ಪುತ್ತೂರು : AIKMCC ಕೇಂದ್ರ ಸಮಿತಿ, ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿಯ ವತಿಯಿಂದ OPPAM ಸುರಕ್ಷಾ ಯೋಜನೆಯಡಿ ಇತ್ತೀಚೆಗೆ ನಿಧನರಾದ ನಮ್ಮ ಸಹೋದರ ಅರ್ಷದ್ ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನವನ್ನು ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ AIKMCC ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ M. K. ನೌಶಾದ್ ಅವರು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು, AIKMCC OPPAM ಸುರಕ್ಷಾ ಯೋಜನೆಯ ಉದ್ದೇಶ, ಸದಸ್ಯತ್ವದ ಮಹತ್ವ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಸದಸ್ಯರ ಕುಟುಂಬಗಳಿಗೆ ಯೋಜನೆಯ ಮೂಲಕ ದೊರೆಯುವ ಆರ್ಥಿಕ ನೆರವಿನ ಕುರಿತು ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಅರ್ಷದ್ ಅವರ ಕಬರ್ಗೆ ಭೇಟಿ ನೀಡಿ ಮಯ್ಯಿತ್ಗಾಗಿ ದುಆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಲ್ಲೇಗ ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಹಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ AIKMCC ರಾಷ್ಟ್ರೀಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ನಾಸರ್ V. K., ಯಶವಂತಪುರ ಏರಿಯಾ ಸಮಿತಿ ಅಧ್ಯಕ್ಷ ಅರ್ಷದ್ V. C., ಪ್ರಧಾನ ಕಾರ್ಯದರ್ಶಿ ಮಹ್ ಮೂದ್ K., ಖಜಾಂಚಿ ಫೈಝಲ್ , ದಕ್ಷಿಣ ಕನ್ನಡ, AIKMCC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಫ್ಹಾಂ ಅಲಿ ತಂಗಳ್ , ಜಿಲ್ಲಾ ಖಜಾಂಚಿ ಇಬ್ರಾಹಿಂ ಹಾಜಿ , ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹನೀಫ್ ನಂದಿನಿ ಹಾಗೂ ಹನೀಫ್ ಮುಕ್ವೆ ಉಪಸ್ಥಿತರಿದ್ದರು.

ಅದೇ ರೀತಿ ಸುಳ್ಯ ಏರಿಯಾ ಸಮಿತಿ ಅಧ್ಯಕ್ಷ Er. ಖಲಂದರ್ ಎಲಿಮಲೆ , ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಹಾಗೂ ಪುತ್ತೂರು ಏರಿಯಾ ಸಮಿತಿ ಅಧ್ಯಕ್ಷ ಅಬೂಬಕರ್ ನಸೀಬ್ , ಪ್ರಧಾನ ಕಾರ್ಯದರ್ಶಿ ಹನೀಫ್ ಮಧುರ , ಖಜಾಂಚಿ ಅಬ್ದುಲ್ ಅಝೀಝ್ ಹಾಜಿ , ವರ್ಕಿಂಗ್ ಸೆಕ್ರೆಟರಿ ಯೂಸುಫ್ ಸಾಲ್ಮರ , ಮಾಧ್ಯಮ ಕಾರ್ಯದರ್ಶಿ ರಫೀಕ್ ಬೆಟ್ಟoಪಾಡಿ ಸೇರಿದಂತೆ ಸಮಿತಿಯ ಸದಸ್ಯರಾದ ಹನೀಫ್ ಹಾಜಿ ಉದಯ , AG ಯೂಸುಫ್ , ನಿಜಾಮ್ ಮುಕ್ವೆ , C. K. ಹಸೈನಾರ್ , ಪೈಚರ್ ಹಮೀದ್ , ಝುಬೈರ್ MD, ಸಿರಾಜ್ C. K., ಸಿನ್ಸಾರ್ ಮುರ ಹಾಗೂ ಪತ್ರಕರ್ತರಾದ ಶೇಖ್ ಜೈನುದ್ದೀನ್ ಮತ್ತು ಯೂಸುಫ್ ರೆಂಜಲಾಡಿ ಭಾಗವಹಿಸಿದ್ದರು.
ಸಂಕಷ್ಟದ ಸಂದರ್ಭದಲ್ಲಿ ಸದಸ್ಯರ ಕುಟುಂಬದೊಂದಿಗೆ ನಿಲ್ಲುವುದು ಮತ್ತು ಅವರಿಗೆ ಅಗತ್ಯವಾದ ನೆರವು ಒದಗಿಸುವುದು OPPAM ಸುರಕ್ಷಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇಂತಹ ಯೋಜನೆಗಳು ಸದಸ್ಯತ್ವದ ಮೂಲಕ ಪರಸ್ಪರ ಸಹಕಾರ ಮತ್ತು ಸಾಮಾಜಿಕ ಭದ್ರತೆಯ ಮಹತ್ವವನ್ನು ಮತ್ತಷ್ಟು ಬಲಪಡಿಸುತ್ತವೆ.

