರು ಚಿಕಿತ್ಸೆ ಪಾಡೆಯಲು ಹೋದ ಸಂದರ್ಭದಲ್ಲಿ ಜನರು ಅಲ್ಲಿಯ ವ್ಯವಸ್ಥೆ ನೋಡಿ ಬೇಸತ್ತು ಹೋಗಿದ್ದಾರೆ.. ಹೊಸ ಕಟ್ಟಡಕ್ಕೆ ಯಾವಾಗ ಒಳ್ಳೆಯ ದಿನ ಬರುತ್ತದೆ ಎಂದು ಕಾದು ನೋಡಬೇಕಾಗಿದೆ.. ಉಡುಪಿ ಜಿಲ್ಲೆ ದೊಡ್ಡ ಜಿಲ್ಲೆಯಗಿದ್ದು ಏನಾದರೂ ತುರ್ತು ಚಿಕಿತ್ಸೆ ಬೇಕಿದ್ದರೆ ನಮ್ಮ ಜಿಲ್ಲೆಯಲ್ಲಿ ಸಿಗದಿದ್ದರೆ ಮಂಗಳೂರು ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಗೆ ತೆರಳುವ ಪರಿಸ್ಥಿತಿ ಬಂದಿದೆ.. ಹಾಗಾದರೆ ಇಷ್ಟು ಕೋಟಿ ಹಣ ಹಾಕಿ ಮಾಡಿದ ಆಸ್ಪತ್ರೆ ಯಾಕೆ ಇನ್ನು ಸೇವೆ ಆರಂಭಿಸಲಿಲ್ಲ… ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದೆ… ಸರಿಯಾದ ಸ್ಪಂದನೆ ಇಲ್ಲ.. ರೋಗಿಗಳು ದಾಖಲೆ ಆದರೆ ಸರಿಯಾದ ವ್ಯವಸ್ಥೆ ಸಿಗುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ..