ಬಂಟ್ವಾಳ : ನಮ್ಮ ವಠಾರ ಬಂಟ್ವಾಳ 6ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ದಿನಾಂಕ 09/08/2026ನೇ ಆದಿತ್ಯವಾರ ಸಂಜೆ ಮುಗ್ದಾಲ್ ಗುಡ್ಡೆ ಯಲ್ಲಿ ಜರಗಿತು.ಮೊದಲಿಗೆ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ.ಹಲವು ವಠಾರದ ಹಿರಿಯ ಮಾತೆಯರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆ ಗೊಂಡಿತು .ಪುರಾತನ ಸಂಧರ್ಭದಲ್ಲಿ ಆಟಿ ತಿಂಗಳಲ್ಲಿನ ಕೃಷಿ ಪದ್ಧತಿ,ತಿಂಡಿ ತಿನಿಸುಗಳು,ಅನುಭವಿಸಿದ ಕಷ್ಟಗಳು,ಆಟಿ ತಿಂಗಳಿನಲ್ಲಿ ನಡೆಯುವ ಆಚರಣೆಗಳು ಹಾಗೂ ಅಧುನಿಕ ಕಾಲದಲ್ಲಿ ಆದ ಬದಲಾವಣೆಗಳ ಕುರಿತು ಹಲವುವಿಚಾರಗಳಕುರಿತು ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಗಳಾದ ಶಿಕ್ಷಕರಾದ ದಡ್ಡಲಕಾಡು ಶ್ರೀವಿಕ್ರಮ್ ಅವರು ಗಣ್ಯರಾಗಿ ಮಾತನಾಡಿದರು.


ಸಮಾರಂಭದಲ್ಲಿ ಕುಲಾಲ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಸುರೇಶ್ ಕುಲಾಲ್, ಅಕ್ಷಯ ಕ್ಯಾಟರರ್ಸ್ ನ ಮಾಲಕರಾದ ಶ್ರೀ ಮಹಾಬಲ, ಶ್ರೀ ಚಂದ್ರಹಾಸ, ಶ್ರೀಮತಿ ಯಶೋಧ , ಶ್ರೀ ಅಶೋಕ, ಅನ್ನು ಪೂಜಾರಿ,
ಅವರುಗಳು ಈ ಕಾರ್ಯಕ್ರಮವನ್ನು ಪ್ರಾರಂಭಿಸಿ ಕುಟುಂಬಗಳನ್ನು ಒಂದುಗೂಡಿಸಿದ ಶ್ರೀಮತಿ ವಿಜೇತ ಎನ್ ಕೆ ಕುಲಾಲ್, ರತ್ನಾ ಫ್ಯಾಮಿಲಿ ಗೆ ಕೃತಜ್ಞತೆ ಸಲ್ಲಿಸಿ ತಮ್ಮ ಅನುಭವನ್ನು ಹಂಚಿಕೊಂಡರು.

ದಿಶು ಸ್ವಾಗತಿಸಿ, ತನುಶ್ರೀ ವಂದನಾರ್ಪಣೆಗೈದರು.
ಕುಮಾರಿ ಹರ್ಷಿತಾ ಮತ್ತು ನಿತ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ತದನಂತರ ನೃತ್ಯ,ಹಾಡುಗಳು, ತುಳುನಾಡ ರಸಪ್ರಶ್ನೆಗಳು,ಹಲವು ತರದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಲಾಲ ಬಾಂಧವರೆಲ್ಲರೂ ಭಾಗವಹಿಸಿದರು.ನಂತರ ವಠಾರದವರು ತಯಾರು ಮಾಡಿದ ವಿವಿಧ ರೀತಿಯ ಆಟಿದ ತಿನಸ್ ತಿಂಡಿಗಳನ್ನು ವಿತರಿಸಲಾಯಿತು.ಗುರು , ತಿಲಕ್ ಮತ್ತು ಉದಯ್ ಕಾರ್ಯಕ್ರಮವನ್ನು ನಿರ್ವಹಿಸಿದರು.



