ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ.) , ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ.) ಹಾಗೂ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ವಸತಿ ಸಹಿತ ಚಟುವಟಿಕೆ ಆಧಾರಿತ ‘ಪ್ರಗತಿ ಸ್ಪೂರ್ತಿ ಮತ್ತು ಉನ್ನತಿ–2026’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ 2 ನೆಯ ದಿನದಂದು (26-06-2026) ನವದೆಹಲಿ ಕೇಂದ್ರ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಂಚಾಲಕ, ಹೆಸರಾಂತ ಕೊಂಕಣಿ ಸಾಹಿತಿ , ಕವಿತಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಹಾಗೂ ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿ ಶ್ರೀ ಮೆಲ್ವಿನ್ ರೊಡ್ರಿಗಸ್ ಇವರು ನಮ್ಮ ಮನಸ್ಸಿನಲ್ಲಿ ಮೂಡೂವ ವಿಚಾರಗಳನ್ನು ಅಳವಡಿಸಿ ಹೇಗೆ ಕವಿತೆಗಳ ರಚನೆ ಮಾಡಿ ವಾಚಿಸಬೇಕು ಎಂಬುವುದರ ಬಗ್ಗೆ, ತಮ್ಮ ಜೀವನದಲ್ಲಿ ಜರುಗಿದ ಘಟನೆಗಳ ಉದಾಹರಣೆಗಳನ್ನು ನೀಡುತ್ತಾ ಶಿಬಿರಾರ್ಥಿಗಳೊಂದಿಗೆ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಸೃಜನಶೀಲತೆಗೆ ಹೊಸ ದಿಕ್ಕನ್ನು ತೋರಿಸುವಂತಹ ಮನಸ್ಸಿನ ಭಾವನೆಗಳಿಗೆ ಜೀವ ತುಂಬುವ ಕಲೆಗಳನ್ನು ಹಾಗೂ ಕಲ್ಪನೆ, ಅನುಭವ ಮತ್ತು ಅಭಿವ್ಯಕ್ತಿಯನ್ನು ಸುಂದರ ಕಾವ್ಯವಾಗಿ ರೂಪಿಸುವ ಸಾಮರ್ಥ್ಯವನ್ನು ತಿಳಿಸಿದರು.
ನಮ್ಮೊಳಗಿನ ಕವಿಯನ್ನು ಜಾಗೃತಗೊಳಿಸಿ ಪದಗಳ ಮೂಲಕ ಹೊಸ ಲೋಕವನ್ನು ಸೃಸ್ಟಿಸಿ ಆ ಸಂಭ್ರಮವನ್ನು ಅನುಭವಿಸುವ ಕಾವ್ಯದ ಸುಂದರ ಪಯಣವನ್ನು ಮನ ಮುಟ್ಟುವಂತೆ ವಿವರಿಸಿದರು. ಒಂದು ಉತ್ತಮ ಕವಿತೆ ಸಾವಿರ ಮಾತುಗಳಿಗಿಂತ ಹೆಚ್ಚು ಹೃದಯವನ್ನು ಸ್ಪರ್ಷಿಸುತ್ತದೆ. ಆದ್ದರಿಂದ ಗದ್ಯಗಳಿಂದ ಸಂಕುಚಿತಗೊಳಿಸಿ ಮನಸ್ಸಿನ ಭಾವಗಳೊಂದಿಗೆ ಹೃದಯ ಗೆಲ್ಲುವ ಸಾಲುಗಳಂತೆ ಕವಿತೆಯನ್ನು ರಚಿಸಿ ವಾಚಿಸುವಂತೆ ಶಿಬಿರಾರ್ಥಿಗಳನ್ನು ಪ್ರೇರೇಪಿಸಿದರು.
ಈ ಸಂಧರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ಸಿ ಎ ನಂದಗೋಪಾಲ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ. ರಮೇಶ ನಾಯಕ್ ಮೈರಾ, ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ, ಸುಚಿತ್ರಾ ರಮೇಶ್ ನಾಯಕ್, ಡಾ. ವಿಜಯಲಕ್ಶ್ಮಿ ನಾಯಕ್, ಲಕ್ಷ್ಮಿ ಕಿಣಿ, ರವೀಂದ್ರ ನಾಯಕ್ ಕುಂಟಲ್ಪಾಡಿ, ಮತ್ತು ರಾಮಕೃಷ್ಣ ಪ್ರಭು ಮಾರಿಬೆಟ್ಟು, ಸಂದೀಪ್ ಪ್ರಭು ವಗ್ಗ, ಶಿವರಾಮ ಪ್ರಭು ಮಾರಿಬೆಟ್ಟು ಉಪಸ್ಥಿತರಿದ್ದರು. ಸ್ವಾತಿ ನಾಯಕ್ ಬಂಗ್ಲೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಸಾಧನ್ ಪ್ರಭು ಧನ್ಯವಾದ ಸಮರ್ಪಣೆ ಮಾಡಿದರು.