ಧರ್ಮಸ್ಥಳ, ಜುಲೈ 6: ಸುಂದರ್ ರೈ ಮಂದಾರ ಅವರ ನೇತೃತ್ವದ ಅಮ್ಮ ತಂಡ ಕುಡ್ಲದ ಈ ವರ್ಷದ ನೂತನ ನಾಟಕ ‘ಚಿ. ಸೌ. ಸುಮಂಗಲ’ ಇದರ ಶುಭ ಮುಹೂರ್ತವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ದಿವ್ಯ ಹಸ್ತದಲ್ಲಿ ನೆರವೇರಿತು.
ಖ್ಯಾತ ರಂಗಕಲಾವಿದ ದೀಪಕ್ ರೈ ಪಾಣಾಜೆ ಅಭಿನಯಿಸುತ್ತಿರುವ ಈ ನಾಟಕದ ರಚನೆ ಸೋಮನಾಥ ಶೆಟ್ಟಿ ಮಂಗಲ್ಪಾಡಿ ಅವರದು. ನಾಟಕಕ್ಕೆ ಶ್ರೇಯಸ್ ಕಲ್ಲಡ್ಕ ಸಂಗೀತ ಸಂಯೋಜನೆ ನೀಡಿದ್ದು, ವಿಭಿನ್ನ ಕಥಾಹಂದರ ಹಾಗೂ ಸಂಗೀತದ ಮೂಲಕ ಪ್ರೇಕ್ಷಕರನ್ನು ರಂಜಿಸುವ ನಿರೀಕ್ಷೆ ಮೂಡಿಸಿದೆ.


ಮುಹೂರ್ತ ಸಮಾರಂಭದಲ್ಲಿ ತಂಡದ ಕಲಾವಿದರು, ಹಿತೈಷಿಗಳು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದು, ನಾಟಕ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಅಮ್ಮ ತಂಡ ಕುಡ್ಲದ ಬಹುನಿರೀಕ್ಷಿತ ಈ ನೂತನ ನಾಟಕ ‘ಚಿ. ಸೌ. ಸುಮಂಗಲ’ ಆಗಸ್ಟ್ ತಿಂಗಳಲ್ಲಿ ಪ್ರಥಮ ಪ್ರದರ್ಶನ ಕಾಣಲಿದ್ದು, ಯಕ್ಷರಂಗ ಮತ್ತು ನಾಟಕಾಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ


