16 ಗ್ರಾಂ MDMA ಮಾದಕ ವಸ್ತು ವಶ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ದಿನಾಂಕ:29.09.2026 ರಂದು ಕಾವೂರು ಪೊಲೀಸ್ ಠಾಣೆಯ ಪೊಲೀಸರು ಮರಕಡ ಗ್ರಾಮದ ಬೊಂದೇಲ್‌ನಿಂದ ಮೂಡುಶೆಡ್ಡೆ ಕಡೆಗೆ ಹೋಗುವ ಡಾಮಾರು ರಸ್ತೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಮೊಹಮ್ಮದ್ ಇರ್ಫಾನ್ ಎ.ಕೆ, (26) ತಂದೆ: ಎ.ಕೆ. ಖಾಸಿಂ, ವಾಸ: ರುಕ್ಷಾನ ಮಂಜೀಲ್, ಯು.ಜಿ. ಗೇಟ್, ಅಜ್ಜಿನಡ್ಕ ಗ್ರಾಮ, ಕೊಟೇಕಾರ್ ಅಂಚೆ, ಕೆ.ಸಿ. ರೋಡ್, ಉಳ್ಳಾಲ, ಮಂಗಳೂರು ಎಂಬುದು ತಿಳಿದು ಬಂದಿರುತ್ತದೆ. ಆತನ ವಶದಲ್ಲಿದ್ದ ಸುಮಾರು 16 ಗ್ರಾಂ ತೂಕದ ಒಆಒಂ ಮಾದಕ ವಸ್ತುವನ್ನು ಕಾನೂನು ಬದ್ಧವಾಗಿ ವಶಪಡಿಸಿಕೊಳ್ಳಲಾಗಿದ್ದು, ಸದರಿ ಒಆಒಂ ಮಾದಕ ವಸ್ತುವಿನ ಅಂದಾಜು ಮೌಲ್ಯವು ಸುಮಾರು ರೂ.1,60,000/- ಆಗಿರುತ್ತದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.128/2026 ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.


ಆಪಾದಿತನ ವಿರುದ್ದ ಈ ಹಿಂದೆ ದಾಖಲಾದ ಪ್ರಕರಣಗಳು
1) ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 02/2020 ರಂತೆ ರಾತ್ರಿ ಕಳ್ಳತನ
2) ಪುಂಜಾಲ ಕಟ್ಟೆ ಪೊಲೀಸ್ ಠಾಣಾ 79/2020 ರಂತೆ ರಾತ್ರಿ ಕಳ್ಳತನ
3) ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 25/2024 ರಂತೆ ಗಾಂಜಾ ಸೇವನೆ

SHARE
Loading spinner

Leave a Reply

Your email address will not be published. Required fields are marked *

error: Content is protected !!